ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಿಯ ಸ್ಟೆಂಟ್‌ಗಳು ಉತ್ತಮ ಗುಣಮಟ್ಟ ಹೊಂದಿವೆ : ವರದಿ

|
Google Oneindia Kannada News

ನವದೆಹಲಿ, ನವೆಂಬರ್ 15 : ವಿದೇಶಿಯ ಸ್ಟೆಂಟ್ ಗಳಿಗೆ ಹೋಲಿಕೆ ಮಾಡಿದರೆ ಭಾರತೀಯ ನಿರ್ಮಿಕ ಸ್ಟೆಂಟ್‌ಗಳು ಉತ್ತಮವಾಗಿದೆ ಎಂದು ಅಧ್ಯನ ವರದಿ ಹೇಳಿದೆ. ಆಸ್ಪತ್ರೆಗಳಲ್ಲಿ ಬಳಸುವ ಸ್ಟೆಂಟ್‌ಗಳ ಗುಣಮಟ್ಟದ ಕುರಿತು ಹಲವು ವರ್ಷಗಳಿಂದ ಚರ್ಚೆಗಳು ನಡೆಯುತ್ತಿದ್ದವು.

ಅಮೆರಿಕದ Xience ಸ್ಟೆಂಟ್ ಮತ್ತು ಭಾರತೀಯ ನಿರ್ಮಿತ Yukon Choice PC ಸ್ಟೆಂಟ್ ಕುರಿತು ನಡೆಸಿದ 10 ವರ್ಷಗಳ ಅಧ್ಯಯನ ವರದಿ ಈಗ ಬಹಿರಂಗವಾಗಿದೆ. ದೇಶಿಯ ನಿರ್ಮಿತ ಸ್ಟೆಂಟ್‌ಗಳು ಸಹ ಉತ್ತಮ ಗುಣಮಟ್ಟ ಹೊಂದಿವೆ ಎಂದು ವರದಿ ಹೇಳಿದೆ.

ಸ್ಟೆಂಟ್ ಬೆಲೆ ಇಳಿಕೆ ಆಯ್ತು, ಈಗ ಕೃತಕ ಮಂಡಿ ಕೀಲಿನ ಸರದಿಸ್ಟೆಂಟ್ ಬೆಲೆ ಇಳಿಕೆ ಆಯ್ತು, ಈಗ ಕೃತಕ ಮಂಡಿ ಕೀಲಿನ ಸರದಿ

ಎರಡು ತಿಂಗಳ ಹಿಂದೆ ಭಾರತದ Supra Flex ಸ್ಟೆಂಟ್ ಬಗ್ಗೆಯೂ ಅಧ್ಯಯನ ನಡೆಸಲಾಗಿತ್ತು. ಅದು ಸಹ ಅಮೆರಿಕದ Xience ನಷ್ಟು ಗುಣಮಟ್ಟವನ್ನು ಹೊಂದಿದೆ ಎಂದು ವರದಿ ಹೇಳಿದ್ದು, ಹಲವಾರು ವರ್ಷಗಳ ಚರ್ಚೆಗೆ ತೆರೆ ಬಿದ್ದಿದೆ.

ನಾಲ್ಕು ದಿನದಲ್ಲಿ 200 ಬಡ ರೋಗಿಗಳ ಜೀವ ಉಳಿಸಿದ ಜಯದೇವ ವೈದ್ಯರುನಾಲ್ಕು ದಿನದಲ್ಲಿ 200 ಬಡ ರೋಗಿಗಳ ಜೀವ ಉಳಿಸಿದ ಜಯದೇವ ವೈದ್ಯರು

India stents as good as American Xience stents

ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಚಿಕಾಗೋದಲ್ಲಿ ನಡೆಸಿದ ವೈಜ್ಞಾನಿಕ ಸಮ್ಮೇಳನದಲ್ಲಿ ಜರ್ಮನಿಯಿಂದ ಆಗಮಿಸಿದ್ದ ಕಾರ್ಡಿಯಾಲಜಿಸ್ಟ್‌ಗಳು ಸ್ಟೆಂಟ್‌ ಬಗ್ಗೆ ನಡೆಸಿದ ಅಧ್ಯಯನ ವರದಿಯನ್ನು ಪ್ರಕಟಿಸಿದರು.

ಬಾಲ್ಯದಲ್ಲಿ ಬೊಜ್ಜಿದ್ದರೆ ಲಕ್ವಾ ಹೊಡೆಯುವ ಸಾಧ್ಯತೆ ಹೆಚ್ಚು: ವರದಿಬಾಲ್ಯದಲ್ಲಿ ಬೊಜ್ಜಿದ್ದರೆ ಲಕ್ವಾ ಹೊಡೆಯುವ ಸಾಧ್ಯತೆ ಹೆಚ್ಚು: ವರದಿ

ಆಧುನಿಕವಾಗಿ ತಯಾರಾದ ಸ್ಟೆಂಟ್‌ಗಳನ್ನು ಬಳಸಿ ಚಿಕಿತ್ಸೆ ಪಡೆದ 2603 ರೋಗಿಗಳ ಆರೋಗ್ಯದ ಮಾಹಿತಿ ಸಂಗ್ರಹಿಸಿ ಸ್ಟೆಂಟ್‌ಗಳ ಗುಣಮಟ್ಟವನ್ನು ನಿರ್ಧರಿಸಲಾಗಿದೆ. ಎರಡೂ ಸ್ಟೆಂಟ್‌ಗಳಲ್ಲಿ ಅಂತಹ ವಿಭಿನ್ನತೆ ಏನೂ ಇಲ್ಲ. ಗುಣಮಟ್ಟ ಉತ್ತಮವಾಗಿದೆ ಎಂದು ವರದಿ ಹೇಳಿದೆ.

ಕೇಂದ್ರ ಸರ್ಕಾರ ಸ್ಟೆಂಟ್‌ಗಳ ದರವನ್ನು ಕಡಿಮೆ ಮಾಡಿದ ಬಳಿಕ ಅನೇಕ ವಿದೇಶಿ ಕಂಪನಿಗಳು ತಮ್ಮ ಸ್ಟೆಂಟ್‌ಗಳನ್ನು ದೇಶದ ಮಾರುಕಟ್ಟೆಯಿಂದ ವಾಪಸ್ ಪಡೆಯುವುದಾಗಿ ಹೇಳಿದ್ದವು. ದೇಶಿಯ ನಿರ್ಮಿತ ಸ್ಟೆಂಟ್‌ಗಳು ತಮ್ಮಷ್ಟು ಗುಣಮಟ್ಟ ಹೊಂದಿಲ್ಲ ಎಂದು ಕಂಪನಿಗಳು ತಿಳಿಸಿದ್ದವು.

ಫೋರ್ಟೀಸ್ ಗ್ರೂಪ್‌ ಮುಖ್ಯಸ್ಥ ಡಾ.ಅಶೋಕ್ ಸೇಠ್ ಅವರು, 'ಇಂತಹ ಅಧ್ಯಯನ ವರದಿಗಳ ಅಗತ್ಯವಿದೆ. ಭಾರತೀಯ ಕಂಪನಿಗಳು ಇಂತಹ ಅಧ್ಯಯನಗಳನ್ನು ನಡೆಸುವ ಮೂಲಕ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಬೆಳೆಯಬೇಕು' ಎಂದು ಹೇಳಿದ್ದಾರೆ.

English summary
The stents manufactured in India is as good as American Xience stents said study report. Several multinational stent companies had threatened to withdraw their stents from India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X