ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಧಾರಿತ ಸೂಪರ್‌ಸಾನಿಕ್ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ: DRDO

|
Google Oneindia Kannada News

ನವದೆಹಲಿ, ಜನವರಿ 20: ಒಡಿಶಾ ಕರಾವಳಿಯಲ್ಲಿ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಬ್ರಹ್ಮೋಸ್ ಅನ್ನು ಇಂದು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮೂಲಗಳು ತಿಳಿಸಿವೆ. ನಿಯಂತ್ರಣ ವ್ಯವಸ್ಥೆ ಸೇರಿದಂತೆ ಹೊಸ ತಂತ್ರಜ್ಞಾನಗಳೊಂದಿಗೆ, ಕ್ಷಿಪಣಿಯನ್ನು ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ಉಡಾವಣಾ ಪ್ಯಾಡ್-III ನಿಂದ ಬೆಳಗ್ಗೆ 10.45 ರ ಸುಮಾರಿಗೆ ಪರೀಕ್ಷಾರ್ಥ ಉಡಾವಣೆ ಮಾಡಲಾಗಿದೆ.

ಡಿಆರ್‌ಡಿಒ ಸಿದ್ಧಪಡಿಸಿರುವ ಬ್ರಹ್ಮೋಸ್‌ ಕ್ಷಿಪಣಿಯನ್ನು ಭೂಮಿ, ಆಕಾಶ ಮತ್ತು ಸಮುದ್ರದಿಂದಲೂ ಉಡಾಯಿಸಬಹುದಾಗಿದೆ. ಬ್ರಹ್ಮೋಸ್ ವಿಶ್ವದ ಶಬ್ದಾತೀತ ವೇಗದ ಕ್ಷಿಪಣಿಗಳಲ್ಲಿ ಒಂದಾಗಿದೆ. ಈಗಾಗಲೇ ಈ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದೆ.

2014ರಲ್ಲಿ ಸಮುದ್ರದಿಂದಲೂ ಉಡಾವಣೆ ಮಾಡಬಲ್ಲ ಬ್ರಹ್ಮೋಸ್‌ ಕ್ಷಿಪಣಿ ನೌಕಾಪಡೆಗೆ ಸೇರ್ಪಡೆಗೊಂಡಿತ್ತು. ರಷ್ಯಾದ ಪಿ-800 ಕ್ಷಿಪಣಿ ಮಾದರಿಯಲ್ಲಿಯೇ ಬ್ರಹ್ಮೋಸ್ ತಯಾರು ಮಾಡಲಾಗಿದೆ.

ಬ್ರಹ್ಮೋಸ್ ಸೋರಿಕೆ : ಮಹಿಳೆ ಜತೆ ಗೆಳೆತನ, ವೇತನದ ಬಲೆಯಲ್ಲಿ ನಿಶಾಂತ್ ಬ್ರಹ್ಮೋಸ್ ಸೋರಿಕೆ : ಮಹಿಳೆ ಜತೆ ಗೆಳೆತನ, ವೇತನದ ಬಲೆಯಲ್ಲಿ ನಿಶಾಂತ್


ಭಾರತ ಮತ್ತು ರಷ್ಯಾದ ಎರಡು ನದಿಗಳ ಹೆಸರನ್ನು ಸೇರಿಸಿ ಕ್ಷಿಪಣಿಗೆ ಬ್ರಹ್ಮೋಸ್ ಎಂದು ನಾಮಕರಣ ಮಾಡಲಾಗಿದೆ. ಭೂಮಿಯಿಂದ ಮತ್ತು ಸಮುದ್ರದಿಂದ ಉಡಾವಣೆಗೊಳ್ಳ ಬಲ್ಲ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಈಗಾಗಲೇ ಯಶಸ್ವಿಯಾಗಿದೆ. ಈ ಕ್ಷಿಪಣಿ ಮ್ಯಾಚ್ 4 ವೇಗದಲ್ಲಿ ಸಂಚಾರ ನಡೆಸುತ್ತಿತ್ತು. ಈಗ ಅದನ್ನು ಮ್ಯಾಚ್ 5.0 ವೇಗಕ್ಕೆ ಅಭಿವೃದ್ಧಿಗೊಳಿಸಲಾಗಿದೆ.

India successfully test-fires Brahmos missile

ಬ್ರಹ್ಮೋಸ್ ಸೂಪರ್ ಸಾನಿಕ ಕ್ರೂಸ್ ಕ್ಷಿಪಣಿಯನ್ನು ಸಬ್ ಮರೀನ್, ಹಡಗು, ಏರ್ ಕ್ರಾಫ್ಟ್ ಅಥವಾ ಭೂಮಿಯಿಂದ ಉಡಾಯಿಸಿದರೆ 400 ಹೆಚ್ಚು ಕಿಮೀ ದೂರ ಸಾಗುವ ಸಾಮರ್ಥ್ಯ ಹೊಂದಿದೆ.

ಈ ಸಾಮರ್ಥ್ಯವನ್ನು 800 ಕಿ.ಮೀಗೆ ಹೆಚ್ಚಿಸಿ ಸರಣಿ ಉಡಾವಣಾ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಮುನ್ನೂರು ಕೆಜಿ ತೂಕದ ಸಿಡಿತಲೆಗಳನ್ನು ಹೊತ್ತೊಯ್ದು ಭೂಮಿ ಅಥವಾ ಸಮುದ್ರದಲ್ಲಿರುವ ಗುರಿಯನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ.ಇದನ್ನು ಭಾರತ ಹಾಗೂ ರಷ್ಯಾ ಜೊತೆಯಾಗಿ ಸೇರಿ ಅಭಿವೃದ್ಧಿಪಡಿಸಿದೆ.

English summary
India successfully test-fired supersonic cruise missile Brahmos off the Odisha coast here on Thursday, DRDO sources said. With new the added technologies, including the control system, the missile was test-fired from the Integrated Test Range (ITR) launch pad-III at Chandipur around 10.45 am, said a source at the Defence Research and Development Organisation (DRDO).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X