ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Work From Home ಅಂತ್ಯ: ಉದ್ಯೋಗಿಗಳತ್ತ ಕೈ ಬೀಸುತ್ತಿರುವ ಕಂಪನಿಗಳು ಯಾವುವು?

|
Google Oneindia Kannada News

ನವದೆಹಲಿ, ಫೆಬ್ರವರಿ 24: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ತಗ್ಗಿದೆ. ಕೊವಿಡ್-19 ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ದೇಶದ ಹಲವಾರು ಸಂಸ್ಥೆಗಳು ವರ್ಕ್ ಫ್ರಮ್ ಹೋಮ್ ಅನ್ನು ಕೊನೆಗೊಳಿಸಲು ಯೋಜನೆ ಹಾಕಿಕೊಂಡಿವೆ. ಇನ್ನೂ ಕೆಲವು ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಾಪಸ್ ಕಚೇರಿಗೆ ಕರೆಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿವೆ.

ದೇಶದ ಕೆಲವು ಉನ್ನತ ತಂತ್ರಜ್ಞಾನ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ಮತ್ತೆ ಕಚೇರಿಗಳಿಗೆ ಕರೆತರುವ ಪ್ರಕ್ರಿಯೆ ಆರಂಭಿಸಿವೆ. ವರದಿಗಳ ಪ್ರಕಾರ, ವಿಪ್ರೋ, ಕಾಗ್ನಿಜೆಂಟ್, ಟಿಸಿಎಸ್ ಮತ್ತು ಇನ್ಫೋಸಿಸ್‌ನಂತಹ ನಾಲ್ಕು ಪ್ರಮುಖ ಐಟಿ ಸಂಸ್ಥೆಗಳು ಕೊವಿಡ್ ಸಾಂಕ್ರಾಮಿಕದ ಮೊದಲು ಅಸ್ತಿತ್ವದಲ್ಲಿದ್ದ ವರ್ಕ್ ಫ್ರಾಮ್ ಆಫೀಸ್ ಮಾದರಿಗೆ ಮರಳುತ್ತಿವೆ.

Work From Home: ಕೇಂದ್ರ ಸರ್ಕಾರದ ಶೇ.50ರಷ್ಟು ನೌಕರರ ಹಾಜರಾತಿಗಷ್ಟೇ ಅನುಮತಿWork From Home: ಕೇಂದ್ರ ಸರ್ಕಾರದ ಶೇ.50ರಷ್ಟು ನೌಕರರ ಹಾಜರಾತಿಗಷ್ಟೇ ಅನುಮತಿ

ಕಳೆದ ಸೆಪ್ಟೆಂಬರ್‌ನಲ್ಲಿಯೇ ಕೆಲವು ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಮತ್ತೆ ಕಚೇರಿಗೆ ಕರೆಸುವ ಯೋಜನೆ ಹಾಕಿಕೊಂಡಿದ್ದವು. ಆದರೆ ಓಮಿಕ್ರಾನ್ ರೂಪಾಂತರ ಸೋಂಕಿನ ಹಾವಳಿ ಮತ್ತು ಸ್ಥಳೀಯ ಲಾಕ್‌ಡೌನ್‌ನಿಂದಾಗಿ ಕಂಪನಿಗಳು ತಮ್ಮ ನಿರ್ಧಾರವನ್ನು ಬದಲಿಸಿಕೊಂಡಿದ್ದವು. ಆದರೆ ಈಗ COVID-19 ಪ್ರಕರಣಗಳಲ್ಲಿ ಸ್ಥಿರವಾದ ಇಳಿಕೆ ಕಂಡು ಬಂದಿರುವ ಹಿನ್ನೆಲೆ ತಮ್ಮ ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳಲು ಯೋಜನೆ ಹಾಕಿಕೊಳ್ಳುತ್ತಿವೆ.

ಉದ್ಯೋಗಿಗಳನ್ನು ಕರೆಸಲು ಯೋಜಿಸಿದ ವಿಪ್ರೋ

ಉದ್ಯೋಗಿಗಳನ್ನು ಕರೆಸಲು ಯೋಜಿಸಿದ ವಿಪ್ರೋ

ಎರಡೂ ಡೋಸ್ ಕೊವಿಡ್-19 ಲಸಿಕೆಯನ್ನು ಪಡೆದಿರುವ ಎಲ್ಲಾ ವ್ಯವಸ್ಥಾಪಕ ಮಟ್ಟದ ಉದ್ಯೋಗಿಗಳನ್ನು ಮಾರ್ಚ್ 3ರೊಳಗೆ ಕಚೇರಿಗಳಿಗೆ ಹಿಂತಿರುಗುವಂತೆ ವಿಪ್ರೋ ಸೂಚಿಸಿದೆ. ಕಾಗ್ನಿಜೆಂಟ್ ಕೂಡ ಕಚೇರಿಯನ್ನು ಮತ್ತೆ ತೆರೆಯಲು ಯೋಜಿಸುತ್ತಿದೆ. ಆದಾಗ್ಯೂ, ಉದ್ಯೋಗಿಗಳಿಗೆ ಇದು ಕಡ್ಡಾಯವಾಗಿರುವುದಿಲ್ಲ. ಸಂಸ್ಥೆಯು ಏಪ್ರಿಲ್‌ನಿಂದ ಸ್ವಯಂಪ್ರೇರಿತ ಆಧಾರದ ಮೇಲೆ ಉದ್ಯೋಗಿಗಳನ್ನು ಕಚೇರಿಗೆ ಮರಳಲು ಕೇಳಲು ಯೋಜಿಸುತ್ತಿದೆ. ಕಾಗ್ನಿಜೆಂಟ್ ಹಂತ ಹಂತವಾಗಿ ಕಚೇರಿಗಳನ್ನು ಪುನಃ ತೆರೆಯಲು ಯೋಜಿಸುತ್ತಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಉದ್ಯೋಗಿಗಳಿಗೆ ಹೈಬ್ರಿಡ್ ಮಾದರಿ ನೀಡಿದ ಟಿಸಿಎಸ್

ಉದ್ಯೋಗಿಗಳಿಗೆ ಹೈಬ್ರಿಡ್ ಮಾದರಿ ನೀಡಿದ ಟಿಸಿಎಸ್

ಟಿಸಿಎಸ್ ತನ್ನ ಉದ್ಯೋಗಿಗಳಿಗೆ ಹೈಬ್ರಿಡ್ ಮಾದರಿಯಲ್ಲಿ ಕೆಲಸ ಮಾಡಲು ಅವಕಾಶ ನೀಡುತ್ತಿದೆ. ಹೈಬ್ರಿಡ್ ಮಾದರೆ ಎಂದರೆ ಸದ್ಯಕ್ಕೆ ಸಂಸ್ಥೆಯ ಉದ್ಯೋಗಿಗಳು ಮನೆಯಿಂದಲೇ ತಮ್ಮ ಕೆಲಸವನ್ನು ಮುಂದುವರಿಸಬಹುದು. ಸಾಂದರ್ಭಿಕವಾಗಿ ಕಚೇರಿಗೆ ಹಾಜರಾಗಬಹುದು. ಇದೇ ರೀತಿಯಲ್ಲಿ ಇನ್ಫೋಸಿಸ್ ಕೂಡ ಮುಂದಿನ ಎರಡು ತಿಂಗಳುಗಳಲ್ಲಿ ತನ್ನ ಉದ್ಯೋಗಿಗಳಿಗೆ ಹೈಬ್ರಿಡ್ ಮಾದರಿಯನ್ನು ಅಳವಡಿಸಿಕೊಳ್ಳಲು ಯೋಜಿಸುತ್ತಿದೆ.

ಐಟಿಯೇತರ ಸಂಸ್ಥೆಗಳಿಂದಲೂ ಉದ್ಯೋಗಿಗಳಿಗೆ ಕರೆ

ಐಟಿಯೇತರ ಸಂಸ್ಥೆಗಳಿಂದಲೂ ಉದ್ಯೋಗಿಗಳಿಗೆ ಕರೆ

ಕೇವಲ ಐಟಿ ಕಂಪನಿಗಳಷ್ಟೇ ಅಲ್ಲದೇ ಇತರೆ ಐಟಿಯೇತರ ಸಂಸ್ಥೆಗಳು ಕೂಡ ತಮ್ಮ ಉದ್ಯೋಗಿಗಳನ್ನು ಕಚೇರಿಗೆ ವಾಪಸ್ ಕರೆಸಿಕೊಳ್ಳುವುದಕ್ಕೆ ಯೋಜನೆ ಹಾಕಿಕೊಳ್ಳುತ್ತಿವೆ. ಟೈಮ್ಸ್ ನೌ ವರದಿಯ ಪ್ರಕಾರ ಟಾಟಾ ಒಡೆತನದ ವೋಲ್ಟಾಸ್, ಐಸಿಐಸಿಐ ಬ್ಯಾಂಕ್, ಪಾರ್ಲೆ ಪ್ರಾಡಕ್ಟ್ಸ್, ಸನ್ ಫಾರ್ಮಾಸ್ಯುಟಿಕಲ್, ಗೋದ್ರೇಜ್, ಗೋಲ್ಡ್‌ಮನ್ ಸ್ಯಾಚ್ಸ್, ಡಾಬರ್, ಹೈಯರ್, ಪ್ಯಾನಾಸೋನಿಕ್, ಬಯೋಕಾನ್, ಡಿಕ್ಸನ್ ಟೆಕ್ನಾಲಜೀಸ್ ಮತ್ತು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಮರಳಿ ಕಚೇರಿಗೆ ಕರೆಸಿಕೊಳ್ಳಲು ಯೋಜನೆ ಹಾಕಿಕೊಳ್ಳುತ್ತಿವೆ.

ಕೆಲವು ಸಂಸ್ಥೆಗಳಲ್ಲಿ ಈಗಾಗಲೇ ವರ್ಕ್ ಫ್ರಾಮ್ ಹೋಮ್ ಅಂತ್ಯ

ಕೆಲವು ಸಂಸ್ಥೆಗಳಲ್ಲಿ ಈಗಾಗಲೇ ವರ್ಕ್ ಫ್ರಾಮ್ ಹೋಮ್ ಅಂತ್ಯ

LG ಇಂಡಿಯಾ, ಜರ್ಮನ್ ಸಗಟು ವ್ಯಾಪಾರಿ ಮೆಟ್ರೋ ಕ್ಯಾಶ್ ಮತ್ತು ಕ್ಯಾರಿ ಇಂಡಿಯಾ ಮತ್ತು ಗೋದ್ರೇಜ್ & ಬಾಯ್ಸ್ ಕಚೇರಿ ಹಾಜರಾತಿಯನ್ನು ಪರಿಶೀಲಿಸಲು ಯೋಜಿಸುತ್ತಿದ್ದರೆ, ಸನ್ ಫಾರ್ಮಾ, ಡಾಬರ್, ಪಾರ್ಲೆ ಮತ್ತು ಪ್ಯಾನಾಸೋನಿಕ್‌ನಂತಹ ಸಂಸ್ಥೆಗಳು ಈಗಾಗಲೇ ತಮ್ಮ ಉದ್ಯೋಗಿಗಳನ್ನು ವಾಪಸ್ ಕರೆಸಿಕೊಂಡಿವೆ. ಆದಾಗ್ಯೂ, ಫ್ಲಿಪ್‌ಕಾರ್ಟ್, ಟಾಟಾ ಸ್ಟೀಲ್, ಪೆಪ್ಸಿಕೋ, ಆಕ್ಸಿಸ್ ಬ್ಯಾಂಕ್, ಆರ್‌ಪಿಜಿ ಗ್ರೂಪ್, ವೇದಾಂತ ಮತ್ತು ಪೂಮಾದಂತಹ ಕೆಲವು ಸಂಸ್ಥೆಗಳು ಹೊಂದಿಕೊಳ್ಳುವ ಆಯ್ಕೆಯನ್ನು ಮುಂದುವರಿಯುವುದಾಗಿ ಹೇಳಿವೆ.

ದೇಶದಲ್ಲಿ ಒಂದೇ ದಿನ 15 ಸಾವಿರ ಮಂದಿಗೆ ಕೊವಿಡ್

ದೇಶದಲ್ಲಿ ಒಂದೇ ದಿನ 15 ಸಾವಿರ ಮಂದಿಗೆ ಕೊವಿಡ್

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಭೀತಿ ತಗ್ಗಿದೆ. ಭಾರತದಲ್ಲಿ ಒಂದು ದಿನದಲ್ಲಿ 15 ಸಾವಿರ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 15,102 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 281 ಮಂದಿ ಮಹಾಮಾರಿಗೆ ಬಲಿಯಾಗಿದ್ದು, 31,377 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 42,867,031ಕ್ಕೆ ಏರಿಕೆಯಾಗಿದೆ. ಈ ಪೈಕಿ 42,189,887 ಸೋಂಕಿತರು ಗುಣಮುಖರಾಗಿದ್ದರೆ, 512,652 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. 164,492 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

Recommended Video

ರಷ್ಯಾ- ಉಕ್ರೇನ್ ಬಿಕ್ಕಟ್ಟು:ಕೇವಲ ಒಂದು ಗಂಟೆಯಲ್ಲೇ 8 ಲಕ್ಷ ಕೋಟಿ ರೂ.ಅಧಿಕ ಕುಸಿತ | Oneindia Kannada

English summary
India: These Companies Plan To Ends Work From Home. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X