ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿನ ಮೂಲ ಹುಡುಕುವ ಅಮೆರಿಕ ನಿರ್ಧಾರಕ್ಕೆ ಭಾರತ ಬೆಂಬಲ

|
Google Oneindia Kannada News

ನವದೆಹಲಿ, ಮೇ 28:ಕೊರೊನಾ ಸೋಂಕಿನ ಮೂಲ ಹುಡುಕಲು ಹೊರಟಿರುವ ಅಮೆರಿಕ್ಕೆ ಬೆಂಬಲ ನೀಡುವುದಾಗಿ ಭಾರತ ತಿಳಿಸಿದೆ.

ಈಗಾಗಲೇ ಅಮೆರಿಕ ತಜ್ಞರು ಮತ್ತು ವಿಜ್ಞಾನಿಗಳು ಕೋವಿಡ್-19 ವೈರಸ್ ನ ಮೂಲದ ಕುರಿತು ತನಿಖೆ ನಡೆಸುತ್ತಿದ್ದು, ಇದರ ಜೊತೆಗೆ ಅಮೆರಿಕ ಗುಪ್ತಚರ ಇಲಾಖೆಗಳ ಕೆಲ ತಂಡಗಳೂ ಕೂಡ ಈ ತನಿಖೆಯ ಮೇಲುಸ್ತುವಾರಿ ನೋಡಿಕೊಳ್ಳಲಿವೆ. ಕೊರೊನಾ ವೈರಸ್ ಮೂಲದ ಕುರಿತು ಒಂದು ನಿಶ್ಚಿತ ತೀರ್ಮಾನಕ್ಕೆ ಹತ್ತಿರವಾಗಬಲ್ಲ ಮಾಹಿತಿಯನ್ನು ಸಂಗ್ರಹಿಸಲು ಮತ್ತು ವಿಶ್ಲೇಷಿಸಲುಸ ಗುಪ್ತಚರ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.

ಕೊರೊನಾ ಮೂಲ ಯಾವುದು?; ತನಿಖೆಗೆ ಗಡುವು ನೀಡಿದ ಬೈಡನ್ಕೊರೊನಾ ಮೂಲ ಯಾವುದು?; ತನಿಖೆಗೆ ಗಡುವು ನೀಡಿದ ಬೈಡನ್

ಜಾಗತಿಕ ಒತ್ತಾಯಕ್ಕೆ ಮಣಿದು ಕೊರೊನಾ ವೈರಸ್ ಮೂಲದ ಕುರಿತು ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ್ದ ಶೋಧ ಕಾರ್ಯದ ಹೊರತಾಗಿಯೂ ಜಾಗತಿಕ ಸಮುದಾಯ ಕೊರೋನಾ ವೈರಸ್ ಮೂಲವನ್ನು ಹುಡುಕುವ ಕಾರ್ಯ ಮುಂದುವರೆಸಿದ್ದು, ನಿನ್ನೆಯಷ್ಟೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ಕೊರೊನಾ ವೈರಸ್ ಮೂಲದ ಕುರಿತು ಅಮೆರಿಕ ವಿಜ್ಞಾನಿಗಳು ಮತ್ತು ತಜ್ಞರು ನಡೆಸುತ್ತಿರುವ ಶೋಧ ಕಾರ್ಯದ ವೇಗವನ್ನು ದ್ವಿಗುಣಗೊಳಿಸಿ 90 ದಿನಗಳಲ್ಲಿ ಅದರ ವರದಿ ನೀಡುವಂತೆ ತಮ್ಮ ಗುಪ್ತಚರ ಸಂಸ್ಥೆಗಳಿಗೆ ಸೂಚಿಸಿದ್ದರು.

 India Supports Calls For Detailed Studies On Origins Of Coronavirus

ಇದೀಗ ಜೋ ಬೈಡನ್ ಅವರ ಈ ನಿರ್ಧಾರಕ್ಕೆ ಭಾರತ ಬೆಂಬಲ ಸೂಚಿಸಿದ್ದು, ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಅವರು, ಕೊರೊನಾ ವೈರಸ್ ಮೂಲದ ಕುರಿತು ವಿಶ್ವ ಆರೋಗ್ಯ ಸಂಸ್ಥೆ ನಡೆಸಿರುವ ಅಧ್ಯಯನ ಮತ್ತು ಅದರ ವರದಿಯ ಮುಂದುವರಿದ ಅಧ್ಯಯನಗಳ ಅಗತ್ಯತೆ ಇದ್ದು, ಈ ಸಂಬಂಧ ಎಲ್ಲ ದೇಶಗಳ ಸಹಕಾರ ಅತ್ಯಗತ್ಯ. ಕೋವಿಡ್-19 ವೈರಸ್ ನ ಮೂಲದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಅಧ್ಯಯನವನ್ನು ನಡೆಸುವ ಮೂಲಕ ಮಹತ್ವದ ಮೊದಲ ಹೆಜ್ಜೆಯನ್ನಿರಿಸಿದೆ.

ಇದರ ಮುಂದಿನ ಹಂತದ ಅಧ್ಯಯನಗಳ ಅಗತ್ಯತೆ ಮತ್ತು ದೃಢವಾದ ತೀರ್ಮಾನಗಳನ್ನು ತಲುಪಲು ಹೆಚ್ಚಿನ ದತ್ತಾಂಶ ಮತ್ತು ಅಧ್ಯಯನಗಳು ಅಗತ್ಯವಿದೆ ಎಂದು ಹೇಳಿದರು.

ಈಗಾಗಲೇ ನಡೆಯುತ್ತಿರುವ ತನಿಖೆಯನ್ನು ಚುರುಕುಗೊಳಿಸಿ 90 ದಿನಗಳಲ್ಲಿ ಈ ಕುರಿತ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಪ್ರಯತ್ನದಲ್ಲಿ ನಮ್ಮ ನ್ಯಾಷನಲ್ ಲ್ಯಾಬ್ಸ್ ಮತ್ತು ನಮ್ಮ ಸರ್ಕಾರದ ಇತರ ಇಂಟೆಲಿಜೆನ್ಸ್ ಏಜೆನ್ಸಿಗಳು ಪ್ರಯತ್ನಗಳನ್ನು ಹೆಚ್ಚಿಸಲು ಕೆಲಸ ಮಾಡಬೇಕೆಂದು ನಾನು ಕೇಳಿದ್ದೇನೆ.

English summary
India on Friday supported renewed global calls for a comprehensive investigation by the WHO into the origins of COVID-19, days after US President Joe Biden asked American intelligence agencies to find out how coronavirus emerged in China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X