ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗ್ನಿ - 5 ಖಂಡಾಂತರ ಕ್ಷಿಪಣಿಯ ಐದನೇ ಪರೀಕ್ಷೆಯೂ ಯಶಸ್ವಿ

By Sachhidananda Acharya
|
Google Oneindia Kannada News

ಬಾಲಸೋರ್ (ಒಡಿಶಾ), ಜನವರಿ 18: ಇಂದು ಭಾರತ ಅಗ್ನಿ ಸರಣಿಯ ಅತ್ಯಾಧುನಿಕ ಖಂಡಾಂತರ ಕ್ಷಿಪಣಿ ಅಗ್ನಿ-5ರ ಯಶಸ್ವೀ ಪರೀಕ್ಷೆ ನಡೆಸಿತು. ನೆಲದಿಂದ ನೆಲಕ್ಕೆ ಚಿಮ್ಮುವ, ಅಣ್ವಸ್ತ್ರ ಹೊತ್ತೊಯ್ಯಬಲ್ಲ ಅಗ್ನಿ-5 ಕ್ಷಿಪಣಿ 5,000 ಕಿಲೋಮೀಟರ್ ದೂರದವರೆಗೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ.

ಯಶಸ್ವೀ ಪರೀಕ್ಷೆಯೊಂದಿಗೆ ಮಿಸೈಲ್ ತಂತ್ರಜ್ಞಾನದಲ್ಲಿ ಭಾರತ ಹೊಸ ಎತ್ತರಕ್ಕೆ ಏರಿದ್ದಲ್ಲದೆ ದೇಶದ ರಕ್ಷಣಾ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗಿದೆ.

ಶತಕ ಬಾರಿಸಿದ ಇಸ್ರೋ, 100ನೇ ಉಪಗ್ರಹ ಯಶಸ್ವೀ ಉಡಾವಣೆಶತಕ ಬಾರಿಸಿದ ಇಸ್ರೋ, 100ನೇ ಉಪಗ್ರಹ ಯಶಸ್ವೀ ಉಡಾವಣೆ

ಈ ಪರೀಕ್ಷೆ 'ಸಂಪೂರ್ಣ ಯಶಸ್ವಿ'ಯಾಗಿದೆ ಎಂದು ಮೂಲಗಳು ಹೇಳಿವೆ. ರಾಡಾರ್, ಟ್ರಾಕಿಂಗ್ ಸಿಸ್ಟಂಗಳು, ರೇಂಜ್ ಸ್ಟೇಷನ್ ಮಾನಿಟರ್ ಗಳು ಮತ್ತು ಫ್ಲೈಟ್ ಪರ್ಫಾರ್ಮೆನ್ಸ್ ಗಳು ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿರುವುದನ್ನು ಖಚಿತಪಡಿಸಿವೆ.

India successfully test-fires Agni-5 ballistic missile

ಅಬ್ದುಲ್ ಕಲಾಂ (ವೀಲರ್) ದ್ವೀಪದಿಂದ ಬೆಳಿಗ್ಗೆ 9.54ಕ್ಕೆ ಅಗ್ನಿ-5 ಕ್ಷಿಪಣಿ ನಭಕ್ಕೆ ಚಿಮ್ಮಿತು. ಸುಮಾರು 19 ನಿಮಿಷಗಳ ಕಾಲ ಪ್ರಯಾಣ ಮಾಡಿದ ಈ ಕ್ಷಿಪಣಿ 4,900 ಕಿಲೋಮೀಟರ್ ಅಂತರವನ್ನು ಕ್ರಮಿಸಿದೆ. ಈ ಹಿಂದೆ ನಾಲ್ಕು ಬಾರಿ ಕ್ಷಿಪಣಿಯನ್ನು ಪರೀಕ್ಷೆ ಒಳಪಡಿಸಲಾಗಿತ್ತು. ಮತ್ತು ಇದೇ ಮೊದಲ ಬಾರಿಗೆ ಬಳಕೆಗೆ ಸಾಧ್ಯವಾಗಿಸುವ ಕ್ಷಿಪಣಿಯ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆ ಯಶಸ್ವಿಯಾಗಿದೆ..

ಕ್ಷಿಪಣಿಯು ನಿರ್ದಿಷ್ಟ ಗುರಿಯನ್ನು ಕೆಲವೇ ಮೀಟರುಗಳ ಸ್ಪಷ್ಟತೆಯೊಂದಿಗೆ ಮುಟ್ಟಿದ್ದು ಮಿಸೈಲ್ ತನ್ನ ಕಾರ್ಯಕ್ಷಮತೆಯನ್ನು ಸಾಬೀತು ಮಾಡಿದೆ. ಮಿಸೈಲ್ ನಲ್ಲಿದ್ದ ಕಂಪ್ಯೂಟರ್ ಗಳು ಮಿಸೈಲನ್ನು ನಿರ್ದಿಷ್ಟ ಗುರಿ ಮುಟ್ಟಿಸುವಲ್ಲಿ ಸಹಾಯ ಮಾಡಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

700 ಕೀಲೋಮೀಟರ್ ದೂರ ಕ್ರಮಿಸುವ ಸಾಮರ್ಥ್ಯ ಇರುವ ಅಗ್ನಿ -1, 2000 ಕಿ.ಮೀಯ ಅಗ್ನಿ - 2, 2500 ಕಿಮೀ ನಿಂದ 3500 ಕಿಮೀ ರೇಂಜ್ ನ ಅಗ್ನಿ-3 ಮತ್ತು 4 ಅಗ್ನಿ ಸರಣಿಯ ಇತರ ಕ್ಷಿಪಣಿಗಳಾಗಿವೆ.

ಏಪ್ರಿಲ್ 19, 2012ರಲ್ಲಿ ಮೊದಲ ಬಾರಿಗೆ ಅಗ್ನಿ 5ರ ಪರೀಕ್ಷೆ ನಡೆಸಲಾಗಿತ್ತು. ನಂತರ ಸೆಪ್ಟೆಂಬರ್ 15, 2013 ರಲ್ಲಿ ಎರಡನೇ ಬಾರಿಗೆ ಹಾಗೂ ಜನವರಿ 31, 2015ರಲ್ಲಿ ಮೂರನೇ ಬಾರಿಗೆ ಹಾಗೂ ನಾಲ್ಕನೇ ಬಾರಿಗೆ ಡಿಸೆಂಬರ್ 26, 2016ರಲ್ಲಿ ಅಗ್ನಿ-5ರ ಪರೀಕ್ಷೆ ನಡೆಸಲಾಗಿತ್ತು.

English summary
India today successfully test-fired its nuclear capable surface-to-surface ballistic missile Agni-5 - the most advanced missile in the Agni series with a strike range of over 5000 kms -- from a test range off Odisha coast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X