ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲೇ 300 ಮಿಲಿಯನ್ ಡೋಸ್ ಸ್ಪುಟ್ನಿಕ್ ವಿ ಲಸಿಕೆ ತಯಾರಿ

|
Google Oneindia Kannada News

ನವದೆಹಲಿ, ಡಿಸೆಂಬರ್ 18: ಈಚೆಗೆ ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿರುವ ಸ್ಪುಟ್ನಿಕ್ ವಿ ಲಸಿಕೆಯ ಮಾದರಿಯನ್ನು ರಷ್ಯಾ ಪರೀಕ್ಷೆಗೆ ಒಳಪಡಿಸಿದೆ. ಈ ಪರೀಕ್ಷಾ ಹಂತಗಳು ಪೂರ್ಣಗೊಂಡು ಯಶಸ್ವಿಯಾದರೆ, ಭಾರತವು ಮುಂದಿನ ವರ್ಷ ಮುನ್ನೂರು ಮಿಲಿಯನ್ ಡೋಸ್ ಗಳ ಸ್ಪುಟ್ನಿಕ್ ವಿ ಲಸಿಕೆಯನ್ನು ತಯಾರಿಸಲಿದೆ ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.

"ಸದ್ಯಕ್ಕೆ ಭಾರತದಲ್ಲಿ ನಾಲ್ಕು ಲಸಿಕಾ ಉತ್ಪಾದಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಆ ಒಪ್ಪಂದದಂತೆ ಮುಂದಿನ ವರ್ಷದಲ್ಲಿ ಭಾರತ ನಮಗೆ ಮುನ್ನೂರು ಮಿಲಿಯನ್ ಅಥವಾ ಅದಕ್ಕಿಂತ ಹೆಚ್ಚಿನ ಡೋಸ್ ಗಳ ಲಸಿಕೆ ತಯಾರಿಸಿ ಕೊಡಲಿದೆ" ಎಂದು ರಷ್ಯಾದ ನೇರ ಹೂಡಿಕೆ ನಿಧಿಯ ಮುಖ್ಯಸ್ಥ ಡಿಮಿಟ್ರೀವ್ ಮಾಹಿತಿ ನೀಡಿದ್ದಾರೆ.

ಫ್ರೀ ಆಗಿ ಕೊಟ್ಟರು ರಷ್ಯಾದ 'ಸ್ಪುಟ್ನಿಕ್ ವಿ' ಕೊರೊನಾ ಲಸಿಕೆ ತೆಗೆದುಕೊಳ್ಳುವವರು ಕಡಿಮೆ: ಸಮೀಕ್ಷೆಫ್ರೀ ಆಗಿ ಕೊಟ್ಟರು ರಷ್ಯಾದ 'ಸ್ಪುಟ್ನಿಕ್ ವಿ' ಕೊರೊನಾ ಲಸಿಕೆ ತೆಗೆದುಕೊಳ್ಳುವವರು ಕಡಿಮೆ: ಸಮೀಕ್ಷೆ

ಭಾರತ ವಿಶ್ವದ ಅತಿ ದೊಡ್ಡ ಲಸಿಕಾ ಉತ್ಪಾದಕ ರಾಷ್ಟ್ರವಾಗಲಿದೆ. ಹಾಗೆಯೇ ಇಲ್ಲಿನ ವೈದ್ಯಕೀಯ ಸಾಮರ್ಥ್ಯ ಹೆಚ್ಚಿದ್ದು, ಕೋವಿಡ್ 19 ಲಸಿಕೆಗೆ ವಿಶ್ವವೇ ಎದುರು ನೋಡುತ್ತಿರುವ ಈ ಹೊತ್ತಿನಲ್ಲಿ ಹೂಡಿಕೆಯೂ ಹೆಚ್ಚಾಗಲಿದೆ" ಎಂದು ತಿಳಿಸಿದ್ದಾರೆ. ಹೆಟೆರೊ ಬಯೋಫಾರ್ಮಾ ಈಗಾಗಲೇ ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ನೂರು ಮಿಲಿಯನ್ ಡೋಸ್ ಗಳಿಗೂ ಹೆಚ್ಚಿನ ಸ್ಪುಟ್ನಿಕ್ ವಿ ಲಸಿಕೆಗಳನ್ನು ತಯಾರಿಸಿಕೊಡುವುದಾಗಿ ತಿಳಿಸಿದೆ.

India To Prepare 300 Million Dose Of Sputnik V Vaccine Next Year

ಭಾರತದಲ್ಲಿ ಇನ್ನಷ್ಟು ಕಂಪನಿಗಳು ಲಸಿಕಾ ಅಭಿವೃದ್ಧಿಯಲ್ಲಿ ತೊಡಗಿಕೊಂಡಿವೆ. ಈಗಲೇ ಸ್ಪಷ್ಟತೆ ಸಿಗಲು ಸಾಧ್ಯವಿಲ್ಲ. ಇನ್ನಷ್ಟು ವೈದ್ಯಕೀಯ ಪ್ರಯೋಗಗಳು ನಡೆಯಬೇಕಿದೆ ಎಂದಿದ್ದಾರೆ. ಇದೇ ವೇಳೆ, ಮುಂಬರುವ ವಾರಗಳಲ್ಲಿ ತುರ್ತು ಬಳಕೆಗೆ ಕೆಲವು ಲಸಿಕೆಗಳಿಗೆ ಅನುಮೋದನೆ ದೊರೆಯಬಹುದು ಎಂದು ತಿಳಿಸಿದ್ದಾರೆ. ಇದುವರೆಗೂ ಭಾರತ್ ಬಯೋಟೆಕ್, ಆಕ್ಸ್ ಫರ್ಡ್ ಆಸ್ಟ್ರಾಜೆನಿಕಾ, ಫೈಜರ್ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ಕೋರಲಾಗಿದೆ.

English summary
India will produce about 300 million doses of Russia's Sputnik V coronavirus vaccines next year said Russian officials,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X