ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ; ಒಂದೇ ದಿನದಲ್ಲಿ ಹೆಚ್ಚು ಸಾವು, ದಾಖಲೆ ಬರೆದ ಭಾರತ

|
Google Oneindia Kannada News

ನವದೆಹಲಿ, ಏಪ್ರಿಲ್ 28 : ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 30 ಸಾವಿರದ ಹತ್ತಿರ ತಲುಪಿದೆ. ಮಧ್ಯಪ್ರದೇಶದಲ್ಲಿ ಒಂದೇ ದಿನ ಹೆಚ್ಚು ಪ್ರಕರಣ ದಾಖಲಾಗಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 29,571ಕ್ಕೆ ಏರಿಕೆಯಾಗಿದೆ.

ಸೋಮವಾರ ಒಂದೇ ದಿನ ದೇಶದಲ್ಲಿ 58 ಜನರು ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ. ಒಂದೇ ದಿನದಲ್ಲಿ ಅತಿ ಹೆಚ್ಚು ಸಾವಿನ ಪ್ರಕರಣ ಏಪ್ರಿಲ್ 27ರಂದು ದಾಖಲಾಗಿದೆ. ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಅತಿ ಹೆಚ್ಚು ಸೋಂಕಿನ ಪ್ರಕರಣಗಳು ವರದಿಯಾಗಿವೆ.

ಕೊರೊನಾ ಕಾರಣ: ಆ ದೇಶದಲ್ಲಿ ಮಲೇರಿಯಾ ಸೋಂಕಿತರು ಡಬಲ್! ಕೊರೊನಾ ಕಾರಣ: ಆ ದೇಶದಲ್ಲಿ ಮಲೇರಿಯಾ ಸೋಂಕಿತರು ಡಬಲ್!

ಮಧ್ಯಪ್ರದೇಶದ ಇಂಧೋರ್‌ನಲ್ಲಿ ಸೋಮವಾರ 196 ಹೊಸ ಪ್ರಕರಣ ದಾಖಲಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1372ಕ್ಕೆ ಆಗಿದೆ. ಮಹಾರಾಷ್ಟ್ರದ ಮುಂಬೈನಲ್ಲಿ 396 ಹೊಸ ಪ್ರಕರಣಗಳು ದಾಖಲಾಗಿದೆ. ದೆಹಲಿಯಲ್ಲಿ 190 ಹೊಸ ಪ್ರಕರಣದಿಂದಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3000ರ ಗಡಿ ದಾಟಿದೆ.

10 ವಿಧವಾಗಿ ಕೊರೊನಾ ವೈರಸ್ ರೂಪಾಂತರ : ಏನಿದು A2a ? 10 ವಿಧವಾಗಿ ಕೊರೊನಾ ವೈರಸ್ ರೂಪಾಂತರ : ಏನಿದು A2a ?

ಮಹಾರಾಷ್ಟ್ರ, ಗುಜರಾತ್, ದೆಹಲಿ, ರಾಜಸ್ಥಾನ ಮತ್ತು ಮಧ್ಯಪ್ರದೇಶ ದೇಶದಲ್ಲಿ ಕೊರೊನಾ ಸೋಂಕಿತರು ಇರುವ ಟಾಪ್ 5 ರಾಜ್ಯಗಳಾಗಿವೆ. ಮಧ್ಯಪ್ರದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2165, ಇದರಲ್ಲಿ ಇಂಧೋರ್ ಒಂದು ಕಡೆಯೇ 1207 ಪ್ರಕರಣಗಳಿವೆ.

ಕಡಿಮೆ ಜನಸಂಖ್ಯೆ, ಹೆಚ್ಚು ಕೊರೊನಾ ಸೋಂಕು, ಕಮ್ಮಿ ಸಾವು: ಇದು ಸಿಂಗಾಪುರ್!ಕಡಿಮೆ ಜನಸಂಖ್ಯೆ, ಹೆಚ್ಚು ಕೊರೊನಾ ಸೋಂಕು, ಕಮ್ಮಿ ಸಾವು: ಇದು ಸಿಂಗಾಪುರ್!

ಮೃತಪಟ್ಟವರ ಲೆಕ್ಕ

ಮೃತಪಟ್ಟವರ ಲೆಕ್ಕ

ಮಹಾರಾಷ್ಟ್ರದಲ್ಲಿ ಒಂದೇ ದಿನ 27 ಜನರು ಮೃತಪಟ್ಟಿದ್ದು ರಾಜ್ಯದ ಮೊದಲ ಸ್ಥಾನದಲ್ಲಿದೆ. ಗುಜರಾತ್‌ನಲ್ಲಿ 11, ರಾಜಸ್ಥಾನದಲ್ಲಿ 9, ಮಧ್ಯಪ್ರದೇಶದಲ್ಲಿ 7, ಪಶ್ಚಿಮ ಬಂಗಾಳದಲ್ಲಿ 2, ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ತಲಾ 1 ಸಾವಿನ ಪ್ರಕರಣ ಸೋಮವಾರ ದಾಖಲಾಗಿದೆ.

ಸೋಂಕು ನಿಯಂತ್ರಣಕ್ಕೆ ಬಂದಿದೆ

ಸೋಂಕು ನಿಯಂತ್ರಣಕ್ಕೆ ಬಂದಿದೆ

ಸೋಮವಾರ ಇಂಧೋರ್‌ನಲ್ಲಿ 196 ಹೊಸ ಪ್ರಕರಣ ದಾಖಲಾಗಿ ಆತಂಕ ಮೂಡಿಸಿದೆ. ಆದರೆ, ಬಿಹಾರ, ಜಾರ್ಖಂಡ್ ರಾಜ್ಯಗಳು ಸೋಂಕನ್ನು ನಿಯಂತ್ರಣಕ್ಕೆ ತಂದಿವೆ. ಎರಡೂ ರಾಜ್ಯದಲ್ಲಿ 20 ಹೊಸ ಪ್ರಕರಣ ದಾಖಲಾಗಿದೆ. ಅದಕ್ಕೂ ಮೊದಲು 68 ಪ್ರಕರಣ ದಾಖಲಾಗಿದ್ದವು.

937 ಜನರ ಸಾವು

937 ಜನರ ಸಾವು

ಭಾರತದಲ್ಲಿ ಸೋಮವಾರ ರಾತ್ರಿಯ ತನಕ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 937. ಇದರಲ್ಲಿ 396 ಜನರು ಮಹಾರಾಷ್ಟ್ರ ರಾಜ್ಯದಲ್ಲಿಯೇ ಮೃತಪಟ್ಟಿದ್ದಾರೆ. 219 ಜನರು ಮುಂಬೈನಲ್ಲಿ ಮೃತಪಟ್ಟಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿದೆ.

ಅಹಮದಾಬಾದ್‌

ಅಹಮದಾಬಾದ್‌

ಗುಜರಾತ್‌ನ ಅಹಮದಾಬಾದ್ ಆತಂಕ ಉಂಟು ಮಾಡಿದೆ. ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಶೇ 4.7ರಷ್ಟಿದೆ. ಮುಂಬೈನಲ್ಲಿ ಶೇ 3.8 ಇದೆ. ಗುಜರಾತ್‌ನ ಒಟ್ಟು ಸಾವಿನಲ್ಲಿ ಅಹಮದಾಬಾದ್ ಶೇ 67.5ರಷ್ಟು ಪಾಲನ್ನು ಹೊಂದಿದೆ.

English summary
58 Corona patients death reported in India on April 27, 2020. Highest death reported so far in a single day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X