ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಹ್ಮೋಸ್ ಭೂದಾಳಿ ಆವೃತ್ತಿಯ ಕ್ಷಿಪಣಿ ಪರೀಕ್ಷೆ ಯಶಸ್ವಿ

|
Google Oneindia Kannada News

ನವದೆಹಲಿ, ನವೆಂಬರ್ 24: ಭೂ ಪ್ರದೇಶದ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಬ್ರಹ್ಮೋಸ್ ಕ್ಷಿಪಣಿಯ ಮುಂದುವರೆದ ಆವೃತ್ತಿಯನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಯಶಸ್ವಿಯಾಗಿ ಪರೀಕ್ಷಿಸಿದೆ.

ಭಾರತದ ಅತ್ಯಂತ ಪ್ರಬಲ ಮತ್ತು ಯಶಸ್ವಿ ಕ್ಷಿಪಣಿ ಎಂದೇ ಖ್ಯಾತಿ ಗಳಿಸಿರುವ ಬ್ರಹ್ಮೋಸ್ ಕ್ಷಿಪಣಿ ಭೂದಾಳಿ ಆವೃತ್ತಿಯ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.

ಶೀಘ್ರದಲ್ಲಿಯೇ ವಾಯುಪಡೆಗೂ ಸೇರಲಿದೆ ಬ್ರಹ್ಮೋಸ್‌ ಕ್ಷಿಪಣಿ ಶೀಘ್ರದಲ್ಲಿಯೇ ವಾಯುಪಡೆಗೂ ಸೇರಲಿದೆ ಬ್ರಹ್ಮೋಸ್‌ ಕ್ಷಿಪಣಿ

ಇನ್ನು ಬ್ರಹ್ಮೋಸ್ ಸರಣಿಯ ಕ್ಷಿಪಣಿಗಳ ಯಶಸ್ಸಿನ ಬೆನ್ನಲ್ಲೇ ಭಾರತ ಈ ಕ್ರೂಸ್ ಮಿಸೈಲ್ ಗಳನ್ನು ರಫ್ತು ಮಾಡಲು ಮಾರುಕಟ್ಟೆಯತ್ತ ಗಮನ ಕೇಂದ್ರೀಕರಿಸಿದೆ. ಈಗಾಗಲೇ ಸಾಕಷ್ಟು ದೇಶಗಳು ಬ್ರಹ್ಮೋಸ್ ಕ್ಷಿಪಣಿ ಖರೀದಿಗೆ ಉತ್ಸುಕತೆ ತೋರಿವೆ.

ಕ್ಷಿಪಣಿ ಉಡಾವಣಾ ವ್ಯವಸ್ಥೆ

ಕ್ಷಿಪಣಿ ಉಡಾವಣಾ ವ್ಯವಸ್ಥೆ

ಭಾರತೀಯ ಸೇನೆ ಡಿಆರ್ ಡಿಒದ ಕ್ಷಿಪಣಿ ಉಡಾವಣಾ ವ್ಯವಸ್ಥೆಯ ಮೂಲಕ ಕ್ಷಿಪಣಿ ಪರೀಕ್ಷೆ ನಡೆಸಿತು. ನಿಗದಿತ ಗುರಿಯನ್ನು ನಿಖರವೇಗ ಮತ್ತು 400 ಕಿ.ಮೀಗೂ ಅಧಿಕ ದೂರವಿರುವ ಗುರಿಯನ್ನು ನಿಖರವಾಗಿ ತಲುಪುವ ಮೂಲಕ ಯಶಸ್ವಿಯಾಯಿತು.

ವಿಶ್ವದ ಅತಿ ವೇಗದ ಕಾರ್ಯಾಚರಣೆ ವ್ಯವಸ್ಥೆ

ವಿಶ್ವದ ಅತಿ ವೇಗದ ಕಾರ್ಯಾಚರಣೆ ವ್ಯವಸ್ಥೆ

ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ತನ್ನ ವರ್ಗದಲ್ಲಿ ವಿಶ್ವದ ಅತಿ ವೇಗದ ಕಾರ್ಯಾಚರಣಾ ವ್ಯವಸ್ಥೆಯಾಗಿದ್ದು, ಡಿಆರ್‌ಡಿಒ ಕ್ಷಿಪಣಿ ವ್ಯವಸ್ಥೆಯ ವ್ಯಾಪ್ತಿಯನ್ನು 298 ಕಿ.ಮೀ.ನಿಂದ 450 ಕಿ.ಮೀ.ಗೆ ವಿಸ್ತರಿಸಿತ್ತು. ಕಳೆದ ಎರಡು ತಿಂಗಳಲ್ಲಿ, ಡಿಆರ್‌ಡಿಒ ಹೊಸ ಮತ್ತು ಅಸ್ತಿತ್ವದಲ್ಲಿರುವ ಕ್ಷಿಪಣಿ ವ್ಯವಸ್ಥೆಗಳನ್ನು ಪರೀಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಬ್ರಹ್ಮೋಸ್ ನ ಅತ್ಯಾಧುನಿಕ ಕ್ಷಿಪಣಿಗಳು 800 ಕಿ.ಮೀ.ಗಿಂತ ಹೆಚ್ಚಿನ ದೂರದ ಗುರಿಗಳನ್ನು ನಿಖರವಾಗಿ ಹೊಡೆದುರುಳಿಸಬಲ್ಲದು.

ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ

ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ

ಕಳೆದ ತಿಂಗಳಷ್ಟೇ ಭಾರತೀಯ ನೌಕಾದಳ ತನ್ನ ಐಎನ್ಎಸ್ ಚೆನ್ನೈ ಯುದ್ಧನೌಕೆಯಲ್ಲಿ ಅಳವಡಿಸಲಾಗಿದ್ದ ಬ್ರಹ್ಮೋಸ್ ಕ್ಷಿಪಣಿಯನ್ನು ಪರೀಕ್ಷೆಗೊಳಪಡಿಸಿತ್ತು. ಸುಮಾರು 400 ಕಿ.ಮೀ ಗೂ ಅಧಿಕ ದೂರದ ಗುರಿಯನ್ನು ಈ ಕ್ಷಿಪಣಿ ಯಶಸ್ವಿಯಾಗಿ ಹೊಡೆದುರುಳಿಸಿತ್ತು.

ಮೊಬೈಲ್ ಸ್ವನಿಯಂತ್ರಿತ ಲಾಂಚರ್

ಮೊಬೈಲ್ ಸ್ವನಿಯಂತ್ರಿತ ಲಾಂಚರ್

ಕ್ಷಿಪಣಿಯ ಸಾಮರ್ಥ್ಯವನ್ನು ಮತ್ತೊಮ್ಮೆ ಪರೀಕ್ಷಿಸುವ ಸಲುವಾಗಿ ಈ ಪರೀಕ್ಷೆ ಮಾಡಲಾಗಿದೆ. ಭೂಪ್ರದೇಶದಿಂದ ಭೂಪ್ರದೇಶಕ್ಕೆ ದಾಳಿ ಮಾಡಬಹುದಾದ ಬ್ರಹ್ಮೋಸ್ ಕ್ಷಿಪಣಿಯನ್ನು ಮೊಬೈಲ್ ಸ್ವನಿಯಂತ್ರಣ ಲಾಂಚರ್ ಮೂಲಕ (ಎಂಎಎಲ್) ಯಶಸ್ವಿಯಾಗಿ ಪರೀಕ್ಷಿಸಲಾಯಿತು.

English summary
India’s Defence Research and Development Organisation (DRDO), on November 24, successfully tested a land attack version of the BrahMos supersonic cruise missile from the Andaman and Nicobar Islands, according to news reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X