• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತೀಯ ಸೇನೆಯಲ್ಲಿ ಶೀಘ್ರ 5 ಸೇನಾ ಥಿಯೇಟರ್ ಕಮಾಂಡ್ ಶುರು

|

ನವದೆಹಲಿ, ಅಕ್ಟೋಬರ್ 27: ಭಾರತೀಯ ಸೇನೆಯಲ್ಲಿ ಶೀಘ್ರ 5 ಸೇನಾ ಥಿಯೇಟರ್ ಕಮಾಂಡ್ ಲಭ್ಯವಾಗಲಿದೆ. ಚೀನಾ-ಪಾಕಿಸ್ತಾನದಿಂದ ಎದುರಾಗುವ ಅಪಾಯವನ್ನು ಎದುರಿಸಲು ಈ ಸೇಏನಾ ಥಿಯೇಟರ್ ಕಮಾಂಡ್ ಆರಂಭಗೊಳ್ಳಲಿದೆ.

ಈ 5 ಕಮಾಂಡ್ ಮೂಲಕ ಭಾರತ ಚೀನಾ-ಪಾಕಿಸ್ತಾನದಿಂದ ಎದುರಾಗುತ್ತಿರುವ ಅಪಾಯಗಳನ್ನು ಪರಿಣಾಮಕಾರಿಯಾಗಿ ಎದುರಿಸಿ, ಹಿಮ್ಮೆಟ್ಟಿಸಲು ಸಾಧ್ಯವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಚೀನಾ ಗಡಿಯಲ್ಲಿ ಶಸ್ತ್ರಪೂಜೆ ನೆರವೇರಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

5 ಕಮಾಂಡ್ ಗಳ ಪೈಕಿ ಚೀನಾ-ಪಾಕಿಸ್ತಾನಗಳ ಉಪಟಳಗಳ ಮೇಲೆ ನಿಗಾವಹಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿಯೇ ನಿರ್ದಿಷ್ಟ ಕಮಾಂಡ್ ಕೆಲಸ ಮಾಡಲಿದೆ, ಇನ್ನು ಭಯೋತ್ಪಾದನೆ ಹಾಗೂ ಆಂತರಿಕ ಉಪಟಗಳ ಕೇಂದ್ರವಾಗಿರುವ ಜಮ್ಮು-ಕಾಶ್ಮೀರವನ್ನು ನಿರ್ದಿಷ್ಟ ಕಮಾಂಡ್ ನ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದ್ದು ಎಲ್ಒಸಿ ಹಾಗೂ ಅಂತಾರಾಷ್ಟ್ರೀಯ ಗಡಿಗಳನ್ನು ಹೊಂದಿರಲಿದೆ.

ಕ್ಯಾಬಿನೆಟ್ ಒಪ್ಪಿಗೆ ದೊರೆತರೆ ರಕ್ಷಣಾ ವ್ಯವಹಾರಗಳ ಇಲಾಖೆ ಸಹ ಹೆಚ್ಚುವರಿ ಹಾಗೂ ಜಂಟಿ ಕಾರ್ಯದರ್ಶಿಗಳನ್ನು ಹೊಂದಿರಲಿದೆ. ಉತ್ತರ ಕಮಾಂಡ್, ವೆಸ್ಟ್ರನ್ ಕಮಾಂಡ್, ಪೆನಿನ್ಸುಲಾರ್ ಕಮಾಂಡ್, ಏರ್ ಡಿಫೆನ್ಸ್ ಕಮಾಂಡ್, ಮರೈನ್ ಕಮಾಂಡ್ ಗಳು ಶೀಘ್ರವೇ ಅಸ್ತಿತ್ವಕ್ಕೆ ಬರಲಿದೆ ಎಂದು ವರದಿಯೊಂದರಿಂದ ತಿಳಿದುಬಂದಿದೆ.

ಇನ್ನೆಯಷ್ಟೇ ಪಾಕಿಸ್ತಾನ ಮತ್ತು ಚೀನಾ ಜೊತೆ ದೇಶ ಯಾವಾಗ ಯುದ್ಧ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದು ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್‌ ಸಿಂಗ್‌ ಹೇಳಿದ್ದರು.

ಭಾರತ ಮತ್ತು ಚೀನಾ ನಡುವೆ ಗಡಿ ಬಿಕ್ಕಟ್ಟು ಮುಂದುವರೆದಿರುವಾಗಲೇ ಸ್ವತಂತ್ರ ದೇವ್‌ ಈ ಹೇಳಿಕೆ ನೀಡಿರುವುದು ವಿವಾದ ಸೃಷ್ಟಿಸಿದೆ.

ತಮ್ಮ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಆರಂಭ ಮತ್ತು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸಿರುವ ನಿರ್ಧಾರಕ್ಕೆ ಸಮೀಕರಿಸಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.

English summary
The Indian military is expected to be reorganised under five theatre commands by 2022 with defined areas of operation and a seamless command structure for synchronised operations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X