ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

150 ವರ್ಷದ ನಂತರ ಬುಸುಗುಟ್ಟಿದ ಭಾರತದ ಏಕೈಕ ಜ್ವಾಲಮುಖಿ

150 ವರ್ಷಗಳಿಂದ ತಣ್ಣಗೆ ಮಲಗಿದ್ದ ಭಾರತದ ಏಕೈಕ ಅಗ್ನಿಪರ್ವತ ಬುಸುಗುಡಲು ಆರಂಭಿಸಿದೆ. ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿರುವ ಬ್ಯಾರನ್ ದ್ವೀಪದಲ್ಲಿ ಈ ಜ್ವಾಲಾಮುಖಿ ಮೊದಲ ಬಾರಿಗೆ ಹೊಗೆ ಉಗುಳಲು ಆರಂಭಿಸಿದೆ.

By Sachhidananda Acharya
|
Google Oneindia Kannada News

ಬೆಂಗಳೂರು, ಫೆಬ್ರವರಿ 19: 150 ವರ್ಷಗಳಿಂದ ತಣ್ಣಗೆ ಮಲಗಿದ್ದ ಭಾರತದ ಏಕೈಕ ಅಗ್ನಿಪರ್ವತ ಬುಸುಗುಡಲು ಆರಂಭಿಸಿದೆ. ಅಂಡಮಾನ್ ನಿಕೋಬಾರ್ ದ್ವೀಪ ಸಮೂಹಕ್ಕೆ ಸೇರಿದ ಬ್ಯಾರನ್ ದ್ವೀಪದಲ್ಲಿ ಈ ಜ್ವಾಲಾಮುಖಿ ಮೊದಲ ಬಾರಿಗೆ ಹೊಗೆ ಉಗುಳಲು ಆರಂಭಿಸಿದೆ.[ಯಾರಿಗುಂಟು ಯಾರಿಗಿಲ್ಲ, ಒಂದು ರುಪಾಯಿಗೆ ಒಂದು ಸೀರೆ ಎಂದಿದ್ದೇ ತಡ!]

ಅಂಡಮಾನ್-ನಿಕೋಬಾರ್ ರಾಜಧಾನಿ ಪೋರ್ಟ್ ಬ್ಲೇರ್ ನಿಂದ ಈಶಾನ್ಯ ದಿಕ್ಕಿಗೆ 140 ಕಿಲೋಮೀಟರ್ ದೂರದಲ್ಲಿರುವ ಬ್ಯಾರನ್ ದ್ವೀಪದಲ್ಲಿ ಈ ಜ್ವಾಲಾಮುಖಿಯಿದೆ. ಕಳೆದ 150 ವರ್ಷಗಳಿಂದ ನಿಷ್ಕ್ರಿಯವಾಗಿದ್ದ ಈ ಅಗ್ನಿ ಪರ್ವತ 1991ರಲ್ಲಿ ಮೊದಲ ಬಾರಿಗೆ ಸ್ಪೋಟಿಸಿತ್ತು ಎಂದು ಗೋವಾ ಮೂಲದ ಸಂಸ್ಥೆ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಓಶಿಯಾನೋಗ್ರಫಿ ಹೇಳಿದೆ.[ಜಿಎಸ್ ಎಲ್ ವಿ- ಇಸ್ರೋ ಪಾಲಿನ ತಂಟೆಯ ಹುಡುಗ, ಮುಂದಿನ 50 ಯೋಜನೆ]

ರಾತ್ರಿ ಚಿಮ್ಮುತ್ತಿದೆ ಲಾವಾ ರಸ

ರಾತ್ರಿ ಚಿಮ್ಮುತ್ತಿದೆ ಲಾವಾ ರಸ

ಹಗಲು ಹೊತ್ತಿನಲ್ಲಿ ಬೂದಿ ಹಾರುವುದು ಮಾತ್ರ ಕಾಣಿಸುತ್ತದೆ. ಆದರೆ ರಾತ್ರಿ ಹೊತ್ತು ಲಾವಾ ರಸ ಪರ್ವತದಿಂದ ಚಿಮ್ಮುವುದನ್ನು ಕಾಣಬಹುದು. ಲಾವಾ ರಸ ಬೆಟ್ಟದ ಕೆಳಗಿನವರೆಗೂ ಇಳಿದು ಬರುತ್ತದೆ ಎಂದು ಸಂಸ್ಥೆಯ ತಜ್ಞರು ಹೇಳಿದ್ದಾರೆ.

5-10 ನಿಮಿಷ ಜ್ವಾಲಾಮುಖಿ ಸ್ಪೋಟ

5-10 ನಿಮಿಷ ಜ್ವಾಲಾಮುಖಿ ಸ್ಪೋಟ

ಉಳಿದ ಅಗ್ನಿ ಪರ್ವತಗಳಂತೆ ಈ ಬ್ಯಾರನ್ ದ್ವೀಪದ ಜ್ವಾಲಾಮುಖಿ ನಿರಂತರವಾಗಿ ಉರಿಯುತ್ತಿಲ್ಲ. ಬದಲಿಗೆ 5 - 10 ನಿಮಿಷಗಳ ಸಣ್ಣ ಅವಧಿಗೆ ಸ್ಪೋಟಗೊಂಡು ಮತ್ತೆ ತಣ್ಣಗಾಗುತ್ತಿದೆ.

ಜ್ವಾಲಾಮುಖಿ ಬೆನ್ನಟ್ಟಿದ ತಜ್ಞರು

ಜ್ವಾಲಾಮುಖಿ ಬೆನ್ನಟ್ಟಿದ ತಜ್ಞರು

ಬಿ ನಾಗೇಂದ್ರ ನಾಥ್ ನೇತೃತ್ವದ ರಾಷ್ಟ್ರೀಯ ಓಶಿಯಾನೋಗ್ರಫಿ ತಜ್ಞರ ತಂಡ ಸಮುದ್ರ ತಳದ ಮಾದರಿಗಳನ್ನು ಸಂಗ್ರಹಿಸಲು ಜನವರಿ 23ರಂದು ಪರ್ವತ ಸಮೀಪಕ್ಕೆ ಹೋದಾಗ ಹೊಗೆಯುಗುಳುವುದು ಕಾಣಿಸಿದೆ. ನಂತರ ಹತ್ತಿರ ಹೋದಾಗ ಬ್ಯಾರನ್ ಜ್ವಾಲಾಮುಖಿ ಸ್ಪೋಟವಾಗುವುದನ್ನು ಕಂಡಿದ್ದಾರಂತೆ. ಸ್ಥಳದಿಂದ ಸ್ಯಾಂಪಲ್ ಗಳನ್ನು ತಂದಿದ್ದು ಈ ಸ್ಯಾಂಪಲ್ ಗಳು ಜ್ವಾಲಮುಖಿಯ ಅಧ್ಯಯನಕ್ಕೆ ನೆರವಾಗಲಿವೆ.

ಜ್ವಲಾಮುಖಿ ಸರಣಿ ಪತ್ತೆ

ಜ್ವಲಾಮುಖಿ ಸರಣಿ ಪತ್ತೆ

ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ ಮತ್ತು ರಾಷ್ಟ್ರೀಯ ಓಶಿಯಾನೋಗ್ರಫಿ ತಜ್ಞರು ಅಂಡಮಾನ್ ಸುತ್ತ ಮುತ್ತ ಇದೇ ರೀತಿಯ ಹಲವು ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಇವುಗಳ ಮೂಲಕ ಅಂಡಮಾನ್ ಪ್ರದೇಶದಲ್ಲಿ ನಿಷ್ಕ್ರಿಯವಾಗಿರುವ ಹಲವು ಜ್ವಾಲಾಮುಖಿಗಳನ್ನು ಗುರುತಿಸಿದ್ದಾರೆ.

ಹೋಗುವುದು ಹೇಗೆ?

ಹೋಗುವುದು ಹೇಗೆ?

ಪೋರ್ಟ್ ಬ್ಲೇರ್ ನಲ್ಲಿರುವ ಅರಣ್ಯ ಇಲಾಖೆಯ ಒಪ್ಪಿಗೆ ಪಡೆದುಕೊಂಡು ಭಾರತೀಯರು ಸಣ್ಣ ದೋಣಿಗಳಲ್ಲಿ ತೆರಳಿ ಈ ಜ್ವಾಲಾಮುಖಿಯ ಅದ್ಭುತ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು.

English summary
India's one and only live volcano in the Andaman and Nicobar Islands has started spewing smoke and lava again. Since 150 years Barren Island volcano was lying dormant. Last time it was erupted in 1991 says scientists of Goa based National Institute of Oceanography (NIO).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X