ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ "ಕೋವ್ಯಾಕ್ಸ್‌" ಅಡಿಯಲ್ಲಿ 7.5 ಮಿಲಿಯನ್ ಡೋಸ್ ಮಾಡೆರ್ನಾ ಲಸಿಕೆ ಅನುದಾನ

|
Google Oneindia Kannada News

ನವದೆಹಲಿ, ಜುಲೈ 20: ವಿಶ್ವ ಆರೋಗ್ಯ ಸಂಸ್ಥೆಯ "ವ್ಯಾಕ್ಸಿನ್ ಗ್ಲೋಬಲ್ ಆಕ್ಸೆಸ್- ಕೋವ್ಯಾಕ್ಸ್‌" ಕಾರ್ಯಕ್ರಮದಡಿ ಭಾರತವು 7.5 ಮಿಲಿಯನ್ ಡೋಸ್ ಮಾಡೆರ್ನಾ ಲಸಿಕೆಯನ್ನು ಅನುದಾನವಾಗಿ ಪಡೆದುಕೊಳ್ಳಲಿದೆ.

7.5 ಮಿಲಿಯನ್ ಡೋಸ್ ಮಾಡೆರ್ನಾ ಲಸಿಕೆಯನ್ನು ಭಾರತ ಅನುದಾನವಾಗಿ ಪಡೆದುಕೊಳ್ಳುತ್ತಿರುವುದಾಗಿ ಡಬ್ಲುಎಚ್‌ಒ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕ ಡಾ. ಪೂನಂ ಖೇತ್ರಪಾಲ್ ಸಿಂಗ್ ತಿಳಿಸಿದ್ದಾರೆ.

India To Get 7.5 Million Doses of Moderna Vaccine Through WHOs Covax

ಜೂನ್ 29ರಂದು ಮುಂಬೈನಲ್ಲಿನ ಬಹುರಾಷ್ಟ್ರೀಯ ಔಷಧ ಕಂಪನಿಯಾದ ಸಿಪ್ಲಾ, ಭಾರತದಲ್ಲಿ ನಿರ್ಬಂಧಿತ ತುರ್ತು ಬಳಕೆಗೆ ಮಾಡೆರ್ನಾ ಕೊರೊನಾ ಲಸಿಕೆಯನ್ನು ಆಮದು ಮಾಡಿಕೊಳ್ಳಲು ಭಾರತೀಯ ಔಷಧ ನಿಯಂತ್ರಕ ಸಂಸ್ಥೆಯಿಂದ ಅನುಮೋದನೆ ಪಡೆದುಕೊಂಡಿತ್ತು.

ವಿಶೇಷ ವರದಿ: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಮತ್ತಷ್ಟು ದುಬಾರಿ!ವಿಶೇಷ ವರದಿ: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಮತ್ತಷ್ಟು ದುಬಾರಿ!

ವಿಶ್ವ ಆರೋಗ್ಯ ಸಂಸ್ಥೆಯ ಕೋವ್ಯಾಕ್ಸ್‌ ಕಾರ್ಯಕ್ರಮದಡಿ ಭಾರತಕ್ಕೆ ಕೆಲವು ಡೋಸ್‌ಗಳ ಲಸಿಕೆ ನೀಡಲು ಅಮೆರಿಕ ಸರ್ಕಾರ ಅನುಮತಿ ನೀಡಿರುವುದಾಗಿ ಡಿಸಿಜಿಐಗೆ ಜೂನ್ 27ರಂದು ಮಾಡೆರ್ನಾ ಮಾಹಿತಿ ನೀಡಿತ್ತು. ಈ ಕುರಿತು ಕೇಂದ್ರ ಔಷಧ ನಿಯಂತ್ರಕ ಸಂಸ್ಥೆಯಿಂದ ಅನುಮತಿ ಕೋರಿತ್ತು.

ಈ ನಡುವೆ ಲಸಿಕೆ ಕುರಿತು ಹಲವು ವಿಷಯಗಳ ಬಗ್ಗೆ ಭಾರತ ಸರ್ಕಾರ ಕೊರೊನಾ ಲಸಿಕೆ ತಯಾರಕರಾದ ಮಾಡೆರ್ನಾ ಹಾಗೂ ಫೈಜರ್‌ ಜೊತೆ ಚರ್ಚೆ ನಡೆಸುತ್ತಿದೆ.

English summary
India is likely to get 7.5 million Moderna Covid-19 vaccine doses from the COVAX facility as a grant, the World Health Organisation official said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X