ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2009ರಲ್ಲಿ ಭಾರತ ಏಕಾಂಗಿ, ಈಗ ಜಗತ್ತೇ ನಮ್ಮೊಂದಿಗಿದೆ: ಸುಷ್ಮಾ ಸ್ವರಾಜ್

|
Google Oneindia Kannada News

ನವದೆಹಲಿ, ಮಾರ್ಚ್ 15: ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಶ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನನ್ನು ವಿಶ್ವಸಂಸ್ಥೆಯ ನಿರ್ಬಂಧ ಸಮಿತಿಯ ಅಡಿಯಲ್ಲಿ ಜಾಗತಿಕ ಉಗ್ರ ಎಂದು ಘೋಷಿಸಲು ಅಂತಾರಾಷ್ಟ್ರೀಯ ಸಮುದಾಯದಿಂದ ಅಭೂತಪೂರ್ವ ಬೆಂಬಲ ಭಾರತಕ್ಕೆ ದೊರಕಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವ ವರೆಗೂ ಪಾಕ್ ಜೊತೆ ಮಾತುಕತೆ ಇಲ್ಲ: ಸುಷ್ಮಾ ಸ್ವರಾಜ್ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವ ವರೆಗೂ ಪಾಕ್ ಜೊತೆ ಮಾತುಕತೆ ಇಲ್ಲ: ಸುಷ್ಮಾ ಸ್ವರಾಜ್

ವಿಶ್ವಸಂಸ್ಥೆಯ ನಿರ್ಬಂಧ ಸಮಿತಿ ಅಡಿಯಲ್ಲಿ ಅಜರ್‌ನನ್ನು ಹೆಸರಿಸಲು ಸಾಧ್ಯವಾಗದೆ ಇರುವುದು ರಾಜತಾಂತ್ರಿಕ ವೈಫಲ್ಯ ಎಂಬ ಟೀಕೆಗೆ ಅವರು ಕಟುವಾದ ಪ್ರತಿಕ್ರಿಯೆ ನೀಡಿದ್ದಾರೆ.

ಅಜರ್ 'ಜಾಗತಿಕ ಉಗ್ರ': ಭಾರತಕ್ಕೆ ನಮ್ಮ ಬೆಂಬಲ ಎಂದ ಅಮೆರಿಕ ಅಜರ್ 'ಜಾಗತಿಕ ಉಗ್ರ': ಭಾರತಕ್ಕೆ ನಮ್ಮ ಬೆಂಬಲ ಎಂದ ಅಮೆರಿಕ

'ನಾನು ನಿಮ್ಮೊಂದಿಗೆ ವಾಸ್ತವಗಳನ್ನು ಹಂಚಿಕೊಂಡಿದ್ದೇನೆ. ಈಗ ನಮ್ಮ ರಾಜತಾಂತ್ರಿಕ ವೈಫಲ್ಯ ಎಂದು ಹೇಳುವ ನಾಯಕರು 2009ರ ಸನ್ನಿವೇಶದಲ್ಲಿ ತಮ್ಮನ್ನು ತಾವೇ ನೋಡಿಕೊಳ್ಳಬೇಕು. ಆಗ ಭಾರತ ಏಕಾಂಗಿಯಾಗಿತ್ತು. 2019ರಲ್ಲಿ ಭಾರತಕ್ಕೆ ಜಗತ್ತಿನಾದ್ಯಂತ ಬೆಂಬಲ ದೊರಕುತ್ತಿದೆ' ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

'2009ರಲ್ಲಿ ಯುಪಿಎ ಸರ್ಕಾರದ ಆಡಳಿತದಲ್ಲಿ ಭಾರತ ಏಕಾಂಗಿಯಾಗಿ ಪ್ರಸ್ತಾವ ಸಲ್ಲಿಸಿತ್ತು. 2016ರಲ್ಲಿ ಭಾರತಕ್ಕೆ ಅಮೆರಿಕ, ಫ್ರಾನ್ಸ್ ಮತ್ತು ಇಂಗ್ಲೆಂಡ್ ಬೆಂಬಲ ದೊರಕಿತ್ತು. 2017ರಲ್ಲಿ ಅಮೆರಿಕ, ಇಂಗ್ಲೆಂಡ್ ಮತ್ತು ಫ್ರಾನ್ಸ್ ಈ ಪ್ರಸ್ತಾವವನ್ನು ಮುಂಚೂಣಿಗೆ ತಂದವು.

India secured unprecedented global support masood azhar un sanctions committee sushma swaraj

ಇದಕ್ಕೆ ವಿಶ್ವಂಸ್ಥೆಯ ಭದ್ರತಾ ಸಮಿತಿಯ 15 ದೇಶಗಳ ಪೈಕಿ 14 ದೇಶಗಳಿಂದ ಬೆಂಬಲ ವ್ಯಕ್ತವಾಯಿತು. ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಟಲಿ ಮತ್ತು ಜಪಾನ್ ಸೇರಿದಂತೆ ಭದ್ರತಾ ಮಂಡಳಿಯ ಸದಸ್ಯೇತರ ದೇಶಗಳಿಂದಲೂ ಬೆಂಬಲ ದೊರಕಿದೆ' ಎಂದು ವಿರೋಧಪಕ್ಷಗಳಿಗೆ ತಿವಿದಿದ್ದಾರೆ.

English summary
External Affairs Minister Sushma Swaraj said, India has secured unprecedented support from international community for listing Jaish cheif Masood Azhar under UN sanctions committee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X