ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಗೆಯಾಡುತ್ತಿರುವ ಭಾರತದ ಏಕೈಕ ಜ್ವಾಲಾಮುಖಿ; ಆತಂಕದಲ್ಲಿ ನಾಗರಿಕರು

ನೂರಾರು ವರ್ಷಗಳಿಂದ ಸ್ತಬ್ಧವಾಗಿದ್ದ ಜ್ವಾಲಾಮುಖಿ; ಶುಕ್ರವಾರದಿಂದ ಹೊಗೆ ಉಗುಳುತ್ತಿರುವ ಜ್ವಾಲಾಮುಖಿ ಪರ್ವತ.

|
Google Oneindia Kannada News

ಅಂಡಮಾನ್ ಮತ್ತು ನಿಕೋಬಾರ್, ಫೆಬ್ರವರಿ 18: ನೂರಾರು ವರ್ಷಗಳಿಂದ ಶಾಂತವಾಗಿದ್ದ ಭಾರತದ ಏಕೈಕ ಜೀವಂತ ಜ್ವಾಲಾಮುಖಿಯೆಂದೇ ಖ್ಯಾತವಾಗಿರುವ ಅಂಡಮಾನ್ ನಿಕೋಬಾರ್ ನಲ್ಲಿರುವ ಜ್ವಾಲಾಮುಖಿ ಇದೀಗ ಹೊಗೆ ಕಾರುತ್ತಿದ್ದು, ಯಾವುದೇ ಕ್ಷಣದಲ್ಲೂ ಸ್ಫೋಟಗೊಳ್ಳಬಹುದಾದ ಆತಂಕವನ್ನು ತಂದೊಡ್ಡಿದೆ.

1991ರಲ್ಲಿ ಈ ಜ್ವಾಲಾಮುಖಿ ಕೊಂಚ ಹೊಗೆ ಕಾರಲಾರಂಭಿಸಿತ್ತು. ಆದರೆ, ಕೆಲವು ಗಂಟೆಗಳ ನಂತರ ಮತ್ತೆ ತಣ್ಣಗಾಗಿತ್ತು. ಅದಕ್ಕೂ ಮೊದಲು 150 ವರ್ಷಗಳ ಹಿಂದೆ ಈ ಜ್ವಾಲಾಮುಖಿ ಸ್ಫೋಟಗೊಂಡಿತ್ತೆಂದು ಸ್ಥಳೀಯರ ಮಾಹಿತಿ ಹೇಳುತ್ತದೆ.

India's Only Live Volcano Active Again After 150 Years

ಆನಂತರ, 1991ರಲ್ಲಿ ಕೊಂಚ ಹೊಗೆ ಉಗುಳಿದ್ದು ಬಿಟ್ಟರೆ ಮತ್ತೆ ಅದರಿಂದ ಆತಂಕಕಾರಿ ಬೆಳವಣಿಗೆಗಳಾಗಿರಲಿಲ್ಲ. ಆದರೀಗ ಮತ್ತೆ ಅದು ಮತ್ತೆ ಹೊಗೆ ಕಾರುತ್ತಿದ್ದು, ಸ್ಥಳೀಯರಲ್ಲಿ ಹಾಗೂ ಸುತ್ತಮುತ್ತಲಿನ ದ್ವೀಪಗಳಲ್ಲಿ ಮತ್ತೆ ಆತಂಕವನ್ನು ತಂದೊಡ್ಡಿದೆ ಎಂದು ಕೆಲ ಮಾಧ್ಯಮಗಳು ಹೇಳಿವೆ.

ಎಲ್ಲಿದೆ ಈ ಜ್ವಾಲಾಮುಖಿ?: ಈ ಜೀವಂತ ಜ್ವಾಲಾಮುಖಿಯು ಅಂಡಮಾನ್ ನಿಕೋಬಾರ್ ನ ಪೋರ್ಟ್ ಬ್ಲೇರ್ ನಲ್ಲಿ ಸುಮಾರು 140 ಕಿ.ಮೀ. ದೂರದಲ್ಲಿರುವ ಬಾರೆನ್ ದ್ವೀಪದಲ್ಲಿದೆ.

ಈಗಾಗಲೇ ಗೋವಾದಲ್ಲಿರುವ ರಾಷ್ಟ್ರೀಯ ಸಮುದ್ರಶಾಸ್ತ್ರ ಸಂಸ್ಥೆ, ವಿಜ್ಞಾನಿಗಳ ತಂಡವೊಂದು ವಿಜ್ಞಾನಿ ಅಭಯ್ ಮಾಧೋಳ್ಕರ್ ಅವರ ಸಾರಥ್ಯದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ಕಡೆಗೆ ಪ್ರಯಾಣ ಬೆಳೆಸಿದೆ ಎಂದು ಹೇಳಲಾಗಿದೆ.

English summary
India's only live volcano in the Andaman and Nicobar Islands which had started showing activity in the year 1991 after being dormant for over 150 years has once again started spewing ash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X