ರಾಜ್‌ಪಥ್‌ನಲ್ಲಿ 67ನೇ ಗಣರಾಜ್ಯೋತ್ಸವ ಸಂಭ್ರಮ

Subscribe to Oneindia Kannada

ನವದೆಹಲಿ, ಜನವರಿ, 26: 67ನೇ ಗಣರಾಜ್ಯೋತ್ಸವದ ಭಾಷಣ ಮಾಡಲು ಪ್ರಧಾನಿ ನರೇಂದ್ರ ಮೋದಿ ನವದೆಹಲಿಯ ರಾಜ್ ಪಥ್ ಗೆ ಆಗಮಿಸಿದ್ದಾರೆ. ಮುಖ್ಯ ಅತಿಥಿಯಾಗಿ ಫ್ರಾನ್ಸ್‌ ಅಧ್ಯಕ್ಷ ಫ್ರಾಂಕೋಯಿಸ್‌ ಹೊಲಾಂಡೆ ಭಾಗವಹಿಸುತ್ತಿರುವುದು ಈ ಬಾರಿಯ ವಿಶೇಷ.

ಬಿಗಿ ಭದ್ರತೆಯ ನಡುವೆಯೂ ಸಾವಿರಾರು ಜನ ರಾಜ್ ಪಥ್ ನಲ್ಲಿ ಸೇರಿದ್ದಾರೆ. 49,000 ಭದ್ರತಾ ಸಿಬಂದಿ ಗಣರಾಜ್ಯೋತ್ಸವ ಕಾರ್ಯಕ್ರಮದ ಮೇಲೆ ಹತ್ತಿರದಿಂದ ಕಣ್ಗಾವಲು ಇಡಲಿದ್ದಾರೆ. ಮೆಟ್ರೋ ನಿಲ್ದಾಣ, ವಿಮಾನ ನಿಲ್ದಾಣ ಸಹಿತ ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

republic

26 ವರ್ಷಗಳ ಬಳಿಕ ಭಾರತೀಯ ಸೇನೆಯ ಶ್ವಾನ ಪಡೆಗಳು ಪಥ ಸಂಚಲನದಲ್ಲಿ ಭಾಗವಹಿಸಲಿರುವುದು ಮತ್ತೊಂದು ವಿಶೇಷ. 90 ನಿಮಿಷದ ಕಾರ್ಯಕ್ರಮ ನಡೆಯಲಿದ್ದು ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳು ಗಮನ ಸೆಳೆಯಲಿವೆ.

ಪಥಸಂಚಲನದ ನೇರ ಪ್ರಸಾರ ನೋಡಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The historic Rajpath is all decked up to showcase India's military might and other achievements on the occasion of 67th Republic Day celebrations on Tuesday. Here are the live updates of 67th Republic Day celebration.
Please Wait while comments are loading...