ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ವರ್ಷಗಳಲ್ಲಿ ಹೆದ್ದಾರಿಗಳು ಟೋಲ್ ಪ್ಲಾಜಾ ಮುಕ್ತ: ಜಿಪಿಎಸ್ ವ್ಯವಸ್ಥೆಗೆ ಮುಂದಾದ ಸರ್ಕಾರ

|
Google Oneindia Kannada News

ನವದೆಹಲಿ, ಡಿಸೆಂಬರ್ 18: ಭಾರತವು ಇನ್ನು ಎರಡು ವರ್ಷಗಳ ಒಳಗೆ ಟೋಲ್‌ಬೂತ್ ಮುಕ್ತವಾಗಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಹೊಸ ಜಿಪಿಎಸ್ ಆಧಾರಿಯ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿದ್ದು, ದೇಶದಲ್ಲಿ ಇನ್ನು ಮುಂದೆ ಸುಂಕ ಸಂಗ್ರಹ ಕೇಂದ್ರಗಳ ಅವಶ್ಯಕತೆ ಬರುವುದಿಲ್ಲ.

ದೇಶದಲ್ಲಿ ವಾಹನಗಳ ತಡೆರಹಿತ ಸಂಚಾರಕ್ಕೆ ಅನುಕೂಲವಾಗುವಂತೆ ಹೊಸ ವ್ಯವಸ್ಥೆ ನೆರವಾಗಲಿದೆ. ವಾಹನಗಳ ಚಲನೆ ಆಧಾರದಲ್ಲಿ ಸುಂಕದ ಮೊತ್ತವು ನೇರವಾಗಿ ವಾಹನ ಮಾಲೀಕರ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳಲಿದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಜ.1ರಿಂದ ಫಾಸ್‌ಟ್ಯಾಗ್ ದೇಶದೆಲ್ಲೆಡೆ ಕಡ್ಡಾಯ; ರೀಚಾರ್ಜ್ ಹೇಗೆ?ಜ.1ರಿಂದ ಫಾಸ್‌ಟ್ಯಾಗ್ ದೇಶದೆಲ್ಲೆಡೆ ಕಡ್ಡಾಯ; ರೀಚಾರ್ಜ್ ಹೇಗೆ?

ಅಸೋಚಾಮ್ ಫೌಂಡೇಷನ್ ವೀಕ್‌ನಲ್ಲಿ ಮಾತನಾಡಿದ ಗಡ್ಕರಿ, ಮುಂಬರುವ ಟೋಲ್ ಸಂಗ್ರಹವು ಜಿಪಿಎಸ್ ಆಧಾರಿತವಾಗಿರಲಿದೆ ಎಂದು ತಿಳಿಸಿದ್ದಾರೆ. ರಷ್ಯಾ ಸರ್ಕಾರದ ಸಹಕಾರದೊಂದಿಗೆ ಈ ವ್ಯವಸ್ಥೆಯನ್ನು ಅಳವಡಿಸಲಿದ್ದು, ಮುಂದಿನ ಎರಡು ವರ್ಷಗಳ ಒಳಗೆ ಭಾರತವು ಟೋಲ್ ಪ್ಲಾಜಾ ಮುಕ್ತವಾಗಲಿದೆ ಎಂದಿದ್ದಾರೆ. ಮುಂದೆ ಓದಿ.

ನಿರ್ವಹಣೆ ವೆಚ್ಚ ಇಳಿಕೆ

ನಿರ್ವಹಣೆ ವೆಚ್ಚ ಇಳಿಕೆ

ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯು ಸಂಚಾರ ದಟ್ಟಣೆಯನ್ನು ತಡೆಯುವುದು ಮಾತ್ರವಲ್ಲದೆ, ದೇಶದೆಲ್ಲೆಡೆ ಅಂತಹ ಟೋಲ್ ಪ್ಲಾಜಾಗಳ ನಿರ್ವಹಣೆಗೆ ವ್ಯಯಿಸುವ ವೆಚ್ಚವನ್ನು ಕೂಡ ಉಳಿಸಲಿದೆ. ಜತೆಗೆ ಸರ್ಕಾರದ ಸುಂಕ ಸಂಗ್ರಹ ಆದಾಯವನ್ನು ಗಣನೀಯವಾಗಿ ಹೆಚ್ಚಿಸಲಿದೆ.

ಹಳೆ ವಾಹನಗಳಿಗೂ ಜಿಪಿಎಸ್ ಅಳವಡಿಕೆ

ಹಳೆ ವಾಹನಗಳಿಗೂ ಜಿಪಿಎಸ್ ಅಳವಡಿಕೆ

ಇತ್ತೀಚೆಗೆ ತಯಾರಾಗುತ್ತಿರುವ ಎಲ್ಲಾ ವಾಣಿಜ್ಯ ವಾಹನಗಳು ವೆಹಿಕಲ್ ಟ್ರ್ಯಾಕಿಂಗ್ ವ್ಯವಸ್ಥೆಗಳನ್ನು ಒಳಗೊಳ್ಳುತ್ತಿವೆ. ಈಗ ಎಲ್ಲ ಹಳೆಯ ವಾಹನಗಳಿಗೂ ಜಿಪಿಎಸ್ ತಂತ್ರಜ್ಞಾನವನ್ನು ಅಳವಡಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಆಲೋಚಿಸುತ್ತಿದೆ ಎಂದು ಗಡ್ಕರಿ ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಂಕದ ದರ ಹೆಚ್ಚಳ?: ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಂಕದ ದರ ಹೆಚ್ಚಳ?: ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ

ಸುಂಕ ಸಂಗ್ರಹ 34 ಲಕ್ಷ ಕೋಟಿಗೆ ಏರಿಕೆ

ಸುಂಕ ಸಂಗ್ರಹ 34 ಲಕ್ಷ ಕೋಟಿಗೆ ಏರಿಕೆ

ಹೊಸ ಜಿಪಿಎಸ್ ವ್ಯವಸ್ಥೆ ಆಧಾರಿತ ಪದ್ಧತಿ ಭಾರತದಲ್ಲಿ ಜಾರಿಗೆ ಬಂದ ಬಳಿಕ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸುಂಕ ಸಂಗ್ರಹದ ಮೊತ್ತವು ಐದು ವರ್ಷಗಳಲ್ಲಿ 1.34 ಲಕ್ಷ ಕೋಟಿಗೆ ಏರಿಕೆಯಾಗಲಿದೆ. ಈ ಹಣಕಾಸು ವರ್ಷದಲ್ಲಿ ಟೋಲ್ ಸಂಗ್ರಹದ ಮೊತ್ತವು 34,000 ಕೋಟಿಗೆ ತಲುಪುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಫಾಸ್ಟ್ಯಾಗ್‌ನಿಂದ ಸಂಗ್ರಹ ಹೆಚ್ಚಳ

ಫಾಸ್ಟ್ಯಾಗ್‌ನಿಂದ ಸಂಗ್ರಹ ಹೆಚ್ಚಳ

ಜಿಪಿಎಸ್ ಆಧಾರಿತ ಸುಂಕ ಸಂಗ್ರಹ ವ್ಯವಸ್ಥೆಯು ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆಯನ್ನು ತಗ್ಗಿಸಲು ಇತ್ತೀಚೆಗೆ ಜಾರಿಗೆ ಬಂದ ಫಾಸ್ಟ್ಯಾಗ್ ಆಧಾರಿತ ಸುಂಕ ಸಂಗ್ರಹಕ್ಕೆ ಒತ್ತಾಸೆಯಾಗುವ ನಿರೀಕ್ಷೆಯಿದೆ. ಫಾಸ್ಟ್ಯಾಗ್ ಜಾರಿಯ ಬಳಿಕ ಹೆದ್ದಾರಿಗಳಲ್ಲಿ ಸುಂಕ ಸಂಗ್ರಹ ವ್ಯವಸ್ಥೆ ಪಾರದರ್ಶಕವಾಗಿದ್ದು, ಟೋಲ್ ಸಂಗ್ರಹದ ಆದಾಯದಲ್ಲಿ ಏರಿಕೆಗೆ ಕಾರಣವಾಗಿದೆ.

English summary
Union Minister Nitin Gadkari said India will be Tollbooth free in 2 years as a new GPS based collection system to be implemented across National Highways.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X