ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆರಿಗೆ ಭಯೋತ್ಪಾದನೆಯಿಂದ ತೆರಿಗೆ ಪಾರದರ್ಶಕತೆಯೆಡೆಗೆ ಸಾಗಿದ ಭಾರತ: ಮೋದಿ

|
Google Oneindia Kannada News

ನವದೆಹಲಿ, ನವೆಂಬರ್ 11: ಕಳೆದ ಆರು ವರ್ಷಗಳಲ್ಲಿ ನಡೆದ ತೆರಿಗೆ ಸುಧಾರಣೆಗಳಿಂದಾಗಿ ತೆರಿಗೆ ಭಯೋತ್ಪಾದನೆಯಿಂದ ತೆರಿಗೆ ಪಾರದರ್ಶಕತೆಗೆ ದೇಶ ಬದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕಟಕ್‌ನಲ್ಲಿ ಬುಧವಾರ ಆದಾಯ ತೆರಿಗೆ ನ್ಯಾಯಮಂಡಳಿ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಕಾರ್ಪೊರೇಟ್ ತೆರಿಗೆ ದರದ ಇಳಿಕೆ, ವೈಯಕ್ತಿಕ ತೆರಿಗೆದಾರರ ಸರಳೀಕೃತ ದರ ವ್ಯವಸ್ಥೆ, ಆನ್‌ಲೈನ್ ಮನವಿಗಳು ಮತ್ತು ಕ್ಷಿಪ್ರ ಮರುಪಾವತಿಯ ಬಗ್ಗೆ ಪ್ರಮುಖವಾಗಿ ಮಾತನಾಡಿದರು.

ಬಿಹಾರ ಚುನಾವಣೆ ಗೆಲುವಿನ ಗುಟ್ಟು ಬಿಚ್ಚಿಟ್ಟ ಪ್ರಧಾನಿ ಮೋದಿ!ಬಿಹಾರ ಚುನಾವಣೆ ಗೆಲುವಿನ ಗುಟ್ಟು ಬಿಚ್ಚಿಟ್ಟ ಪ್ರಧಾನಿ ಮೋದಿ!

'ಹಿಂದಿನ ಸರ್ಕಾರಗಳಲ್ಲಿ ತೆರಿಗೆ ಭಯೋತ್ಪಾದನೆಯು ಸಾಮಾನ್ಯವಾಗಿತ್ತು. ದೇಶವು ಅದನ್ನು ಹಿಂದೆ ಸರಿಸಿ ತೆರಿಗೆ ಪಾರದರ್ಶಕತೆಯತ್ತ ಮುನ್ನಡೆದಿದೆ. ತೆರಿಗೆ ಭಯೋತ್ಪಾದನೆಯಿಂದ ತೆರಿಗೆ ಪಾರದರ್ಶಕತೆಯೆಡೆಗಿನ ಬದಲಾವಣೆಯು ನಾವು ಸುಧಾರಣೆ, ಪ್ರದರ್ಶನ ಮತ್ತು ಪರಿವರ್ತನೆಯ ಪರಿಕಲ್ಪನೆಯನ್ನು ಜಾರಿಗೆ ತಂದಿದ್ದರಿಂದ ಸಾಧ್ಯವಾಗಿದೆ' ಎಂದರು.

India Shifted From Tax Terrorism To Tax Transparency: Narendra Modi

ಜಗತ್ತಿಗೆ ಪ್ರಜಾಪ್ರಭುತ್ವದ ಪಾಠ ಮಾಡಿದ ಬಿಹಾರದ ಜನತೆ: ಪ್ರಧಾನಿ ಮೋದಿ ಜಗತ್ತಿಗೆ ಪ್ರಜಾಪ್ರಭುತ್ವದ ಪಾಠ ಮಾಡಿದ ಬಿಹಾರದ ಜನತೆ: ಪ್ರಧಾನಿ ಮೋದಿ

ಸ್ವಾತಂತ್ರ್ಯದ ನಂತರ ತೆರಿಗೆ ಪಾವತಿದಾರ ಮತ್ತು ತೆರಿಗೆ ಸಂಗ್ರಹಕಾರರ ನಡುವಿನ ಶೋಷಿತ ಮತ್ತು ಶೋಷಣೆ ಮಾಡುವವರ ಸಂಬಂಧಗಳನ್ನು ಬದಲಿಸಲು ಹೆಚ್ಚಿನ ಪ್ರಯತ್ನಗಳೇನೂ ನಡೆದಿರಲಿಲ್ಲ. ಆದರೆ ಈಗ ಬದಲಾವಣೆ ಆಗುತ್ತಿದೆ. ಆನ್‌ಲೈನ್ ಅರ್ಜಿ, ತ್ವರಿತ ಮರುಪಾವತಿ ಮತ್ತು ವಿವಾದ ಬಗೆಹರಿಸುವ ವ್ಯವಸ್ಥೆಯನ್ನು ನಾವು ತಂದಿದ್ದೇವೆ ಎಂದು ತಿಳಿಸಿದರು.

English summary
PM Narendra Modi said in past six years India has moved from Tax terrorism to tax transparency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X