ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಮೂಲ ವುಹಾನ್ ನಗರಕ್ಕೆ ಭಾರತದಿಂದ ವಿಮಾನ ಸಂಚಾರ ಆರಂಭ

|
Google Oneindia Kannada News

ನವದೆಹಲಿ, ಅಕ್ಟೋಬರ್ 30: ಕೊರೊನಾ ವೈರಸ್ ಸೋಂಕನ್ನು ಇಡೀ ಜಗತ್ತಿಗೆ ಹರಡಿಸಿದ ಸೋಂಕಿನ ಮೂಲವಾದ ಚೀನಾದ ವುಹಾನ್ ನಗರಕ್ಕೆ ಭಾರತವು ವಿಮಾನ ಸಂಚಾರವನ್ನು ಪುನಃ ಆರಂಭಿಸಿದೆ. ಕೊರೊನಾ ವೈರಸ್ ಮೊದಲ ಬಾರಿಗೆ ಕಾಣಿಸಿಕೊಂಡ ವುಹಾನ್ ನಗರವನ್ನು ಸುರಕ್ಷಿತ ಎಂದು ಅಧಿಕೃತವಾಗಿ ಘೋಷಿಸಲಾಗಿದ್ದು, ನಗರಲ್ಲಿ ವಿಧಿಸಲಾಗಿದ್ದ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ.

ವಂದೇ ಭಾರತ್ ಮಿಷನ್ (ವಿಬಿಎನ್) ವಿಮಾನವು ಅಕ್ಟೋಬರ್ 30ರಿಂದ ದೆಹಲಿ-ವುಹಾನ್ ಸಂಚಾರವನ್ನು ಆರಂಭಿಸಲಿದೆ ಎಂದು ಬೀಜಿಂಗ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ತಿಳಿಸಿದೆ. ಚೀನಾದಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಸ್ವದೇಶಕ್ಕೆ ಕರೆತರಲು ಭಾರತವು ಆಯೋಜಿಸುತ್ತಿರುವ ಆರನೇ ವಿಬಿಎಂ ವಿಮಾನ ಇದಾಗಿದೆ.

ನಿಯಮ ಉಲ್ಲಂಘನೆ: ಏರ್ ಇಂಡಿಯಾ ವಿಮಾನದ ಮೇಲೆ ಹಾಂಕಾಂಗ್ ನಿರ್ಬಂಧನಿಯಮ ಉಲ್ಲಂಘನೆ: ಏರ್ ಇಂಡಿಯಾ ವಿಮಾನದ ಮೇಲೆ ಹಾಂಕಾಂಗ್ ನಿರ್ಬಂಧ

ಅಕ್ಟೋಬರ್ 23ರಿಂದ ಆರಂಭವಾಗಬೇಕಿದ್ದ ದೆಹಲಿ-ಗುವಾಂಗ್‌ಝೌ ವಿಮಾನ ಸಂಚಾರ ರದ್ದುಗೊಂಡ ಬಳಿಕ ಏರ್ ಇಂಡಿಯಾ ಸಂಸ್ಥೆಯು ದೆಹಲಿ-ವುಹಾನ್ ವಿಮಾನ ಸಂಚಾರವನ್ನು ಪ್ರಕಟಿಸಿತ್ತು. ವುಹಾನ್‌ನಿಂದ ದೆಹಲಿಗೆ ಮರಳುವ ಜನರು ನಿರ್ದೇಶಿತ ಹೋಟೆಲ್‌ಗಳಲ್ಲಿ 14 ದಿನಗಳ ಕ್ವಾರೆಂಟೈನ್‌ಗೆ ಒಳಗಾಗಬೇಕಿದೆ.

India To Operate First Vande Bharat Flight To Chinas Wuhan

Recommended Video

ಭಾರತದಿಂದ ಕೊರೊನಾ‌ ತವರಿಗೆ ಶುರುವಾಯ್ತು ವಿಮಾನಯಾನ | Oneindia Kannada

ಫೆಬ್ರವರಿಯಲ್ಲಿ ಮಾರಕ ಕೋವಿಡ್ ತೀವ್ರಗೊಂಡಿದ್ದ ಸಂದರ್ಭದಲ್ಲಿ ವುಹಾನ್ ನಗರದಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆದುಕೊಂಡು ಬರಲು ಮೂರು ವಿಮಾನಗಳನ್ನು ರವಾನಿಸಲಾಗಿತ್ತು.

English summary
India has started operating its first Vande Bharat Mission flight to China's Wuhan after Covid 19 restrictions lifted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X