ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೌಕಾ ಆವೃತ್ತಿಯ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 19: ಗಡಿಯಲ್ಲಿ ಚೀನಾ ಜತೆಗೆ ಸಂಘರ್ಷದ ವಾತಾವರಣ ಹಲವು ತಿಂಗಳಿನಿಂದಲೂ ನಿರ್ಮಾಣವಾಗಿದೆ.

ಹೀಗಿರುವಾಗ ಕ್ಷಿಪಣಿಗಳ ಪ್ರಯೋಗವನ್ನು ಮುಂದುವರಿಸಿರುವ ಭಾರತ, ಶತ್ರುಗಳ ಕಣ್ಣಿಗೆ ಕಾಣದ ಸ್ವದೇಶಿ ನಿರ್ಮಿತ ನೌಕೆಯೊಂದರಿಂದ ಭಾನುವಾರ ನೌಕಾ ಆವೃತ್ತಿಯ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದೆ. ಇದರಿಂದಾಗಿ ಹಿಂದು ಮಹಾಸಾಗರದತ್ತ ನೋಟ ಬೀರಿರುವ ಚೀನಾ ಎದುರು ಭಾರತದ ಕೈ ಮತ್ತೊಮ್ಮೆ ಮೇಲಾದಂತಾಗಿದೆ.

ಶೀಘ್ರದಲ್ಲಿಯೇ ವಾಯುಪಡೆಗೂ ಸೇರಲಿದೆ ಬ್ರಹ್ಮೋಸ್‌ ಕ್ಷಿಪಣಿಶೀಘ್ರದಲ್ಲಿಯೇ ವಾಯುಪಡೆಗೂ ಸೇರಲಿದೆ ಬ್ರಹ್ಮೋಸ್‌ ಕ್ಷಿಪಣಿ

ಇತ್ತೀಚಿನ ದಿನಗಳಲ್ಲಿ ಭಾರತ ಸಾಲು ಸಾಲು ಕ್ಷಿಪಣಿಗಳನ್ನು ಪ್ರಯೋಗ ಮಾಡುತ್ತಿದೆ. 35 ದಿನಗಳಲ್ಲಿ ಶೌರ್ಯ, ರುದ್ರಂ 10 ಕ್ಷಿಪಣಿಗಳನ್ನು ಪರೀಕ್ಷೆ ಮಾಡಿ ಗಮನ ಸೆಳೆದಿತ್ತು.

India Successfully Test-Fires Naval Version Of BrahMos Missile From INS Chennai

ಭಾರತ-ರಷ್ಯಾ ಜಂಟಿ ಸಹಭಾಗಿತ್ವದಲ್ಲಿ ಬ್ರಹ್ಮೋಸ್ ಹೆಸರಿನಲ್ಲಿ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಉತ್ಪಾದಿಸುತ್ತಿವೆ. ಈಗಾಗಲೇ ಸಬ್ ಮರಿನ್, ಹಡಗು, ವಿಮಾನ ಅಥವಾ ನೆಲದಿಂದ ಉಡಾಯಿಸುವ ಕ್ಷಿಪಣಿಗಳ ಪ್ರಯೋಗ ನಡೆದಿದೆ. ಈಗಿನ ಕ್ಷಿಪಣಿಯು 290 ಕಿ.ಮೀ ದೂರದಲ್ಲಿರುವ ಗುರಿಯನ್ನು ಹೊಡೆದುರಿಳಿಸುತ್ತದೆ.

ಅರಬ್ಬಿ ಸಮುದ್ರದಲ್ಲಿ ಈ ಪ್ರಯೋಗ ನಡೆದಿದ್ದು, ಐಎನ್‌ಎಸ್ ಚೆನ್ನೈ ನೌಕೆಯಿಂದ ಬ್ರಹ್ಮೋಸ್ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದೆ.

ಅದು ಅತ್ಯಂತ ಸಂಕೀರ್ಣ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಕರಾರುವಕ್ಕಾಗಿ ತನ್ನ ಗುರಿ ತಲುಪಲಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಿಆರ್‌ಡಿಒ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

English summary
A naval version of the BrahMos supersonic cruise missile was successfully test-fired from an indigenously built stealth destroyer of the Indian Navy in the Arabian Sea on Sunday, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X