ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕಾಶ್ಮೀರ ಮರೆತುಬಿಡಿ, ನಿಮ್ಮೊಳಗಿನ ಸಮಸ್ಯೆ ನೋಡಿಕೊಳ್ಳಿ'

|
Google Oneindia Kannada News

ಶ್ರೀನಗರ, ಸೆಪ್ಟೆಂಬರ್ 14: ಕಾಶ್ಮೀರ ಮರೆತುಬಿಡಿ ನಿಮ್ಮ ಆಂತರಿಕ ಸಮಸ್ಯೆಗಳನ್ನು ಮೊದಲು ಬಗೆಹರಿಸಿಕೊಳ್ಳಿ ಎಂದು ಭಾರತವು ಪಾಕಿಸ್ತಾನಕ್ಕೆ ಬುದ್ಧಿಮಾತು ಹೇಳಿದೆ.

ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನವು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದು ವಿಶ್ವಸಂಸ್ಥೆಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ವಾಗ್ಧಾಳಿ ನಡೆಸಿದೆ.

ಕಾಶ್ಮೀರದ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುವ ಬದಲು, ಬಲೂಚಿಸ್ತಾನ್, ಸಿಂಧ್ ಮತ್ತು ಇತರ ಪ್ರದೇಶಗಳ ತನ್ನದೇ ಆದ ಪ್ರಾಂತ್ಯಗಳ ಬಗ್ಗೆ ಅಲ್ಲಿ ನಡೆಯುತ್ತಿರುವಂತಹ ಕಾನೂನು ಬಾಹಿರ ಚಟುವಟಿಕೆಗಳು, ಹತ್ಯಗಳ ಕಡೆಗೆ ಗಮನಹರಿಸಿ ಎಂದು ಹೇಳಿದೆ.

 India Says Pakistan To Forget Jammu And Kashmir

2018 ರ ಭದ್ರತಾ ಮಂಡಳಿಯ ವರದಿ ಕುರಿತ ಚರ್ಚೆಯ ಸಂದರ್ಭದಲ್ಲಿ ಕಾಶ್ಮೀರದ ಬಗ್ಗೆ ತನ್ನದೇ ಆದ ನಿರ್ಣಯಗಳನ್ನು ಜಾರಿಗೆ ತರಲು ಭದ್ರತಾ ಮಂಡಳಿ ವಿಫಲವಾಗಿದೆ ಎಂದು ವಿಶ್ವಸಂಸ್ಥೆಯ ಪಾಕಿಸ್ತಾನದ ಖಾಯಂ ಪ್ರತಿನಿಧಿ ಮಾಲೀಹಾ ಲೋಧಿ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ 10 ಸಾವಿರ ಕೋಟಿ ರೂ. ಹೂಡಿಕೆ ಸಾಧ್ಯತೆಜಮ್ಮು ಮತ್ತು ಕಾಶ್ಮೀರಕ್ಕೆ 10 ಸಾವಿರ ಕೋಟಿ ರೂ. ಹೂಡಿಕೆ ಸಾಧ್ಯತೆ

ಭಾರತವು ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಿತು.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ 42 ನೇ ಅಧಿವೇಶನದಲ್ಲಿ ಮಾತನಾಡಿದ ಯುಎನ್‌ಹೆಚ್‌ಆರ್‌ಸಿಯಲ್ಲಿ ಭಾರತದ ಶಾಶ್ವತ ಮಿಷನ್‌ನ ಕಾರ್ಯದರ್ಶಿ ಕುಮಾಮ್ ಮಿನಿ ದೇವಿ

ಪಾಕಿಸ್ತಾನ ಈ ರೀತಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿರುವುದು ಹೊಸದೇನಲ್ಲ, ನಾವು ಪಾಕಿಸ್ತಾನಕ್ಕೆ ಸಲಹೆ ನೀಡುತ್ತೇವೆ ಲಕ್ಷಾಂತರ ಸಂಖ್ಯೆಯಲ್ಲಿರುವ, ವಿಶೇಷವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ, ಬಲೂಚಿಸ್ತಾನ್ ಮತ್ತು ಸಿಂಧ್‌ನಲ್ಲಿ ನಡೆಯುತ್ತಿರುವ ಕಣ್ಮರೆಗಳು ಮತ್ತು ಕಾನೂನು ಬಾಹಿರ ಹತ್ಯೆಗಳ ಪ್ರಕರಣಗಳನ್ನು ಪರಿಶೀಲಿಸಲು ತಿಳಿ ಹೇಳುತ್ತೇವೆ ಎಂದು ಹೇಳಿದ್ದಾರೆ.

ಭಾರತದ ಪ್ರಜೆಗಳಾಗಿರುವ ಜಮ್ಮು ಮತ್ತು ಕಾಶ್ಮೀರದ ಜನರು ಎಲ್ಲಾ ಹಂತಗಳಲ್ಲಿ ನಡೆಯುವ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಭಾರತೀಯ ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯನ್ನು ಪದೇ ಪದೇ ಪುನರಾವರ್ತಿಸಿದ್ದಾರೆ ಇದರಿಂದ ಇತಿಹಾಸ ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ.

English summary
New Delhi advised the neighbouring nation to look into its own cases of enforced disappearances and extrajudicial killings in the provinces of Balochistan, Sindh and other regions instead of peddling false narrative on the Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X