ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ: ವಿಶ್ವದಲ್ಲೇ ಅಪರೂಪದ ಹೆಗ್ಗಳಿಕೆಯತ್ತ ಭಾರತ

|
Google Oneindia Kannada News

ವಿಶ್ವದ ಸಕ್ರಿಯ ಕೊರೊನಾ ಪ್ರಕರಣದಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದರೂ, ಲಸಿಕೆ ವಿತರಣೆ ಮತ್ತು ತಯಾರಿಕೆಯಲ್ಲಿ ವಿಶ್ವದ ಇತರ ದೇಶಗಳಿಗಿಂತ ಭಾರೀ ಮುಂದೆ ಇದೆ.

ಭಾರತದಲ್ಲಿ ಉತ್ಪಾದಿಸಲಾಗುತ್ತಿರುವ ಎರಡು ಲಸಿಕೆಗಳಾದ ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಬಗ್ಗೆ ಅಲ್ಲಲ್ಲಿ ಅಪಸ್ವರವಿದ್ದರೂ, ಈ ಎರಡು ಲಸಿಕೆ ನೀಡುವಂತೆ ವಿಶ್ವದ ಹಲವು ರಾಷ್ಟ್ರಗಳು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿವೆ.

ಭಾರತದ ಲಸಿಕೆ ಉತ್ಪಾದನಾ ಸಾಮರ್ಥ್ಯ ಜಗತ್ತಿನ ಅತಿ ದೊಡ್ಡ ಆಸ್ತಿ: ವಿಶ್ವಸಂಸ್ಥೆ ಮುಖ್ಯಸ್ಥ ಗುಟೆರಸ್ಭಾರತದ ಲಸಿಕೆ ಉತ್ಪಾದನಾ ಸಾಮರ್ಥ್ಯ ಜಗತ್ತಿನ ಅತಿ ದೊಡ್ಡ ಆಸ್ತಿ: ವಿಶ್ವಸಂಸ್ಥೆ ಮುಖ್ಯಸ್ಥ ಗುಟೆರಸ್

ವಿಶ್ವ ಆರೋಗ್ಯ ಕೇಂದ್ರ (WHO) ಕೂಡಾ ಭಾರತದ ಲಸಿಕೆ ಅಭಿಯಾನವನ್ನು ಮುಕ್ತಕಂಠದಿಂದ ಹೊಗಳುತ್ತಿದೆ. ಭಾರತದ ಲಸಿಕೆ ಉತ್ಪಾದನಾ ಸಾಮರ್ಥ್ಯ ವಿಶ್ವದ ಬಹುದೊಡ್ಡ ಆಸ್ತಿ ಎಂದು ವಿಶ್ವಸಂಸ್ಥೆ ಕೂಡಾ ಗುಣಗಾನ ಮಾಡಿದೆ.

ಹಲವು ದೇಶಗಳಿಗೆ ಮೊದಲ ಸುತ್ತಿನಲ್ಲಿ ಕೋಟ್ಯಾಂತರ ಲಸಿಕೆಯನ್ನು ಈಗಾಗಲೇ ಭಾರತ ಕಳುಹಿಸಿದ್ದು, ಸುಮಾರು ಅರವತ್ತು ರಾಷ್ಟ್ರಗಳು ಲಸಿಕೆಗಾಗಿ ಬೇಡಿಕೆಯನ್ನು ಇಟ್ಟಿದೆ. ಹೀಗಾಗಿ, ಲಸಿಕೆ ಉತ್ಪಾದನೆಯಲ್ಲಿ ಅಪರೂಪದ ಹೆಗ್ಗಳಿಕೆಯತ್ತ ಭಾರತ ಸಾಗುತ್ತಿದೆ.

ಕೇಂದ್ರ ಬಜೆಟ್ 2021: ಇದು ಕೋವಿಡ್ ವಿರುದ್ಧ ಹೋರಾಡುವ ಭಾರತದ ಬದ್ಧತೆ: WHO ನಿರ್ದೇಶಕಿಕೇಂದ್ರ ಬಜೆಟ್ 2021: ಇದು ಕೋವಿಡ್ ವಿರುದ್ಧ ಹೋರಾಡುವ ಭಾರತದ ಬದ್ಧತೆ: WHO ನಿರ್ದೇಶಕಿ

ವಿಶ್ವಸಂಸ್ಥೆಯ ಮಕ್ಕಳ ತುರ್ತು ನಿಧಿ (ಯೂನಿಸೆಫ್)

ವಿಶ್ವಸಂಸ್ಥೆಯ ಮಕ್ಕಳ ತುರ್ತು ನಿಧಿ (ಯೂನಿಸೆಫ್)

ವಿಶ್ವದ ಒಟ್ಟಾರೆ ಜನಸಂಖ್ಯೆಯ ಶೇ. 20ರಷ್ಟಿರುವ ಅರವತ್ತು ದೇಶಗಳು ಲಸಿಕೆ ನೀಡುವಂತೆ ಭಾರತಕ್ಕೆ ಮನವಿ ಸಲ್ಲಿಸಿದೆ. ಇದಕ್ಕೆ ಸ್ಪಂದಿಸಿರುವ ಕೇಂದ್ರ ಆರೋಗ್ಯ ಇಲಾಖೆ ಮಾರ್ಚ್ ಅಂತ್ಯದೊಳಗೆ ಲಸಿಕೆ ಪೂರೈಸುವ ಭರವಸೆಯನ್ನು ನೀಡಿದೆ. ಇದರ ಜೊತೆಗೆ, ವಿಶ್ವಸಂಸ್ಥೆಯ ಮಕ್ಕಳ ತುರ್ತು ನಿಧಿಗೆ (ಯೂನಿಸೆಫ್) ಕೂಡಾ ಲಸಿಕೆ ನೀಡುವುದಾಗಿ ಹೇಳಿದೆ.

ಬ್ರೆಜಿಲ್ ಪ್ರಧಾನಿ ಜೇರ್ ಬೊಲ್ಸೊನೊರೋ

ಬ್ರೆಜಿಲ್ ಮತ್ತು ಮೊರೊಕ್ಕೋ ದೇಶಕ್ಕೆ ಈಗಾಗಾಲೇ ಲಸಿಕೆ ಪೂರೈಕೆಯಾಗಿದೆ. ಬ್ರೆಜಿಲ್ ಪ್ರಧಾನಿ ಜೇರ್ ಬೊಲ್ಸೊನೊರೋ ಆಂಜನೇಯ ಸಂಜೀವಿನಿ ಪರ್ವತವನ್ನು ಹೊತ್ತು ತರುವ ಫೋಟೋ ಹಾಕಿ ಭಾರತಕ್ಕೆ ಧನ್ಯವಾದ ತಿಳಿಸಿದ್ದರು. ಆರೋಗ್ಯ ಕ್ಷೇತ್ರದಲ್ಲಿ ನಮ್ಮ ಸಹಕಾರ ಇದ್ದೇ ಇರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.

ಕೋವಿಶೀಲ್ಡ್ ಲಸಿಕೆ

ಕೋವಿಶೀಲ್ಡ್ ಲಸಿಕೆ

ಆಕ್ಸ್ ಫರ್ಡ್ ಮತ್ತು ಅಸ್ಟ್ರಾಜೆನಿಕಾ ಜಂಟಿಯಾಗಿ ಅಭಿವೃದ್ದಿ ಪಡಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ವಿಶ್ವದ ಹಲವು ರಾಷ್ಟ್ರಗಳಿಗೆ ಭಾರತ ಪೂರೈಸುವ ಮೂಲಕ ಪ್ರಪಂಚಕ್ಕೇ ಲಸಿಕೆ ಮಳಿಗೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ. "ಜಗತ್ತು ಇಂದು ಹೊಂದಿರುವ ಅತ್ಯುತ್ತಮ ಆಸ್ತಿ ಎಂದರೆ ಭಾರತದಲ್ಲಿನ ಲಸಿಕೆ ಉತ್ಪಾದನಾ ಸಾಮರ್ಥ್ಯ. ಜಗತ್ತು ಇದನ್ನು ಅರ್ಥ ಮಾಡಿಕೊಂಡು ಸಂಪೂರ್ಣವಾಗಿ ಬಳಸಿಕೊಳ್ಳುವ ವಿಶ್ವಾಸ ಹೊಂದಿದ್ದೇನೆ" ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಹೇಳಿದ್ದಾರೆ.

ಕೋವಿಡ್ ವಿರುದ್ದದ ಹೋರಾಟದಲ್ಲಿ ಮುಖ್ಯ ಭೂಮಿಕೆಯಲ್ಲಿ ಭಾರತ

ಕೋವಿಡ್ ವಿರುದ್ದದ ಹೋರಾಟದಲ್ಲಿ ಮುಖ್ಯ ಭೂಮಿಕೆಯಲ್ಲಿ ಭಾರತ

ದಕ್ಷಿಣ ಆಫ್ರಿಕಾ, ಕೀನ್ಯಾ, ಕಾಂಬೋಡಿಯಾ, ನೇಪಾಳ, ಉಕ್ರೇನ್, ಉಜ್ಬೇಕಿಸ್ಥಾನ್, ಮಂಗೋಲಿಯಾ, ಬಾಂಗ್ಲಾದೇಶ, ಫಿಲಿಫೇನ್ಸ್ ಸೇರಿದಂತೆ ಅರವತ್ತು ದೇಶಗಳಿಗೆ ಕೋವಿಶೀಲ್ಡ್ ಲಸಿಕೆಯನ್ನು ಭಾರತ ಪೂರೈಸಬೇಕಾಗಿದೆ. ಒಟ್ಟಿನಲ್ಲಿ, ಮಾರ್ಚ್ ಅಂತ್ಯದೊಳಗೆ ಎಂಟು ಕೋಟಿ ಲಸಿಕೆಯನ್ನು ವಿತರಿಸುವ ಗುರಿಯನ್ನು ಭಾರತ ಹೊಂದುವ ಮೂಲಕ, ಕೋವಿಡ್ ವಿರುದ್ದದ ಹೋರಾಟದಲ್ಲಿ ಮುಖ್ಯ ಭೂಮಿಕೆಯನ್ನು ನಿಭಾಯಿಸುತ್ತಿದೆ.

English summary
India To Supply Three Crore Covid Vaccine To Sixty Countries By March 2021,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X