ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ಜತೆಗೆ ಹ್ಯಾಮರ್ ಕ್ಷಿಪಣಿಯನ್ನೂ ಆರ್ಡರ್ ಮಾಡಿದ ಭಾರತ

|
Google Oneindia Kannada News

ನವದೆಹಲಿ, ಜುಲೈ 23: ಭಾರತ ಹಾಗೂ ಚೀನಾ ನಡುವೆ ಇದ್ದ ಸಂಬಂಧ ಈಗಾಗಲೇ ಹಳಸಿದೆ. ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ರಫೇಲ್ ಯುದ್ಧ ವಿಮಾನದ ಜತೆ ಹ್ಯಾಮರ್ ಕ್ಷಿಪಣಿಯನ್ನೂ ಕೂಡ ಭಾರತ ತರಿಸಿಕೊಳ್ಳುತ್ತಿದೆ.

Recommended Video

40 ಸಾವಿರ ಸೈನಿಕರಿಗೆ ಶಸ್ತ್ರಾಸ್ತ್ರ ಕೊಟ್ಟು ಕಳುಹಿಸಿದ ಚೀನಾ | Oneindia Kannada

ಇದರಿಂದ ಭಾರತ-ಚೀನಾ ನಡುವೆ ಯುದ್ಧ ಏರ್ಪಡುವ ಮುನ್ಸೂಚನೆಯೇ ಎಂಬ ಅನುಮಾನವೂ ಕೂಡ ಕಾಡಿದೆ. 60-70 ಕಿ.ಮೀ ದೂರದ ಗುರಿಯನ್ನೂ ಸುಲಭವಾಗಿ ತಲುಪಬಲ್ಲ ಸಾಮರ್ಥ್ಯ ಇರುವ ಹ್ಯಾಮರ್ ಕ್ಷಿಪಣಿಗಳನ್ನು ತುರ್ತಾಗಿ ರಫ್ತು ಮಾಡಲು ಫ್ರಾನ್ಸ್ ಕೂಡ ಒಪ್ಪಿಕೊಂಡಿರುವುದು ಗಮನಾರ್ಹವಾಗಿದೆ.

ವಾಯುಸೇನೆ ಬಲ ಹೆಚ್ಚಿಸಲು ಬರುತ್ತಿದೆ ರಫೇಲ್ ವಿಮಾನ!ವಾಯುಸೇನೆ ಬಲ ಹೆಚ್ಚಿಸಲು ಬರುತ್ತಿದೆ ರಫೇಲ್ ವಿಮಾನ!

ಇದೇ ಜುಲೈ 29(ಬುಧವಾರ)ರಂದು ಫ್ರಾನ್ಸ್‌ನಿಂದ ಮೊದಲ ಹಂತದ ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬರಲಿವೆ. ಚೀನಾ ಗಡಿ ತಕರಾರು ಸಂದರ್ಭದಲ್ಲೇ ರಫೆಲ್ ಯುದ್ಧ ವಿಮಾನ ವಾಯುಸೇನೆ ಬತ್ತಳಿಕೆ ಸೇರಲಿದ್ದು, ಇವುಗಳನ್ನು ಲಡಾಖ್ ಗಡಿಯಲ್ಲಿ ನಿಯೋಜನೆ ಮಾಡಲಾಗುವುದು ಎಂಬ ಮಾತುಗಳು ಕೇಳಿ ಬರುತ್ತಿವೆ.

 India To Equip Rafale Jets With HAMMER Missiles Under Emergency Order

ಇದೇ ಕಾರಣಕ್ಕೆ ರಫೇಲ್ ಜೊತೆ ಜೊತೆಗೆ ಹ್ಯಾಮರ್ ಕ್ಷಿಪಣಿಗಳನ್ನೂ ಆಮದು ಮಾಡುವಂತೆ ಫ್ರಾನ್ಸ್‌ಗೆ ಮನವಿ ಮಾಡಲಾಗಿದ್ದು, ಭಾರತೀಯ ವಾಯುಸೇನೆಯ ಈ ನಿರ್ಧಾರ ತೀವ್ರ ಕುತೂಹಲ ಮೂಡಿಸಿರುವುದಂತೂ ನಿಜ.

ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್ ಸಂಸ್ಥೆ ನಿರ್ಮಿತ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲಾಗುತ್ತಿದೆ. ಈ ಮೂಲಕ ರಷ್ಯಾ ನಿರ್ಮಿತ ಯುದ್ಧ ವಿಮಾನಗಳ ಬಳಕೆ ಕಡಿಮೆಯಾಗಲಿದೆ. ಸರ್ಕಾರ ಅತ್ಯಾಧುನಿಕ ವ್ಯವಸ್ಥೆಯುಳ್ಳ ಯುದ್ಧ ವಿಮಾನಗಳು ಮತ್ತಿತರೆ ಶಸ್ತ್ರಾಸ್ತ್ರಗಳ ಖರೀದಿ ಜಾರಿಯಲ್ಲಿದೆ ಎಂದು ಭಾರತೀಯ ವಾಯು ಸೇನೆ ಹೇಳಿತ್ತು.

ರಫೇಲ್ ಯುದ್ಧ ವಿಮಾನ ಒಪ್ಪಂದಕ್ಕೆ ಸೆಪ್ಟೆಂಬರ್ 23, 2016ರಂದು ಉಭಯ ದೇಶಗಳ ಪ್ರತಿನಿಧಿಗಳು ಸಹಿ ಹಾಕಿದ್ದರು.ಈ ಮಧ್ಯೆ ರಫೆಲ್ ಯುದ್ಧ ವಿಮಾನಗಳ ಜೊತೆಗೆ ಫ್ರಾನ್ಸ್‌ನ ಅತ್ಯಾಧುನಿಕ ಹ್ಯಾಮರ್ ಕ್ಷಿಪಣಿಗಳಿಗೂ ಆರ್ಡರ್ ಮಾಡಲಾಗಿದ್ದು, ಇವುಗಳನ್ನು ರಫೇಲ್ ಯುದ್ಧ ವಿಮಾನಗಳಿಗೆ ಜೋಡಿಸಲಾಗುವುದು ಎನ್ನಲಾಗಿದೆ.

ತುರ್ತು ಸಂದರ್ಭದಲ್ಲಿ ಅಗತ್ಯ ಶಸ್ತ್ರಾಸ್ತ್ರಗಳ ಆಮದಿಗೆ ಒಪ್ಪಂದ ಮಾಡಿಕೊಳ್ಳಲು ಮೋದಿ ಸರ್ಕರ ಸಶಸ್ತ್ರ ಪಡೆಗಳಿಗೆ ಅಧಿಕಾರ ನೀಡಿದ್ದು, ಇದರನ್ವಯ ವಾಯುಸೇನೆ ಹ್ಯಾಮರ್ ಕ್ಷಿಪಣಿಗಳಿಗೆ ಆರ್ಡರ್ ನೀಡಿದೆ.

English summary
With the Rafale jets arriving in the country in the middle of a dispute with China, the Indian Air Force is further boosting the capabilities of the combat aircraft by equipping it with the HAMMER missiles from France.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X