ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಎರಡನೇ ಅಲೆಯಿಂದ ತಪ್ಪಿಸಿಕೊಳ್ಳಲು ನೀವು ಮಾಡಬೇಕಾಗಿದ್ದೇನು?

|
Google Oneindia Kannada News

ನವದೆಹಲಿ, ಮಾರ್ಚ್ 22: ದೇಶಾದ್ಯಂತ ಕೊರೊನಾವೈರಸ್ ಹರಡುವಿಕೆಯ ಎರಡನೇ ಹಂತ ಆರಂಭವಾಗಿರುವ ಮುನ್ಸೂಚನೆ ದೊರೆಯುತ್ತಿರುವ ಬೆನ್ನಲ್ಲೇ ದೇಶದ ಜನರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಚ್ಚರಿಕೆಯ ಗಂಟೆ ರವಾನಿಸುತ್ತಿವೆ.

ಈ ಹಂತದಲ್ಲಿ ಜನಸಾಮಾನ್ಯರು ಎಚ್ಚರಿಕೆ ವಹಿಸದಿದ್ದರೆ, ಅನಾಹುತಕ್ಕೆ ನಾವೇ ತೆರೆದುಕೊಂಡಂತಾಗುತ್ತದೆ. ಹೀಗಾಗಿ ಈ ಹಿಂದಿನಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಕೊರೊನಾವೈರಸ್ ಹರಡದಂತೆ ಗಮನವಹಿಸಬೇಕು.

ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮುಂಬೈ ಪಾಲಿಕೆಯ ಹೊಸ ಮಾರ್ಗಸೂಚಿಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮುಂಬೈ ಪಾಲಿಕೆಯ ಹೊಸ ಮಾರ್ಗಸೂಚಿ

ಇಲ್ಲವಾದಲ್ಲಿ ಭಾರತ ಮತ್ತೆ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಹರ್ಷವರ್ಧನ್, ಮಹಾರಾಷ್ಟ್ರ, ಪಂಜಾಬ್, ಮಧ್ಯಪ್ರದೇಶ ಹಾಗೂ ತಮಿಳುನಾಡಿನಲ್ಲಿ ಪರಿಸ್ಥಿತಿ ಕೈಮೀರುತ್ತಿದೆ. ಈ ಹಂತದಲ್ಲಿ ನಿಯಂತ್ರಿಸದಿದ್ದರೆ, ಕಷ್ಟವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೆ ಮುಖ್ಯಮಂತ್ರಿಗಳ ಸಭೆಯಲ್ಲೂ ಧ್ವನಿ ಎತ್ತಿರುವ ಪ್ರಧಾನಿ ಮೋದಿ, ಪ್ರಕರಣ ಹೆಚ್ಚಾಗಿರುವ ರಾಜ್ಯಗಳಲ್ಲಿ ಕೂಡಲೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಮುಂದೆ, ಪ್ರಕರಣಗಳು, ದೇಶವ್ಯಾಪಿ ಹರಡಬಹುದು, ಇದು ಗಂಭೀರಸ್ವರೂಪಕ್ಕೆ ಎಡೆಮಾಡಕೊಡಲಿದೆ.

"ಕೊರೊನಾ 2ನೇ ಅಲೆ ನಿಯಂತ್ರಣಕ್ಕೆ ಸಹಕಾರ ಅಗತ್ಯ"

ಹೀಗಾಗಿ ನಿಯಂತ್ರಣಕ್ಕೆ ರಾಜ್ಯಗಳು ಈಗಲೇ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು, ಪ್ರಧಾನಿ ಎಚ್ಚರಿಸಿದ್ದಾರೆ. ಹಾಗೆಯೇ ಇದಕ್ಕೆ ಪೂರಕವಾಗಿ ಮಾತನಾಡಿರುವ ಹರ್ಷವರ್ಧನ್, ಲಸಿಕೆ ಬಂದಿದೆ ಎಂದಾಕ್ಷಣ ನಿರ್ಲಕ್ಷ್ಯವಹಿಸಲು ಸಾಧ್ಯವಿಲ್ಲ.

ಬದಲಾಗಿ, ಲಸಿಕೆ ಜತೆಗೆ ಈ ಹಿಂದೆ ಕೋವಿಡ್ 19 ಹೋರಾಟದಲ್ಲಿ ನಾವು ತೆಗೆದುಕೊಂಡಿರುವ ಸುರಕ್ಷತಾ ನಿಯಮಗಳನ್ನು ಈಗಲೂ ಪಾಲಿಸುವ ಅಗತ್ಯವಿದೆ ಎಂದಿದ್ದಾರೆ. ರಾಜ್ಯ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಕೂಡ ಇದನ್ನೇ ಹೇಳಿದ್ದು, ಜನರು ಜಾಗೃತ ಕ್ರಮಗಳನ್ನು ತೆಗೆದುಕೊಳ್ಳಲೇ ಬೇಕು ರಾಜ್ಯಕ್ಕೆ ಕಠಿಣ ಕ್ರಮಗಳು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೊನಾ 2ನೇ ಅಲೆ ಹೆಚ್ಚಾಗುವುದರ ಹಿಂದಿನ ಗುಟ್ಟುಮಹಾರಾಷ್ಟ್ರದಲ್ಲಿ ಕೊರೊನಾ 2ನೇ ಅಲೆ ಹೆಚ್ಚಾಗುವುದರ ಹಿಂದಿನ ಗುಟ್ಟು

ಹಾಗೆಂದರೆ ಎರಡನೇ ಹಂತದ ಕೊರೊನಾವೈರಸ್ ಹರಡುವಿಕೆ ತಡೆಯಲು ಸಾರ್ವಜನಿಕರು ಮಾಡಬೇಕಾದ ಹಾಗೂ ಮಾಡಬಾರದ ಕೆಲಸಗಳೇನು?

 ಕೊರೊನಾ ಸೋಂಕು ನಿಯಂತ್ರಣಕ್ಕೆ ಜನರು ಏನು ಮಾಡಬೇಕು?

ಕೊರೊನಾ ಸೋಂಕು ನಿಯಂತ್ರಣಕ್ಕೆ ಜನರು ಏನು ಮಾಡಬೇಕು?

  • ವೈಯಕ್ತಿಕ ಸ್ವಚ್ಛತೆಯ ಜತೆಗೆ ಪ್ರತಿಯೊಂದು ಬಾಹ್ಯ ಸ್ಪರ್ಶದ ಬಳಿಕ ಕಡ್ಡಾಯವಾಗಿ ಸೋಪು ಹಚ್ಚಿ 20 ಸೆಕೆಂಡುಗಳ ಕಾಲ ಕೈತೊಳೆಯಬೇಕು.
  • ನಮ್ಮ ಜತೆಯಲ್ಲಿ ಸ್ಯಾನಿಟೈಸರ್‌ನ್ನು ಯಾವಾಗಲೂ ಇರಿಸಿಕೊಂಡು, ಅಗತ್ಯವಿದ್ದಾಗ ಕಡ್ಡಾಯವಾಗಿ ಸ್ಯಾನಿಟೈಸರ್ ಬಳಸಿ ಕೈ ಶುದ್ಧೀಕರಿಸಿಕೊಳ್ಳಬೇಕು
  • ಮನೆಯಿಂದ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು
  • ಪ್ರತಿಬಾರಿ ಕೆಮ್ಮುವಾಗಲೂ ಬಾಯಿಗೆ ಟಿಶ್ಯೂ ಅಥವಾ ಕರವಸ್ತ್ರವನ್ನು ಅಡ್ಡವಾಗಿರಿಸಿಕೊಳ್ಳಬೇಕು.
  • ಮಾಸ್ಕ್ ಧರಿಸಿಕೊಂಡಾಗ ಕೆಮ್ಮುವಾಗ ಮಾಸ್ಕ್‌ನ್ನು ತೆಗೆಯಬೇಡಿ, ಬಳಸಿದ ಟಿಶ್ಯೂಗಳನ್ನು ಮುಚ್ಚಿದ ಕಸದಬುಟ್ಟಿಗೆ ಹಾಕಿ.
  • ಪಿಪಿಇ ಕಿಟ್, ಮಾಸ್ಕ್, ಗ್ಲೌಸ್ ಸೇರಿ ಇತರೆ ಸುರಕ್ಷತಾ ವಸ್ತುಗಳನ್ನು ವೈಜ್ಞಾನಿಕವಾಗಿ ಎಸೆಯಬೇಕು.
  • ಸಾರ್ವಜನಿಕ ಪ್ರದೇಶಗಳಲ್ಲಿ ಕಡ್ಡಾಯವಾಗಿ 6 ಅಡಿ ಅಂತರ ಕಾಯ್ದುಕೊಳ್ಳಿ, ಅವಕಾಶವಿದ್ದರೆ ಮನೆಯಿಂದಲೇ ಕೆಲಸ ಮಾಡಿ.
  • ಆರೋಗ್ಯದಲ್ಲಿ ಏರುಪೇರಿದ್ದರೆ ಮನೆಯಲ್ಲಿಯೇ ಇರಿ, ಒಂದೊಮ್ಮೆ ಜ್ವರ, ಕೆಮ್ಮು, ನೆಗಡಿ ಹಾಗೂ ಉಸಿರಾಟದಲ್ಲಿ ಸಮ್ಯೆಯಾದರೆ ಕೂಡಲೇ ವೈದ್ಯಕೀಯ ನೆರವು ಪಡೆದುಕೊಳ್ಳಿ.
 ಜನರು ಮಾಡಬಾರದ್ದೇನು?

ಜನರು ಮಾಡಬಾರದ್ದೇನು?

  • ಮುಖ, ಕಣ್ಣು ಮೂರು ಹಾಗೂ ಬಾಯಿಯನ್ನು ಕೈಯಿಂದ ಮುಟ್ಟುವುದನ್ನು ತಪ್ಪಿಸಿ.
  • ಜನನಿಬಿಡ ಪ್ರದೇಶಗಳಿಗೆ ಹೋಗಬೇಡಿ
  • ಜನರೊಂದಿಗೆ ನಿಕಟ ಸಂಪರ್ಕದಿಂದ ದೂರವಿರಿ
  • ಮಾಲ್, ಜಿಮ್, ಹೋಟೆಲ್‌ಗಳಿಗೆ ಭೇಟಿ ನೀಡಬೇಡಿ
  • ಬೇರೆ ನಗರ, ರಾಜ್ಯ, ಅಥವಾ ದೇಶಗಳಿಗೆ ಅನಗತ್ಯ ಭೇಟಿ ನಿಯಂತ್ರಿಸಿ, ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳಬೇಡಿ
 ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ

ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ

  • ಎಲ್ಲಾ ಸರ್ಕಾರಿ ಕಚೇರಿಗಳ, ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನ್ ಬಳಸಿ.
  • ಪ್ರವೇಶದ್ವಾರದಲ್ಲಿ ಸ್ಯಾನಿಟೈಸರ್ ಬಳಕೆ ಕಡ್ಡಾಯಗೊಳಿಸಿ
  • ರೋಗದ ಯಾವುದೇ ಗುಣಲಕ್ಷಣಗಳು ಕಂಡುಬಂದರೆ, ಕೂಡಲೇ ಚಿಕಿತ್ಸೆ, ಕ್ವಾರಂಟೈನ್‌ಗೆ ಸೂಚಿಸಿ
  • ಸರ್ಕಾರಿ ಕಚೇರಿಗಳಿಗೆ ಅಧಿಕ ಪ್ರಮಾಣದಲ್ಲಿ ಭೇಟಿ ನೀಡುವವರನ್ನು ನಿಯಂತ್ರಿಸಿ
  • ಪ್ರತಿದಿನ ಹೊರಗಿನವರಿಗೆ ನೀಡುವ ಪ್ರವೇಶ ಚೀಟಿ, ತಾತ್ಕಾಲಿಕ ರದ್ದುಪಡಿಸಿ
  • ಸರ್ಕಾರಿ ಅಧಿಕಾರಿಗಳಿಂದ ಅನುಮತಿ ಪಡೆದವರಿಗೆ ಮಾತ್ರ ನಿಯಮಿತವಾಗಿ ಪ್ರವೇಶ ನೀಡಿ.
    *ಆದಷ್ಟು ವಿಡಿಯೋ ಕಾನ್ಫರೆನ್ಸ್ ಮೂಲಕವೇ ಸಭೆಗಳನ್ನು ನಡೆಸಿ
  • ಸಭೆಯಲ್ಲಿ ಭಾಗವಹಿಸುವವರ ಸಂಖ್ಯೆ ದೊಡ್ಡಪ್ರಮಾಣದ್ದಾಗಿದ್ದರೆ ರದ್ದುಗೊಳಿಸಿ
  • ಅಷ್ಟೇನು ಅಗತ್ಯವಿರದಿದ್ದರೆ ಸರ್ಕಾರಿ ಪ್ರವಾಸವನ್ನು ರದ್ದುಗೊಳಿಸಿ
  • ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಇ-ಮೇಲ್‌ಗಳ ಮೂಲಕ ದಾಖಲೆಗಳನ್ನು ಕಳುಹಿಸಿ, ಭೌತಿಕವಾಗಿ ಕಡತಗಳನ್ನು ಕಳುಹಿಸುವುದನ್ನು ನಿಯಂತ್ರಿಸಿ.
  • ಪತ್ರಗಳ ಸ್ವೀಕೃತಿ ಹಾಗೂ ರವಾನೆಗೆ ಕಚೇರಿಯ ಮುಂಭಾಗದಲ್ಲೇ ವ್ಯವಸ್ಥೆ ಮಾಡಿ
  • ಎಲ್ಲಾ ಜಿಮ್, ಮನರಂಜನಾ ಕೇಂದ್ರ ಹಾಗೂ ಇತರೆ ಸೌಕರ್ಯಗಳನ್ನು ಸರ್ಕಾರಿ ಕಚೇರಿಗಳಲ್ಲಿ ರದ್ದುಗೊಳಿಸಿ.
  • ಕಾರ್ಯಸ್ಥಾನದಲ್ಲಿ ನಿರಂತರವಾಗಿ ಸ್ವಚ್ಛತೆ ಬಗ್ಗೆ ಗಮನವಹಿಸಿ
  • ಸರ್ಕಾರಿ ಕಚೇರಿಗಳಲ್ಲಿನ, ಶೌಚಾಲಯಗಳಲ್ಲಿ ಅಗತ್ಯವಿರುವ ಸ್ಯಾನಿಟೈಸರ್, ಸೋಪು ಹಾಗೂ ನೀರಿನ ಪೂರೈಕೆಯತ್ತ ಗಮನಹರಿಸಿ.
  • ಯಾವುದೇ ಸಿಬ್ಬಂದಿಗೆ ರೋಗ ಲಕ್ಷಣ ಕಂಡುಬಂದರೆ ಕೂಡಲೇ ರಜೆ ಕೊಟ್ಟು ಕಳುಹಿಸಿ ಹಾಗೂ ಚಿಕಿತ್ಸೆ ಬಗ್ಗೆ ಸರ್ಕಾರದ ನಿಯಮಗಳ ಪ್ರಕಾರ ಕ್ರಮ ತೆಗೆದುಕೊಳ್ಳಿ
  • ಸಿಬ್ಬಂದಿ ಸ್ವಯಂ ಕ್ವಾರಂಟೈನ್‌ಗೆ ಬಯಸಿದಾಗ ಕೂಡಲೇ ರಜೆ ಮಂಜೂರು ಮಾಡಿ.
  • ಗರ್ಭಿಣಿ, ತುರ್ತು ವೈದ್ಯಕೀಯ ಸಮಸ್ಯೆ ಹಾಗೂ ವಯಸ್ಕ ಸಿಬ್ಬಂದಿಯನ್ನು ಮುನ್ನೆಲೆಯಲ್ಲಿ ದುಡಿಸಿಕೊಳ್ಳದೆ, ಸಾರ್ವಜನಿಕರೊಂದಿಗೆ ಹೆಚ್ಚು ಸಂಪರ್ಕವಿರದ ಸುರಕ್ಷತಾ ಕೆಲಸಗಳನ್ನು ನೀಡಿ.
 ಲಸಿಕೆ ಬಂದಿದೆ ಎಂದು ನಿರ್ಲಕ್ಷ್ಯ ಬೇಡಿ

ಲಸಿಕೆ ಬಂದಿದೆ ಎಂದು ನಿರ್ಲಕ್ಷ್ಯ ಬೇಡಿ

ಹೀಗಾಗಿ ನಿಯಂತ್ರಣಕ್ಕೆ ರಾಜ್ಯಗಳು ಈಗಲೇ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು, ಪ್ರಧಾನಿ ಎಚ್ಚರಿಸಿದ್ದಾರೆ. ಹಾಗೆಯೇ ಇದಕ್ಕೆ ಪೂರಕವಾಗಿ ಮಾತನಾಡಿರುವ ಹರ್ಷವರ್ಧನ್, ಲಸಿಕೆ ಬಂದಿದೆ ಎಂದಾಕ್ಷಣ ನಿರ್ಲಕ್ಷ್ಯವಹಿಸಲು ಸಾಧ್ಯವಿಲ್ಲ. ಬದಲಾಗಿ, ಲಸಿಕೆ ಜತೆಗೆ ಈ ಹಿಂದೆ ಕೋವಿಡ್ 19 ಹೋರಾಟದಲ್ಲಿ ನಾವು ತೆಗೆದುಕೊಂಡಿರುವ ಸುರಕ್ಷತಾ ನಿಯಮಗಳನ್ನು ಈಗಲೂ ಪಾಲಿಸುವ ಅಗತ್ಯವಿದೆ ಎಂದಿದ್ದಾರೆ.

English summary
As India recorded 43,846 new coronavirus infections in the last 24 hours, sharpest daily high in nearly four months, the country stares at a likely second wave of the coronavirus pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X