ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರು ತಿಂಗಳಲ್ಲಿ ವಾಯುಸೇನೆಗೆ ರಫೇಲ್ ಯುದ್ಧ ವಿಮಾನ ಸೇರ್ಪಡೆ

|
Google Oneindia Kannada News

ನವದೆಹಲಿ, ಮಾರ್ಚ್ 04: ಫ್ರಾನ್ಸ್​ನಿರ್ಮಿತ ರಫೇಲ್​ಯುದ್ಧ ವಿಮಾನಗಳು ಖರೀದಿ ಸಂಬಂಧ ಕೇಂದ್ರ ಸರ್ಕಾರ ಹಾಗೂ ವಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳು ಮುಂದುವರೆದಿವೆ. ಈ ನಡುವೆ, ಭಾರತೀಯ ವಾಯುಸೇನೆಗೆ ರಫೇಲ್ ವಿಮಾನಗಳು ಮುಂದಿನ ಸೆಪ್ಟೆಂಬರ್ ತಿಂಗಳೊಳಗೆ ಸೇರ್ಪಡೆಗೊಳ್ಳಲಿವೆ ಎಂದು ಏರ್ ಛೀಫ್ ಮಾರ್ಷಲ್ ಬಿ.ಎಸ್ ಧನೋವಾ ಹೇಳಿದ್ದಾರೆ.

ಸೋಮವಾರದಂದು ಕೊಯಮತ್ತೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಯುಪಡೆ ಮುಖ್ಯಸ್ಥ ಏರ್​ಚೀಫ್​ ಮಾರ್ಷಲ್​ಬಿ.ಎಸ್​. ಧನೋವಾ ಈ ವಿಷಯ ತಿಳಿಸಿದರು.

ಹೆಣ ಎಣಿಸುವುದು ನಮ್ಮ ಕೆಲಸವಲ್ಲ, ಸರಕಾರದ್ದು : ಏರ್ ಚೀಫ್ ಮಾರ್ಷಲ್ಹೆಣ ಎಣಿಸುವುದು ನಮ್ಮ ಕೆಲಸವಲ್ಲ, ಸರಕಾರದ್ದು : ಏರ್ ಚೀಫ್ ಮಾರ್ಷಲ್

ಕೇಂದ್ರ ಸರ್ಕಾರ ಭಾರತೀಯ ವಾಯುಪಡೆಯನ್ನು ಸಮಗ್ರವಾಗಿ ಸುಧಾರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಸರ್ಕಾರ ಅತ್ಯಾಧುನಿಕ ವ್ಯವಸ್ಥೆಯುಳ್ಳ ಯುದ್ಧ ವಿಮಾನಗಳು ಮತ್ತಿತರ ಶಸ್ತ್ರಾಸ್ತ್ರಗಳ ಖರೀದಿ ಜಾರಿಯಲ್ಲಿದೆ ಎಂದರು. ಫ್ರಾನ್ಸಿನ ಡಸಾಲ್ಟ್​ಏವಿಯೇಷನ್​ಸಂಸ್ಥೆ ನಿರ್ಮಿತ 36 ರಫೇಲ್​ ಯುದ್ಧ ವಿಮಾನಗಳನ್ನು ಖರೀದಿಸಲಾಗುತ್ತಿದೆ. ಈ ಮೂಲಕ ರಷ್ಯಾ ನಿರ್ಮಿತ ಯುದ್ಧ ವಿಮಾನಗಳ ಬಳಕೆ ಕಡಿಮೆಯಾಗಲಿವೆ.

ಎಕೆ 47 ಹೋಲುವ ಎಕೆ 203 ಉತ್ಪಾದನೆಗೆ ಮೋದಿಯಿಂದ ಚಾಲನೆ ಎಕೆ 47 ಹೋಲುವ ಎಕೆ 203 ಉತ್ಪಾದನೆಗೆ ಮೋದಿಯಿಂದ ಚಾಲನೆ

ರಫೇಕ್ ವಿಮಾನ ನಿರ್ಮಿಸಿರುವ ಡಸಾಲ್ಟ್ ಏವಿಯೇಷನ್ ಸಂಸ್ಥೆಯೇ ಮಿರಾಜ್ 2000 ನಿರ್ಮಿಸಿದ್ದು ಎಂಬುದನ್ನು ಮರೆಯುವಂತಿಲ್ಲ. ಮಿರಾಜ್ 2000 ಬಳಸಿ ಪಾಕಿಸ್ತಾನದ ಬಾಲಕೋಟ್, ಮುಜಾಫರ್ ಬಾರ್, ಚಕೋತಿಯಲ್ಲಿದ್ದ ಉಗ್ರರ ನೆಲೆ ಮೇಲೆ ವಾಯುಸೇನೆ ಯಶಸ್ವಿ ದಾಳಿ ನಡೆಸಿತ್ತು.

ರಫೆಲ್ ಒಪ್ಪಂದ ವಿಳಂಬಕ್ಕೆ ಮೋದಿಯೇ ಕಾರಣ: ರಾಹುಲ್ ಗಾಂಧಿರಫೆಲ್ ಒಪ್ಪಂದ ವಿಳಂಬಕ್ಕೆ ಮೋದಿಯೇ ಕಾರಣ: ರಾಹುಲ್ ಗಾಂಧಿ

ಇನ್ನು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಬಳಸಿದ್ದ ಮಿಗ್-21 ಬೈಸನ್ ಬಗ್ಗೆ ಬಂದಿರುವ ಅಪಸ್ವರಕ್ಕೆ ಧನೋವಾ ಅವರು ಪ್ರತಿಕ್ರಿಯಿಸಿ, ಅದು ಅತ್ಯಂತ ಸಮರ್ಥ ಯುದ್ಧ ವಿಮಾನ, ಉತ್ತಮ ರಾಡಾರ್ ವ್ಯವಸ್ಥೆ, ಆಕಾಶದಿಂದ ಆಕಾಶಕ್ಕೆ ನೆಗೆಯುವ ಕ್ಷಿಪಣಿಗಳಿವೆ ಅತ್ಯುತ್ತಮ ಶಸ್ತ್ರಾಸ್ತ್ರಗಳೂ ಇವೆ ಎಂದರು.

60 ದಶಕದ ರಷ್ಯಾ ವಿನ್ಯಾಸದ ಮಿಗ್ 21 ಬೈಸನ್

60 ದಶಕದ ರಷ್ಯಾ ವಿನ್ಯಾಸದ ಮಿಗ್ 21 ಬೈಸನ್

60 ದಶಕದ ರಷ್ಯಾ ವಿನ್ಯಾಸದ ಮಿಗ್ 21 ಬೈಸನ್ ಹಳೆಯದಾದರೂ ಅಮೆರಿಕದ ನಿರ್ಮಿತ ಅತ್ಯಾಧುನಿಕ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದನ್ನು ಮರೆಯುವಂತಿಲ್ಲ. ಇನ್ನು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಬಳಸಿದ್ದ ಮಿಗ್-21 ಬೈಸನ್ ಬಗ್ಗೆ ಬಂದಿರುವ ಅಪಸ್ವರಕ್ಕೆ ಧನೋವಾ ಅವರು ಪ್ರತಿಕ್ರಿಯಿಸಿ, ಅದು ಅತ್ಯಂತ ಸಮರ್ಥ ಯುದ್ಧ ವಿಮಾನ, ಉತ್ತಮ ರಾಡಾರ್ ವ್ಯವಸ್ಥೆ, ಆಕಾಶದಿಂದ ಆಕಾಶಕ್ಕೆ ನೆಗೆಯುವ ಕ್ಷಿಪಣಿಗಳಿವೆ ಅತ್ಯುತ್ತಮ ಶಸ್ತ್ರಾಸ್ತ್ರಗಳೂ ಇವೆ ಎಂದು ಏರ್ ಛೀಫ್ ಮಾರ್ಷಲ್ ಧನೋವಾ ಹೇಳಿದರು.

36 ರಾಫೆಲ್ ಯುದ್ಧ ವಿಮಾನ ವ್ಯವಹಾರ ಒಪ್ಪಂದ

36 ರಾಫೆಲ್ ಯುದ್ಧ ವಿಮಾನ ವ್ಯವಹಾರ ಒಪ್ಪಂದ

36 ರಾಫೆಲ್ ಯುದ್ಧ ವಿಮಾನ ವ್ಯವಹಾರ ಒಪ್ಪಂದಕ್ಕೆ ಸೆಪ್ಟೆಂಬರ್ 23, 2016ರಂದು ಶುಕ್ರವಾರ ಉಭಯ ದೇಶಗಳ ಪ್ರತಿನಿಧಿಗಳು ಸಹಿ ಹಾಕಿದರು. ಸುಮಾರು 7.8 ಬಿಲಿಯನ್ ಯುರೋ (ಸುಮಾರು 780 ಕೋಟಿ) ವ್ಯವಹಾರಿಕ ಮೊತ್ತ ಇದಾಗಿದೆ. ಅಂದು ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಮತ್ತು ಫ್ರಾನ್ಸ್ ರಕ್ಷಣಾ ಸಚಿವ ಜಿಯಾನ್ ವೈವೆಸ್ ಲೆಡ್ರಿಯನ್ ಅವರು ದೆಹಲಿಯಲ್ಲಿ ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದರು.

ಅತ್ಯಾಧುನಿಕ ಕ್ಷಿಪಣಿ ಸಹಿತ ಬರಲಿದೆ

ಅತ್ಯಾಧುನಿಕ ಕ್ಷಿಪಣಿ ಸಹಿತ ಬರಲಿದೆ

ಒಪ್ಪಂದ ಪ್ರಕಾರ ಫ್ರಾನ್ಸಿನಿಂದ ಮೆಟೆಯೊರ್(Meteor) ಕ್ಷಿಪಣಿ, ಸ್ಕಾಲ್ಪ್ ಸೇರಿದಂತೆ ಬಿಡಿಭಾಗಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಭಾರತ ಪಡೆಯಲಿದೆ. ಈ ಅತ್ಯಾಧುನಿಕ ಕ್ಷಿಪಣಿಗಳು 150ಕಿ.ಮೀಗೂ ದೂರದ ವ್ಯಾಪ್ತಿ Beyond Visual Range (BVR) ಯಿಂದಿದೆ.

ಈಗ 150 ಕಿ.ಮೀ ವ್ಯಾಪ್ತಿಯ ತನಕ ಟಾರ್ಗೆಟ್

ಈಗ 150 ಕಿ.ಮೀ ವ್ಯಾಪ್ತಿಯ ತನಕ ಟಾರ್ಗೆಟ್

ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತವು 50 ಕಿ.ಮೀ ವ್ಯಾಪ್ತಿಯ ಕ್ಷಿಪಣಿಗಳನ್ನು ಬಳಸಿತ್ತು. ಈಗ 150 ಕಿ.ಮೀ ವ್ಯಾಪ್ತಿಯ ತನಕ ಟಾರ್ಗೆಟ್ ಇಡಬಹುದಾಗಿದೆ. ಈ ಮೂಲಕ ಪಾಕಿಸ್ತಾನ ಎಲ್ಲಾ ಭಾಗಗಳು, ಉತ್ತರ ಹಾಗೂ ಈಶಾನ್ಯ ಗಡಿಭಾಗದ ಎಲ್ಲಾ ಭಾಗಗಳನ್ನು ಕ್ರಮಿಸಬಲ್ಲ ಕ್ಷಿಪಣಿಗಳನ್ನು ಹೊಂದಿದ್ದಂತಾಗುತ್ತದೆ.

English summary
India will induct the French-made Rafale combat jet in September, the chief of the Indian air force B.S. Dhanoa said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X