ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

iNCOVACC vaccine: ಮೂಗಿನ ಮೂಲಕ ನೀಡುವ ಇನ್‌ಕೊವ್ಯಾಕ್ ಕೊರೊನಾ ಲಸಿಕೆ ಬಿಡುಗಡೆ

ಮೂಗಿನ ಮೂಲಕ ನೀಡಬಹುದಾದ ವಿಶ್ವದ ಮೊದಲ ಕೊರೊನಾ ಲಸಿಕೆಯನ್ನು ಬಿಡುಗಡೆ ಮಾಡಲಾಗಿದೆ. ಇದರ ಬೆಲೆ ಎಷ್ಟು ಎಂಬುದನ್ನು ಮುಂದೆ ಓದಿ.

|
Google Oneindia Kannada News

ನವದೆಹಲಿ, ಜನವರಿ. 26: ಗುರುವಾರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮೂಗಿನ ಮೂಲಕ ನೀಡಬಹುದಾದ ವಿಶ್ವದ ಮೊದಲ ಮೇಡ್ ಇನ್ ಇಂಡಿಯಾ ಇಂಟ್ರಾನಾಸಲ್ ಲಸಿಕೆಯನ್ನು ಬಿಡುಗಡೆ ಮಾಡಲಾಗಿದೆ.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಭಾರತ್ ಬಯೋಟೆಕ್‌ನ ಮೂಗಿನ ಕೋವಿಡ್ ಲಸಿಕೆ ಇನ್‌ಕೊವ್ಯಾಕ್ (iNCOVACC) ಅನ್ನು ಬಿಡುಗಡೆ ಮಾಡಿದ್ದಾರೆ.

ಭಾರತ್ ಬಯೋಟೆಕ್‌ನ ನೇಸಲ್ ಲಸಿಕೆ ಖಾಸಗಿಯವರಿಗೆ 800 ರೂ. ಸರ್ಕಾರಕ್ಕೆ 325 ರೂ ನಿಗದಿಭಾರತ್ ಬಯೋಟೆಕ್‌ನ ನೇಸಲ್ ಲಸಿಕೆ ಖಾಸಗಿಯವರಿಗೆ 800 ರೂ. ಸರ್ಕಾರಕ್ಕೆ 325 ರೂ ನಿಗದಿ

ಭಾರತದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಇನ್‌ಕೊವ್ಯಾಕ್ ಲಸಿಕೆಯ ಪ್ರತಿ ಡೋಸ್‌ಗೆ 325 ರೂಪಾಯಿಗೆ ಸರ್ಕಾರಕ್ಕೆ ಲಭ್ಯವಿದ್ದು, ಖಾಸಗಿ ಆಸ್ಪತ್ರೆಗಳಿಗೆ 800 ರೂಪಾಯಿಗಳಲ್ಲಿ ದೊರೆಯಲಿದೆ.

Indias Own Nasal Vaccine launched by Health minister Mansukh Mandaviya

ಭಾರತ್ ಬಯೋಟೆಕ್ ಕಂಪನಿಯು ಡಿಸೆಂಬರ್ 2022 ರಲ್ಲಿ, ಪ್ರಾಥಮಿಕ 2-ಡೋಸ್ ವೇಳಾಪಟ್ಟಿಗೆ ಮತ್ತು ಬೂಸ್ಟರ್ ಡೋಸ್‌ಗೆ ಅನುಮೋದನೆಯನ್ನು ಪಡೆದುಕೊಂಡಿದೆ. ಈ ಲಸಿಕೆಯ ಎರಡು ಡೋಸ್‌ಗಳನ್ನು 28 ದಿನಗಳ ಅಂತರದಲ್ಲಿ ನೀಡಬೇಕಾಗಿದೆ.

ಇನ್‌ಕೊವ್ಯಾಕ್ (iNCOVACC) ಲಸಿಕೆಯನ್ನು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬೂಸ್ಟರ್ ಶಾಟ್ ಆಗಿ ಹೊರತರಲಾಗುತ್ತಿದೆ. ಇದು ಪ್ರಾಥಮಿಕ 2 ಡೋಸ್ ವೇಳಾಪಟ್ಟಿಗೆ ಅನುಮೋದನೆಯನ್ನು ಪಡೆದ ವಿಶ್ವದ ಮೊದಲ ಇಂಟ್ರಾನಾಸಲ್ ಕೋವಿಡ್ ಲಸಿಕೆಯಾಗಿದೆ. ಇದು ಭಿನ್ನರೂಪದ ಬೂಸ್ಟರ್ ಡೋಸ್ ಆಗಿದೆ ಎಂದು ಭಾರತ್ ಬಯೋಟೆಕ್ ಈ ಹಿಂದೆ ಹೇಳಿಕೆ ನೀಡಿತ್ತು.

ಇನ್‌ಕೊವ್ಯಾಕ್ ಅನ್ನು ವಾಷಿಂಗ್ಟನ್ ಯೂನಿವರ್ಸಿಟಿ, ಸೇಂಟ್ ಲೂಯಿಸ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಹೇಳಿಕೆಯ ಪ್ರಕಾರ ಮೂರನೆ ಹಂತದ ಪ್ರಯೋಗಗಳನ್ನು ಭಾರತದಾದ್ಯಂತ 14 ಪ್ರಾಯೋಗಿಕ ಸೈಟ್‌ಗಳಲ್ಲಿ ಸುಮಾರು 3100 ವಿಷಯಗಳಲ್ಲಿ ಸುರಕ್ಷತೆ, ಇಮ್ಯುನೊಜೆನಿಸಿಟಿಗಾಗಿ ನಡೆಸಲಾಗಿದೆ. ಹೆಟೆರೊಲಾಜಸ್ ಬೂಸ್ಟರ್ ಡೋಸ್‌ಗಾಗಿ 875 ವಿಷಯಗಳಲ್ಲಿ ಸುರಕ್ಷತೆ ಮತ್ತು ಇಮ್ಯುನೊಜೆನಿಸಿಟಿಗಾಗಿ ಅಧ್ಯಯನಗಳನ್ನು ನಡೆಸಲಾಗಿದೆ ಎಂದು ಕಂಪನಿ ಮಾಹಿತಿ ನೀಡಿದೆ.

ಉತ್ಪನ್ನ ಅಭಿವೃದ್ಧಿ ಮತ್ತು ಕ್ಲಿನಿಕಲ್ ಪ್ರಯೋಗಗಳಿಗೆ ಭಾರತ ಸರ್ಕಾರವು ಜೈವಿಕ ತಂತ್ರಜ್ಞಾನ ಇಲಾಖೆಯ ಕೋವಿಡ್ ಸುರಕ್ಷಾ ಕಾರ್ಯಕ್ರಮದ ಮೂಲಕ ಭಾಗಶಃ ಹಣವನ್ನು ನೀಡಿದೆ.

English summary
iNCOVACC: World's first made in India intranasal vaccine was launched at Union Health Minister Mansukh Mandaviya's residence on Republic Day. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X