ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಬಾನಿ ಮಾಲೀಕತ್ವದ ವಿಶ್ವದ ಅತಿದೊಡ್ಡ ಮೃಗಾಲಯಕ್ಕೆ "ಕರಿಚಿರತೆ" ವಿವಾದ!

|
Google Oneindia Kannada News

ನವದೆಹಲಿ, ಫೆಬ್ರವರಿ.25: ಭಾರತದಲ್ಲಿ ಜಗತ್ತಿನ ಅತಿದೊಡ್ಡ ಮೃಗಾಲಯ ಮತ್ತು ಪಕ್ಷಿಧಾಮ ನಿರ್ಮಾಣಕ್ಕೆ ಮುಂದಾಗಿರುವ 168 ಬಿಲಿಯನ್ ಡಾಲರ್ ಮೌಲ್ಯದ ರಿಲಾಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ ಕುಟುಂಬದ ಸುತ್ತ ವಿವಾದದ ಕಿಡಿ ಹೊತ್ತಿಕೊಂಡಿದೆ.

ಭಾರತದ ಪಶ್ಚಿಮ ಭಾಗದಲ್ಲಿರುವ ಗುಜರಾತ್ ರಾಜ್ಯದ ಜಮಾನಗರ್ ಎಂಬಲ್ಲಿ "ಹಸಿರಿನ ನಡುವೆ ಪ್ರಾಣಿಗಳ ಸುರಕ್ಷತೆ ಮತ್ತು ಪುನರ್ವಸತಿಯ ಸಾಮ್ರಾಜ್ಯ" (Green Zoological Rescue and Rehabilitation Kingdom) ಸ್ಥಾಪಿಸುವುದಕ್ಕೆ ಯೋಜನೆ ರೂಪಿಸಲಾಗುತ್ತಿದೆ.

ರಿಲಯನ್ಸ್‌-ಫ್ಯೂಚರ್ ಗ್ರೂಪ್ ಬಹುಕೋಟಿ ಡೀಲ್‌ಗೆ ದಿಲ್ಲಿ ಹೈಕೋರ್ಟ್ ತಡೆ: ಅಂಬಾನಿಗೆ ಹಿನ್ನಡೆರಿಲಯನ್ಸ್‌-ಫ್ಯೂಚರ್ ಗ್ರೂಪ್ ಬಹುಕೋಟಿ ಡೀಲ್‌ಗೆ ದಿಲ್ಲಿ ಹೈಕೋರ್ಟ್ ತಡೆ: ಅಂಬಾನಿಗೆ ಹಿನ್ನಡೆ

ಗುಜರಾತ್ ನಲ್ಲಿ ಬರೋಬ್ಬರಿ 113 ಹೆಕ್ಟರ್(280 ಎಕೆರ) ಪ್ರದೇಶದಲ್ಲಿ ವಿಶ್ವದ ಅತಿದೊಡ್ಡ ಮೃಗಾಲಯ ಮತ್ತು ಪಕ್ಷಿಧಾಮ ನಿರ್ಮಾಣದ ಯೋಜನೆ ಹಾಕಿಕೊಳ್ಳಲಾಗಿದೆ. ಆದರೆ ಅದೇ ಯೋಜನೆ ಇದೀಗ ಅಂಬಾನಿ ಕುಟುಂಬದ ಸುತ್ತಲೂ ವಿವಾದಕ್ಕೆ ಕಾರಣವಾಗಿದೆ. ಏನದು ಯೋಜನೆ. ವಿವಾದದ ಕಿಡಿ ಹೊತ್ತಿಕೊಳ್ಳುವುದಕ್ಕೇನು ಕಾರಣ ಎಂಬುದರ ಕುರಿತು ಒಂದು ವರದಿ ಇಲ್ಲಿದೆ.

ಮುಕೇಶ್ ಅಂಬಾನಿ ಪುತ್ರನ ನೇತೃತ್ವದಲ್ಲಿ ಯೋಜನೆ

ಮುಕೇಶ್ ಅಂಬಾನಿ ಪುತ್ರನ ನೇತೃತ್ವದಲ್ಲಿ ಯೋಜನೆ

ಬಿಸಿನೆಸ್ ಇನ್ಸೈಡರ್ ವರದಿಯ ಪ್ರಕಾರ, "ಮುದ್ದು ಪ್ರಾಣಿಗಳ ಮೃಗಾಲಯದ ಯೋಜನೆ"ಯ ನೇತೃತ್ವವನ್ನು ಮುಕೇಶ್ ಅಂಬಾನಿ ಪುತ್ರ 25 ವರ್ಷದ ಅನಂತ್ ಅಂಬಾನಿ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಅನಂತ್ ಅಂಬಾನಿ ಈಗಾಗಲೇ ರಿಲಯನ್ಸ್‌ನ ಟೆಲಿಕಾಂ ವಿಭಾಗದ ಜಿಯೋದಲ್ಲಿ ಮಂಡಳಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಪ್ಪು ಚಿರತೆ ಪಡೆಯಲು ಜೀಬ್ರಾ ನೀಡುವ ಪ್ರಯತ್ನಕ್ಕೆ ಟೀಕೆ

ಕಪ್ಪು ಚಿರತೆ ಪಡೆಯಲು ಜೀಬ್ರಾ ನೀಡುವ ಪ್ರಯತ್ನಕ್ಕೆ ಟೀಕೆ

ಕಳೆದ ಜನವರಿಯಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯು ಅಸ್ಸಾಂನ ಗುವಾಹಟಿಯಲ್ಲಿ ಇರುವ ರಾಜ್ಯ ಮೃಗಾಲಯದ ಜೊತೆ ಒಪ್ಪಂದವೊಂದನ್ನು ಮಾಡಿಕೊಳ್ಳಲಾಗಿದೆ. ಎರಡು ಇಸ್ರೇಲ್ ಜಿಬ್ರಾಗಳನ್ನು ಪಡೆದು, ಅದರ ಬದಲಿಗೆ ಎರಡು ಕಪ್ಪು ಚಿರತೆಗಳನ್ನು ರಿಲಾಯನ್ಸ್ ಸಂಸ್ಥೆಯ ಮೃಗಾಲಯಕ್ಕೆ ನೀಡುವಂತೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಈ ಒಪ್ಪಂದ ವಿಫಲವಾಗಿದ್ದು, ಸ್ಥಳೀಯ ಮಟ್ಟದಲ್ಲಿ ಸಾಕಷ್ಟು ವಿರೋಧದ ಜೊತೆಗೆ ಟೀಕೆ ವ್ಯಕ್ತವಾಗಿತ್ತು, ಎಂದು ಈಶಾನ್ಯದ ನೌ ನ್ಯೂಸ್ ವರದಿ ಮಾಡಿದೆ.

ಖಾಸಗಿ ಮೃಗಾಲಯಕ್ಕೆ ಪ್ರಾಣಿಗಳನ್ನು ನೀಡಿದ್ದಕ್ಕೆ ಟೀಕೆ

ಖಾಸಗಿ ಮೃಗಾಲಯಕ್ಕೆ ಪ್ರಾಣಿಗಳನ್ನು ನೀಡಿದ್ದಕ್ಕೆ ಟೀಕೆ

"ದೇಶದ ಪ್ರಾಣ ಸಂಗ್ರಹಾಲಯದಲ್ಲಿ ಸೆರೆಯಾಗಿರುವ ಕಾಡು ಪ್ರಾಣಿಗಳು ಕೂಡ ದೊಡ್ಡ ಉದ್ಯಮಿಗಳ ಮುಷ್ಠಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎನ್ನುವಂತೆ ಕಾಣುತ್ತಿದೆ. ಏಕೆಂದರೆ ಇತ್ತೀಚಿಗಷ್ಟೇ ರಿಲಾಯನ್ಸ್ ಕಂಪನಿಯ ಅತಿದೊಡ್ಡ ಮೃಗಾಲಯ ಮತ್ತು ಪ್ರಾಣಿ ಸಂಗ್ರಹಾಲಯಕ್ಕಾಗಿ ಅಸ್ಸಾಂ ಗುವಾಹಟಿಯ ರಾಜ್ಯ ಪ್ರಾಣಿ ಸಂಗ್ರಹಾಲಯದಲ್ಲಿ ಇರುವ ಕಪ್ಪು ಚಿರತೆಗಳನ್ನು ನೀಡಲಾಗಿದೆ" ಎಂದು ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ ಮುಖಂಡ ಬೊಬ್ಬೀತಾ ಶರ್ಮಾ ಆರೋಪಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯ ಪ್ರಾಣಿ ಸಂಗ್ರಹಾಲಯದ ಎದುರಿಗೆ ಹೋರಾಟ

ರಾಜ್ಯ ಪ್ರಾಣಿ ಸಂಗ್ರಹಾಲಯದ ಎದುರಿಗೆ ಹೋರಾಟ

ರಿಲಾಯನ್ಸ್ ಸಂಸ್ಥೆಯ ಅತಿದೊಡ್ಡ ಮೃಗಾಲಯದ ಯೋಜನೆಗಾಗಿ ಎರಡು ಕಪ್ಪು ಚಿರತೆಗಳನ್ನು ನೀಡಿರುವ ಅಸ್ಸಾಂ ಪ್ರಾಣಿ ಸಂಗ್ರಹಾಲಯದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಫೆಬ್ರವರಿ.21ರಂದು ನೂರಾರು ಮಂದಿ ಪ್ರತಿಭಟನಾಕಾರರು ಅಸ್ಸಾಂನ ಗುವಾಹಟಿಯಲ್ಲಿರುವ ಪ್ರಾಣ ಸಂಗ್ರಹಾಲಯದ ಎದುರು ಪ್ರತಿಭಟನೆ ನಡೆಸಿದರು.

ಜಗತ್ತಿನ ಅತಿದೊಡ್ಡ ಪ್ರಾಣ ಸಂಗ್ರಹಾಲಯದ ವಿಶೇಷತೆ

ಜಗತ್ತಿನ ಅತಿದೊಡ್ಡ ಪ್ರಾಣ ಸಂಗ್ರಹಾಲಯದ ವಿಶೇಷತೆ

ಗುಜರಾತ್ ಗುವಾಹಟಿಯ ಜಮಾನಗರ್ ದ 280 ಎಕರೆ ಪ್ರದೇಶದಲ್ಲಿ ಜಗತ್ತಿನ ಅತಿದೊಡ್ಡ ಮೃಗಾಲಯ ಮತ್ತು ಪಕ್ಷಿಧಾಮವನ್ನು ನಿರ್ಮಿಸುವುದಕ್ಕೆ ಯೋಜನೆ ರೂಪಿಸಲಾಗಿದೆ. ಈ ಮೃಗಾಲಯದಲ್ಲಿ ಜಗತ್ತಿನ 100ಕ್ಕೂ ಹೆಚ್ಚು ತಳಿಯ ವಿಭಿನ್ನ ಮತ್ತು ವಿಶೇಷ ಪ್ರಾಣಿ-ಪಕ್ಷಿಗಳು ಸಿಗಲಿವೆ. ಆಫ್ರಿಕಾದ ಸಿಂಹ, ಪಶ್ಚಿಮ ಬಂಗಾಳದ ಹುಲಿ ಹಾಗೂ ಕೊಮೊಡೋ ಡ್ರ್ಯಾಗನ್ ಸೇರಿದಂತೆ ಎಲ್ಲ ರೀತಿಯ ಪ್ರಾಣಿ ಪಕ್ಷಿಗಳನ್ನು ಈ ಮೃಗಾಲಯದಲ್ಲಿ ಕ್ರೂಢೀಕರಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

English summary
India's Richest Ambani Family Plan To Build World’s Largest Zoo In India; Sparks Controversy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X