ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನ್‌ಗೆ 50,000 ಮೆಟ್ರಿಕ್ ಟನ್ ಗೋಧಿ ನೀಡಲಿದೆ ಭಾರತ

|
Google Oneindia Kannada News

ನವದೆಹಲಿ, ಫೆಬ್ರವರಿ 13; ಭಾರತ ಸರ್ಕಾರ ವಿಶ್ವಸಂಸ್ಥೆ ಆಹಾರ ನೆರವು ಯೋಜನೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಅನ್ವಯ ಮಾನವೀಯ ನೆರವಿನ ಅನ್ವಯ ಅಫ್ಘಾನಿಸ್ತಾನಕ್ಕೆ 50,000 ಮೆಟ್ರಿಕ್ ಟನ್ ಗೋಧಿಯನ್ನು ಸರಬರಾಜು ಮಾಡಲಿದೆ. ಫೆಬ್ರವರಿ 20ರ ಬಳಿಕ ಈ ಕಾರ್ಯ ಆರಂಭವಾಗಲಿದೆ.

ವಿಶ್ವಸಂಸ್ಥೆ ಆಹಾರ ನೆರವು ಯೋಜನೆ (ಡಬ್ಲ್ಯೂಎಫ್ಪಿ) ಒಪ್ಪಂದದಂತೆ ಪಂಜಾಬ್ ವಿಧಾನಸಭೆ ಚುನಾವಣೆ ಬಳಿಕ ಪಾಕಿಸ್ತಾನದ ರಸ್ತೆಯ ಮೂಲಕ ಗೋಧಿಯನ್ನು ಲಾರಿಗಳ ಮೂಲಕ ಬೆಂಗಾವಲು ಪಡೆಯೊಂದಿಗೆ ಕಳುಹಿಸಿಕೊಡಲಿದೆ.

ಅಫ್ಘಾನ್‌ಗೆ ಗೋಧಿ, ಔಷಧ ಸಾಗಿಸಲು ಭಾರತಕ್ಕೆ ಪಾಕ್ ಒಪ್ಪಿಗೆಅಫ್ಘಾನ್‌ಗೆ ಗೋಧಿ, ಔಷಧ ಸಾಗಿಸಲು ಭಾರತಕ್ಕೆ ಪಾಕ್ ಒಪ್ಪಿಗೆ

ರೋಮ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯುಲ್ಲಿ ಈ ಒಪ್ಪಂದವನ್ನು ಪ್ರಕಟಿಸಿ, ಸಹಿ ಹಾಕಲಾಗಿದೆ. ರಾಯಭಾರಿ ನೀನಾ ಮಲ್ಹೋತ್ರಾ ಅಫ್ಘಾನಿಸ್ತಾನದ ಕಂದಹಾರ್‌ಗೆ ಗೋಧಿ ತಲುಪಿಸುವ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಒಪ್ಪಂದ ಪತ್ರವನ್ನು ಅವರು ಹಸ್ತಾಂತರ ಮಾಡಿದರು.

ಪಾಕ್ ಮೂಲಕ ಅಫ್ಘಾನ್‌ಗೆ ಗೋಧಿ ಸಾಗಿಸಲು ಭಾರತಕ್ಕೆ ಇಮ್ರಾನ್ ಒಪ್ಪಿಗೆ ಪಾಕ್ ಮೂಲಕ ಅಫ್ಘಾನ್‌ಗೆ ಗೋಧಿ ಸಾಗಿಸಲು ಭಾರತಕ್ಕೆ ಇಮ್ರಾನ್ ಒಪ್ಪಿಗೆ

Wheat

ರೋಮ್‌ನಲ್ಲಿರುವ ಡಬ್ಲ್ಯೂಎಫ್ಪಿ ಮುಖ್ಯ ಕಚೇರಿ ಟ್ವೀಟ್ ಮಾಡಿದ್ದು, "ಭಾರತಕ್ಕೆ ಧನ್ಯವಾದ ತಿಳಿಸಿದೆ. ಆಹಾರದ ಕೊರತೆ ಎದುರಿಸುತ್ತಿರುವ ಅಫ್ಘಾನಿಸ್ತಾನಕ್ಕೆ ಗೋಧಿ ಪೂರೈಕೆ ಮಾಡುವುದು ಮಾನವೀಯ ನೆರವಿನ ಹೆಗ್ಗುರುತು ಆಗಲಿದೆ" ಎಂದು ಹೇಳಿದೆ.

 ಎಂಎಸ್‌ಪಿ ದರದಲ್ಲಿ ದಾಖಲೆ ಪ್ರಮಾಣದ ಗೋಧಿ ಖರೀದಿಸಿದ ಕೇಂದ್ರ ಎಂಎಸ್‌ಪಿ ದರದಲ್ಲಿ ದಾಖಲೆ ಪ್ರಮಾಣದ ಗೋಧಿ ಖರೀದಿಸಿದ ಕೇಂದ್ರ

ಭಾರತ ಸಹಿ ಹಾಕಿರುವ ಒಪ್ಪಂದದ ಪ್ರಕಾರ ಫೆಬ್ರವರಿ 20ರ ಬಳಿಕ ಗೋಧಿ ರವಾನೆ ಮಾಡು ಕಾರ್ಯ ಆರಂಭವಾಗಲಿದೆ. ಪಾಕಿಸ್ತಾನದ ಮೂಲಕ ಅಫ್ಘಾನ್ ಗಡಿ ದಾಟಿ, ಕಂದಹಾರ್‌ನಲ್ಲಿ ಡಬ್ಲ್ಯುಎಫ್‌ಪಿ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗುತ್ತದೆ.

ಗೋಧಿಯನ್ನು 10,000 ಮೆಟ್ರಿಕ್ ಟನ್‌ ಐದು ವಿಭಾಗವಾಗಿ ವಿಂಗಡನೆ ಮಾಡಲಾಗುತ್ತದೆ. ದೇಶದ ಎಲ್ಲಾ ಭಾಗಗಳಿಗೆ ಲಭ್ಯವಾಗುವಂತೆ 200 ಟ್ರಕ್‌ಗಳ ಮೂಲಕ ವಿತರಣೆ ಮಾಡಲಾಗುತ್ತದೆ. ಡಬ್ಲ್ಯುಎಫ್‌ಪಿ ಅಫ್ಘಾನಿಸ್ತಾನದಲ್ಲಿ ತನ್ನದೇ ಆದ ಲಾಜಿಸ್ಟಿಕ್ಸ್ ನೆಟ್‌ವರ್ಕ್ ನಡೆಸುತ್ತಿದೆ.

ಡಬ್ಲ್ಯುಎಫ್‌ಪಿ ನಾಗರಿಕ ಗುಂಪುಗಳೊಂದಿಗೆ ಪಾಲುದಾರಿಕೆ ಹೊಂದಿದ್ದು ಅಪೌಷ್ಟಿಕತೆಯನ್ನು ಎದುರಿಸುತ್ತಿರುವ ಅಫ್ಘಾನ್ ಜನರಿಗೆ ನೆರವಾಗಲು ಆಹಾರ ಪೂರೈಕೆಗಾಗಿ ಜಾಗತಿಕ ಅಭಿಯಾನ ಆರಂಭಿಸಿದೆ. ದೇಶದ ಜನಸಂಖ್ಯೆಯ ಅರ್ಧದಷ್ಟು ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

ಡಬ್ಲ್ಯೂಎಫ್ಪಿ ಭಾರತದ ದೇಶದ ನಿರ್ದೇಶಕ ಬಿಶೋ ಪರಾಜುಲಿ ಮಾತನಾಡಿ, "ನಮ್ಮ ಮುಂದಿರುವ ಕಾರ್ಯವು ಭಾರತದ ಬದ್ಧತೆಯ ಅತ್ಯಂತ ಮಹತ್ವದ ಕಾರ್ಯವಾಗಿದೆ. ವಿಶೇಷವಾಗಿ ಸಾಂಕ್ರಾಮಿಕದ ಸಮಯದಲ್ಲಿ ದೇಶ ಈ ಸಹಾಯ ಮಾಡುತ್ತಿದೆ. ಇನ್ನೂ ಹೆಚ್ಚಿನ ಧಾನ್ಯ ಸರಬರಾಜು ಭರವಸೆಯ್ನು ನಾವು ಹೊಂದಿದ್ದೇವೆ" ಎಂದು ಹೇಳಿದ್ದಾರೆ.

ಗೋಧಿಯನ್ನು ಪಾಕಿಸ್ತಾನದ ಮೂಲಕ ಸಾಗಣೆ ಮಾಡಬೇಕಾದ ಮಾರ್ಗ ಸೇರಿದಂತೆ ಇತರ ವಿವರಗಳನ್ನು ಭಾರತ, ಪಾಕಿಸ್ತಾನ ಮತ್ತು ಅಫ್ಘಾನ್ ಅಧಿಕಾರಿಗಳು ಇನ್ನೂ ಅಂತಿಮಗೊಳಿಸಬೇಕಿದೆ. ನವೆಂಬರ್ 2021ರಲ್ಲಿ ಭೂ ಮಾರ್ಗವನ್ನು ಬಳಸುವ ಭಾರತದ ಪ್ರಸ್ತಾವನೆಯನ್ನು ಪಾಕ್ ತೆರವುಗೊಳಿಸಿತ್ತು.

ತಾಲಿಬಾನ್ ಆಡಳಿತವು ಈ ಪ್ರಸ್ತಾಪವನ್ನು ಸ್ವಾಗತಿಸಿತ್ತು. ಆದರೆ ಪಾಕಿಸ್ತಾನಿ ಸರ್ಕಾರವು ಭಾರತೀಯ ಲಾರಿಗಳ ಸಂಚಾರಕ್ಕೆ ಅನುಮತಿ ನೀಡಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಗೋಧಿ ಸಾಗಾಟಕ್ಕೆ ಮಾತ್ರ ಲಾರಿಗಳ ಸಂಚಾರಕ್ಕೆ ಪಾಕಿಸ್ತಾನ ಒಪ್ಪಿಗೆ ನೀಡುವ ಸಾಧ್ಯತೆ ಇದೆ.

ಪಂಜಾಬ್ ವಿಧಾನಸಭೆ ಚುನಾವಣೆ ಮೊದಲು ಫೆಬ್ರವರಿ 16ಕ್ಕೆ ನಿಗದಿಯಾಗಿತ್ತು. ಬಳಿಕ ಅದು ಫೆಬ್ರವರಿ 20ಕ್ಕೆ ಮುಂದೂಡಲ್ಪಟ್ಟಿತು. ಪಂಜಾಬ್ ಚುನಾವಣೆಯ ಕಾರಣಗಳಿಂದಾಗಿ ಗೋಧಿ ಸಾಗಾಟ ಪ್ರಕ್ರಿಯೆ ವಿಳಂಬವಾಗುತ್ತಿದೆ. ಸುಮಾರು 3,000 ಮೆಟ್ರಿಕ್‌ ಟನ್ ಗೋಧಿ ಪಂಜಾಬ್ ಗಡಿಯ ಸಾಗಾಟ ನಡೆಯುವ ಸಾಧ್ಯತೆ ಇದೆ.

ದೇಶದ ಆಹಾರದ ಸಮಸ್ಯೆ ಬಗೆಹರಿಸಲು ವಿವಿಧ ದೇಶಗಳು ತಾಲಿಬಾನ್ ಸರ್ಕಾರಕ್ಕೆ ಸಹಾಯ ಮಾಡುತ್ತಿವೆ. ಅಫ್ಘಾನಿಸ್ತಾನಕ್ಕೆ ಇರಾನ್ ಗೋಧಿಯನ್ನು ಚಬಹಾರ್ ಬಂದರಿನ ಮೂಲಕ ಮತ್ತು ನಂತರ ಜಹೇದನ್ ಮೂಲಕ ತಲುಪಿಸಲಿದೆ.

2019ರಿಂದ ಭಾರತದಿಂದ ಎಲ್ಲಾ ರಫ್ತುಗಳಿಗಾಗಿ ಪಾಕಿಸ್ತಾನದ ಮಾರ್ಗ ಮುಚ್ಚಲಾಗಿದೆ ಮತ್ತು ವಿನಾಯಿತಿಯಾಗಿ ಮಾತ್ರ ತೆರೆಯಲಾಗಿದೆ. ಗೋಧಿಯನ್ನು ಲೋಡ್ ಮಾಡಲು ಮತ್ತು ಅನ್‌ಲೋಡ್ ಮಾಡಲು ಮೂಲಸೌಕರ್ಯ ಮತ್ತು ಕಾರ್ಮಿಕರು ಬೇಕಾಗಿರುವುದರಿಂದ ಸಾಗಣೆಗೆ ಹಲವಾರು ವಾರಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಆಗಸ್ಟ್ 2019ರಲ್ಲಿ ಪಾಕಿಸ್ತಾನವು ಭಾರತದೊಂದಿಗಿನ ಎಲ್ಲಾ ವ್ಯಾಪಾರವನ್ನು ಸ್ಥಗಿತಗೊಳಿಸಿತ್ತು. ಭಾರತಕ್ಕೆ ಅಫ್ಘಾನ್ ರಫ್ತುಗಳನ್ನು ವಾಘಾ ಗಡಿಯ ಮೂಲಕ ಹಾದುಹೋಗಲು ಅವಕಾಶ ಮಾಡಿಕೊಟ್ಟಿತ್ತು. ಭಾರತದಿಂದ ಔಷಧಿಗಳ ಸಾಗಾಟಾಕ್ಕೆ ವಿನಾಯಿತಿ ನೀಡಲಾಗಿದೆ. ಕೋವಿಡ್ ಸಮಯದಲ್ಲಿ. ಭಾರತವು ಹಲವಾರು ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಅಫ್ಘಾನಿಸ್ತಾನಕ್ಕೆ ವಿಮಾನಗಳಲ್ಲಿ ಸಾಗಣೆ ಮಾಡಿದೆ.

English summary
India will send 50,000 MT of wheat to Afghanistan as a part ofhumanitarian assistance. In Rome India has signed an agreement with the United Nation’s World Food Programme (WFP).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X