ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ-ತಾಲಿಬಾನ್ ಶಾಂತಿ ಒಪ್ಪಂದ: ಭಾರತಕ್ಕೆ ಆಹ್ವಾನ

|
Google Oneindia Kannada News

ನವದೆಹಲಿ, ಫೆಬ್ರವರಿ 29: ತಾಲಿಬಾನ್ ಉಗ್ರರಿಂದ ನಲುಗಿದ್ದ ಅಘ್ಘಾನಿಸ್ತಾನದಲ್ಲಿ ತನ್ನ ಪಡೆಗಳನ್ನು ನಿಯೋಜಿಸಿದ್ದ ಅಮೆರಿಕ 19 ವರ್ಷಗಳ ಬಳಿಕ ಮೊದಲ ಬಾರಿಗೆ ತಾಲಿಬಾನ್ ಜತೆಗೆ ಒಪ್ಪಂದವೊಂದಕ್ಕೆ ಸಹಿ ಹಾಕಲಿದೆ. ಶನಿವಾರ ನಡೆಯುವ ಈ ಮೈಲಿಗಲ್ಲಿನ ಒಪ್ಪಂದಕ್ಕೆ ಭಾರತ ಕೂಡ ಸಾಕ್ಷಿಯಾಗಲಿದೆ.

ಅಮೆರಿಕ ಹಾಗೂ ತಾಲಿಬಾನ್ ನಡುವೆ ಶಾಂತಿ ಒಪ್ಪಂದ ನಡೆಯಲಿದ್ದು, ಭಾರತ ಅದರ ವೀಕ್ಷಕನಾಗಿ ಕಾರ್ಯನಿರ್ವಹಿಸಲಿದೆ. ಕತಾರ್ ರಾಜಧಾನಿ ದೋಹಾದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗುತ್ತಿದೆ. ಈ ಮೂಲಕ ಅಮೆರಿಕವು 9/11ರ ದಾಳಿಯ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದಲ್ಲಿ ನಿಯೋಜಿಸಿದ್ದ ತನ್ನ ಸಾವಿರಾರು ಸೇನಾ ಪಡೆಗಳನ್ನು ಹಿಂದಕ್ಕೆ ಪಡೆದುಕೊಳ್ಳಲಿದೆ.

ಯಾರದ್ದೋ ಯುದ್ಧಕ್ಕಾಗಿ ಅಮೆರಿಕ ನಮ್ಮನ್ನು ಬಳಸಿಕೊಂಡಿತು: ಇಮ್ರಾನ್ ಖಾನ್ಯಾರದ್ದೋ ಯುದ್ಧಕ್ಕಾಗಿ ಅಮೆರಿಕ ನಮ್ಮನ್ನು ಬಳಸಿಕೊಂಡಿತು: ಇಮ್ರಾನ್ ಖಾನ್

ತಾಲಿಬಾನ್ ಸಂಘಟನೆಯು ಅಫ್ಘಾನಿಸ್ತಾನದ ಸರ್ಕಾರದೊಂದಿಗೆ ಹಾಗೂ ಇತರೆ ರಾಜಕೀಯ ಮತ್ತು ನಾಗರಿಕ ಸಾಮಾಜಿಕ ಸಂಸ್ಥೆಗಳ ಜತೆಗೆ ರಾಷ್ಟ್ರವ್ಯಾಪಿ ಕದನವಿರಾಮ ಮತ್ತು ಅಧಿಕಾರ ಹಂಚಿಕೆಯ ವಿಚಾರವಾಗಿ ಮಾತುಕತೆ ನಡೆಸಲು ಅನುವು ಮಾಡಿಕೊಡಲಿದೆ.

India To Attend US-Taliban Peace Deal In Afghanistan

2001ರಿಂದ ತಾಲಿಬಾನ್ ವಿರುದ್ಧದ ಹೋರಾಟದಲ್ಲಿ ಅಮೆರಿಕವು ಇದುವರೆಗೂ 2,352 ಸೈನಿಕರನ್ನು ಕಳೆದುಕೊಂಡಿದೆ. ತಾಲಿಬಾನ್ ಪಾಲ್ಗೊಳ್ಳಲಿರುವ ಕಾರ್ಯಕ್ರಮದಲ್ಲಿ ಭಾರತ ಅಧಿಕೃತವಾಗಿ ಭಾಗವಹಿಸುತ್ತಿರುವುದು ಇದೇ ಮೊದಲು. ಕತಾರ್ ಸರ್ಕಾರವು ಭಾರತವನ್ನು ಆಹ್ವಾನಿಸಿದ್ದು, ಕತಾರ್‌ನಲ್ಲಿನ ಭಾರತದ ರಾಯಭಾರಿ ಪಿ. ಕುಮಾರನ್ ಹಾಜರಾಗಲಿದ್ದಾರೆ.

ಇದೇ ಮೊದಲ ಬಾರಿಗೆ ತಾಲಿಬಾನ್ ಜತೆ ಭಾರತ ಮಾತುಕತೆ, ಅಧಿಕೃತವಲ್ಲಇದೇ ಮೊದಲ ಬಾರಿಗೆ ತಾಲಿಬಾನ್ ಜತೆ ಭಾರತ ಮಾತುಕತೆ, ಅಧಿಕೃತವಲ್ಲ

ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸಾಮರಸ್ಯ ಮೂಡಿಸುವ ಪ್ರಯತ್ನದಲ್ಲಿ ಭಾರತ ಪ್ರಮುಖ ಮಧ್ಯಸ್ಥಿಕೆ ವಹಿಸುತ್ತಾ ಬಂದಿದೆ. ತಾಲಿಬಾನ್ ಜತೆಗೆ ಶಾಂತಿ ಮಾತುಕತೆ ವಿಚಾರವನ್ನು ಭಾರತ ಹಿಂದಿನಿಂದಲೂ ಪ್ರತಿಪಾದಿಸುತ್ತಾ ಬಂದಿತ್ತು. ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೋದಿ ಅವರೊಂದಿಗೆ ಈ ವಿಚಾರವಾಗಿ ಚರ್ಚಿಸಿದ್ದಾಗಿ ತಿಳಿಸಿದ್ದರು.

ಈ ಒಪ್ಪಂದಲ್ಲಿ ಭಾಗವಹಿಸಲು ಕತಾರ್ ಸರ್ಕಾರವು ಪಾಕಿಸ್ತಾನವನ್ನು ಕೂಡ ಆಹ್ವಾನಿಸಿದೆ.

English summary
India was invited by Qtar government for the historic peace deal between US and Taliban on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X