ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ಯಶಸ್ವಿ ಪರೀಕ್ಷೆ

Posted By:
Subscribe to Oneindia Kannada

ಭುವನೇಶ್ವರ್, ಮಾರ್ಚ್ 11: ಒಡಿಶಾದ ಕಡಲ ತೀರದಲ್ಲಿ ಶನಿವಾರ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಕಳೆದ ಫೆಬ್ರವರಿ 15ರಂದು ಬ್ರಹ್ಮೋಸ್ ಮೊದಲ ಪರೀಕ್ಷೆ ಬಗ್ಗೆ ಡಿಆರ್ ಡಿಒ ಮುಖ್ಯಸ್ಥ ಕ್ರಿಸ್ಟೋಫರ್ ಖಾತ್ರಿ ಪಡಿಸಿದ್ದರು.

ಕ್ಷಿಪಣಿ ತಲುಪುವ ದೂರವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಸಲುವಾಗಿ ಮಾರ್ಚ್ 10ರಂದು ಕ್ಷಿಪಣಿ ಪರೀಕ್ಷೆ ಮಾಡುವ ಬಗ್ಗೆ ತಿಳಿಸಿದ್ದರು. ಮುಂದಿನ ಎರಡೂವರೆ ವರ್ಷದಲ್ಲಿ 800 ಕಿ.ಮೀ. ದೂರ ತಲುಪುವ ಕ್ಷಿಪಣಿ ಅಭಿವೃದ್ಧಿ ಪಡಿಸಲು ಯೋಜನೆ ಕೂಡ ಹಾಕಲಾಗಿದೆ.[ಡಿಆರ್ ಡಿಒದಿಂದ ಸಾಧನೆ, ಪ್ರತಿಬಂಧಕ ಕ್ಷಿಪಣಿ ಪರೀಕ್ಷೆಯಲ್ಲಿ ಪಾಸ್]

India successfully test-fires BrahMos supersonic cruise missile

ಬ್ರಹ್ಮೋಸ್ ಸೂಪರ್ ಸಾನಿಕ ಕ್ರೂಸ್ ಕ್ಷಿಪಣಿಯನ್ನು ಸಬ್ ಮರೀನ್, ಹಡಗು, ಏರ್ ಕ್ರಾಫ್ಟ್ ಅಥವಾ ಭೂಮಿಯಿಂದ ಉಡಾಯಿಸಿದರೆ 400 ಹೆಚ್ಚುಕಿಮೀ ದೂರ ಸಾಗುವ ಸಾಮರ್ಥ್ಯ ಹೊಂದಿದೆ. ಮುನ್ನೂರು ಕೆಜಿ ತೂಕದ ಸಿಡಿತಲೆಗಳನ್ನು ಹೊತ್ತೊಯ್ದು ಭೂಮಿ ಅಥವಾ ಸಮುದ್ರದಲ್ಲಿರುವ ಗುರಿಯನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ.ಇದನ್ನು ಭಾರತ ಹಾಗೂ ರಷ್ಯಾ ಜೊತೆಯಾಗಿ ಸೇರಿ ಅಭಿವೃದ್ಧಿಪಡಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India successfully test fired BrahMos supersonic cruise missile on Saturday from Odisha coast.
Please Wait while comments are loading...