ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Covid-19 Vaccine: ತುರ್ತು ಸಂದರ್ಭದಲ್ಲಿ ಆಸ್ಟ್ರಾಜೆನಿಕಾ ಲಸಿಕೆ ಬಳಸಲು ಅನುಮತಿ

|
Google Oneindia Kannada News

ನವದೆಹಲಿ, ನವೆಂಬರ್.22: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಯಾವಾಗ ಸಿಗುತ್ತದೆಯೋ ಎಂದು ಜನರು ಎದುರು ನೋಡುತ್ತಿದ್ದಾರೆ. ಬ್ರಿಟಿಷ್-ಸ್ವಿಡಿಷ್ ಔಷಧೀಯ ಕಂಪನಿಗೆ ಇಂಗ್ಲೆಂಡ್ ಸರ್ಕಾರವು ಅನುಮೋದನೆ ನೀಡುವುದನ್ನು ನಿರೀಕ್ಷಿಸಲಾಗುತ್ತಿದೆ. ಅಂದುಕೊಂಡಂತೆ ನಡೆದರೆ ಪುಣೆ ಮೂಲದ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾಗೆ ಆಕ್ಸ್ ಫರ್ಡ್ ಮತ್ತು ಆಸ್ಟ್ರಾಜೆನಿಕಾ ಲಸಿಕೆ ತುರ್ತು ಬಳಕೆಗೆ ಅನುಮೋದನೆ ಸಿಗಲಿದೆ ಎಂದು ನೀತಿ ಆಯೋಗದ ಸದಸ್ಯ ವಿನೋದ್ ಪೌಲ್ ತಿಳಿಸಿದ್ದಾರೆ.
ಭಾರತದಲ್ಲಿ ಆಕ್ಸ್ ಫರ್ಡ್ ಲಸಿಕೆ ಅಭಿವೃದ್ಧಿ ಕಾರ್ಯವನ್ನು ಯೋಜನೆಗೆ ತಕ್ಕಂತೆ ಮೂರನೇ ಮತ್ತು ಅಂತಿಮ ಹಂತದ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ 2021ರ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಲಸಿಕೆ ವಿತರಣೆ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದು ನೀತಿ ಆಯೋಗವು ಹೇಳುತ್ತಿದೆ.

ಭಾರತದಲ್ಲಿ ಕೊರೊನಾಗೆ ಮೊದಲು ಸಿಗುವ ಲಸಿಕೆ ಯಾವುದು?
ಇಂಗ್ಲೆಂಡ್ ನಲ್ಲಿ ತುರ್ತು ಸಂದರ್ಭಗಳಲ್ಲಿ ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಆಕ್ಸ್ ಫರ್ಡ್ ಮತ್ತು ಆಸ್ಟ್ರಾಜೆನಿಕಾ ಲಸಿಕೆಯನ್ನು ಬಳಸಿಕೊಳ್ಳಲಾಗುತ್ತಿದೆ. ಒಂದು ವೇಳೆ ಅನುಮತಿ ನೀಡಿದರೆ ಭಾರತದಲ್ಲೂ ಈ ಲಸಿಕೆಯನ್ನು ಬಳಸಲಾಗುತ್ತದೆ ಎಂದು ವಿನೋದ್ ಪೌಲ್ ಹೇಳಿದ್ದಾರೆ.

India: Serum Institute May Get Authorization For Emergency Use Of Oxford-AstraZeneca Vaccine

Recommended Video

Covid Vaccine ಹಂಚುವಿಕೆ ಬಗ್ಗೆ ಮುಖ್ಯಮಂತ್ರಿಗಳ ಸಭೆ ಕರೆದ Modi | Oneindia Kannada

ಆದ್ಯತೆ ಮೇರೆಗೆ ಲಸಿಕೆ ಬಳಕೆ:
ಕೊರೊನಾವೈರಸ್ ಸೋಂಕಿತರಲ್ಲೇ ಆದ್ಯತೆ ಮೇರೆಗೆ ತುರ್ತು ಸಂದರ್ಭಗಳಲ್ಲಿ ಈ ಲಸಿಕೆಯನ್ನು ಬಳಸುವುದಕ್ಕೆ ಅನುಮತಿ ನೀಡಲಾಗಿದೆ. ವೈದ್ಯರು, ಹಿರಿಯ ನಾಗರಿಕರು ಸೇರಿದಂತೆ ಮೊದಲ ಸಾಲಿನಲ್ಲಿರುವ ಕೊವಿಡ್-19 ವಾರಿಯರ್ಸ್ ಗಳಿಗೆ ಮಾತ್ರ ಆರಂಭಿಕ ಹಂತದಲ್ಲಿ ಈ ಲಸಿಕೆಯನ್ನು ನೀಡಲಾಗುತ್ತಿದೆ. ಒಂದು ವಾರಕ್ಕೂ ಮೊದಲು ನಡೆಸಿದ ಪ್ರಯೋಗದಲ್ಲಿ ಆಕ್ಸ್ ಫರ್ಡ್ ಮತ್ತು ಆಸ್ಟ್ರಾಜೆನಿಕ್ ಲಸಿಕೆಯು ಹಿರಿಯ ನಾಗರಿಕರಲ್ಲಿ ಅತಿಹೆಚ್ಚು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದ ಅಂಶವು ತಿಳಿದು ಬಂದಿತ್ತು.
ಮೂರನೇ ಹಂತದಲ್ಲಿ ಕೊವಿಡ್-19 ಲಸಿಕೆಗಳು:
ಜಗತ್ತಿನಾದ್ಯಂತ ಈಗಾಗಲೇ ಮೂರು ಕೊರೊನಾವೈರಸ್ ಸೋಂಕಿನ ಲಸಿಕೆಗಳ ಪ್ರಯೋಗವು ಯಶಸ್ವಿಯಾಗಿ ನಡೆಯುತ್ತಿದೆ. ಬಯೋ-ಎನ್-ಟೆಕ್ ಕಂಪನಿಯ ಪಿ-ಫಿಜರ್, ರಷ್ಯಾದ ಸ್ಪುಟಿಕ್-ವಿ ಮತ್ತು ಮಾಡರ್ನಾ ಕಂಪನಿ ಲಸಿಕೆಗಳನ್ನು ಮೂರನೇ ಹಂತದ ವೈದ್ಯಕೀಯ ಪ್ರಯೋಗಕ್ಕೆ ಒಳಪಡಿಸಲಾಗಿದೆ. ಈ ಲಸಿಕೆಗಳು ಅಂತಿಮ ಹಂತದ ಪ್ರಯೋಗದಲ್ಲಿ ಶೇ.90ಕ್ಕಿಂತ ಹೆಚ್ಚು ಯಶಸ್ವಿ ಮತ್ತು ಪರಿಣಾಮಕಾರಿ ಎನಿಸಿರುವುದು ಹೊಸ ಭರವಸೆಯನ್ನು ಮೂಡಿಸಿದೆ.
ಸರ್ಕಾರಕ್ಕೆ ಮಾಡರ್ನ ಕಂಪನಿಯು ಕೊರೊನಾವೈರಸ್ ಲಸಿಕೆಯನ್ನು ಮಾರಾಟ ಮಾಡುವುದಕ್ಕೆ ಸಿದ್ಧವಾಗಿದೆ. ಒಂದು ಡೋಸ್ ಕೊವಿಡ್-19 ಲಸಿಕೆಗೆ 1854 ರೂಪಾಯಿಯಿಂದ 2744 ರೂಪಾಯಿ ನಿಗದಿಗೊಳಿಸಲಾಗುತ್ತದೆ ಎಂದು ಕಂಪನಿಯ ಸಿಇಓ ಸ್ಟೆಫನ್ ಬ್ಯಾನ್ಸಲ್ ತಿಳಿಸಿದ್ದಾರೆ.

English summary
India: Serum Institute May Get Authorization For Emergency Use Of Oxford-AstraZeneca Vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X