ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೃಥ್ವಿ ನಂತರ ಅಗ್ನಿ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ

By Mahesh
|
Google Oneindia Kannada News

ಭುವನೇಶ್ವರ, ನವೆಂಬರ್ 22: ದೇಶಿ ನಿರ್ಮಿತ ಅಣ್ವಸ್ತ್ರ ಸಾಮರ್ಥ್ಯವುಳ್ಳ ಅಗ್ನಿ -I ಕ್ಷಿಪಣಿ ಪ್ರಯೋಗ ಮಂಗಳವಾರ ಯಶಸ್ವಿಯಾಗಿದೆ. ಈ ಮೂಲಕ ಸಂಪೂರ್ಣವಾಗಿ ದೇಶೀಯವಾಗಿ ಅಭಿವೃದ್ಧಿಗೊಳಿಸಲಾದ ಅಣ್ವಸ್ತ್ರ ಸಾಮರ್ಥ್ಯದ ಕ್ಷಿಪಣಿ ಪ್ರಯೋಗಕ್ಕೆ ಭಾರತ ಸಜ್ಜಾಗಿದೆ.

ಒಡಿಶಾದ ಕರಾವಳಿಯ ಚಂಡಿಪುರ್ ನಲ್ಲಿರುವ ಅಬ್ದುಲ್ ಕಲಾಂ ದ್ವೀಪದಲ್ಲಿ ಈ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ಸೋಮವಾರದಂದು ಪೃಥ್ವಿ-2 ಅವಳಿ ಅಣ್ವಸ್ತ್ರ ಕ್ಷಿಪಣಿ ಉಡಾವಣೆ ಯಶಸ್ವಿಯಾಗಿತ್ತು. ಸಮಗ್ರ ಪ್ರಯೋಗ ವಲಯದ (ಐಟಿಆರ್) ಉಡಾವಣೆ ಸಂಕೀರ್ಣ-3ರಲ್ಲಿ ಸಂಚಾರಿ ವಾಹಕ-4(LC IV) ರ ಮೂಲಕ ಬೆಳಗ್ಗೆ 10.10ರ ಸುಮಾರಿಗೆ ಅಗ್ನಿ I ಕ್ಷಿಪಣಿ ಪರೀಕ್ಷೆ ಉಡಾವಣೆ ಸಫಲವಾಗಿದೆ ಎಂದು ರಕ್ಷಣಾ ಮೂಲಗಳು ಹೇಳಿವೆ.

India successfully test-fires n-capable Agni-I ballistic missile
ಈ ಖಂಡಾಂತರ(ballistic) ಕ್ಷಿಪಣಿಯು 700 ಕಿ.ಮೀ.ದೂರದಲ್ಲಿರುವ ಗುರಿಯನ್ನು ಮುಟ್ಟಿ, ಶತ್ರುಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ಪೃಥ್ವಿ-2 ಕ್ಷಿಪಣಿ ಭೂಮಿಯಿಂದ ಭೂಮಿಗೆ ಚಿಮ್ಮುವ ಈ ಎರಡು ಕ್ಷಿಪಣಿಗಳು 350 ಕಿ.ಮೀ.ದೂರದಲ್ಲಿರುವ ವೈರಿ ಗುರಿಯನ್ನು ಧ್ವಂಸ ಮಾಡುವ ಶಕ್ತಿ ಹೊಂದಿದೆ. 500 ರಿಂದ 1,000 ಕೆ.ಜಿ. ಸಿಡಿತಲೆಗಳನ್ನು ಹೊರುವ ಸಾಮರ್ಥ್ಯವನ್ನು ಹೊಂದಿದೆ.(ಪಿಟಿಐ)
English summary
India on Tuesday successfully test fired indigenously built nuclear-capable intermediate range Agni-I ballistic missile from Odisha coast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X