ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿಯಿಂದ ದೇಶದ ಅತೀ ದೊಡ್ಡ ಸೇತುವೆ ಇಂದು ಲೋಕಾರ್ಪಣೆ

ಚೀನಾದ ಗಡಿಯ ಸಮೀಪದಲ್ಲಿರುವ ಈ ಸೇತುವೆ ದೇಶದ ಅತಿ ಉದ್ದನೆಯ ಸೇತುವೆಯಾಗಲಿದೆ. ಬ್ರಹ್ಮಪುತ್ರ ನದಿಗೆ ಅಡ್ಡವಾಗಿ ಈ ಸೇತುವೆಯನ್ನು ಕಟ್ಟಲಾಗಿದ್ದು 9.15ಕಿ.ಮೀ. ಉದ್ದವಿದೆ. ಢೋಲಾ - ಸಡಿಯಾ ನಡುವೆ ಈ ಸೇತುವೆ ಸಂಪರ್ಕವನ್ನು ನಿರ್ಮಿಸುತ್ತದೆ.

By Sachhidananda Acharya
|
Google Oneindia Kannada News

ಅಸ್ಸಾಂ, ಮೇ 26 : ಮುಂಬೈನ ಬಾಂದ್ರಾ-ವರ್ಲಿ ಸಮುದ್ರ ಸೇತುವನ್ನೂ ಮೀರಿಸುವ ದೇಶದ ಅತೀ ದೊಡ್ಡ ಸೇತುವೆ ಅಸ್ಸಾಂನಲ್ಲಿ ಇಂದು ಅಂದರೆ ಮೇ 26ರಂದು ಲೋಕಾರ್ಪಣೆಯಾಗಲಿದೆ. ಇದು ಮುಂಬೈ ಸೇತುವೆಗಿಂದ 3.55 ಕಿಲೋಮೀಟರ್ ಉದ್ದವಿದೆ.

ಪ್ರಧಾನಿ ನರೇಂದ್ರ ಮೋದಿ ಈ ಸೇತುವೆಯನ್ನು ಉದ್ಘಾಟಿಸಲಿದ್ದು 60 ಟನ್ಗಳಿಗೂ ಹೆಚ್ಚು ತೂಕದ ಸಮರ ಟ್ಯಾಂಕುಗಳ ತೂಕವನ್ನು ನಿಭಾಯಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

India's longest river bridge will be inaugurated in Assam on May 26 by PM Narendra Modi

ಚೀನಾದ ಗಡಿಯ ಸಮೀಪದಲ್ಲಿರುವ ಈ ಸೇತುವೆ ದೇಶದ ಅತಿ ಉದ್ದನೆಯ ಸೇತುವೆಯಾಗಲಿದೆ. ಬ್ರಹ್ಮಪುತ್ರ ನದಿಗೆ ಅಡ್ಡವಾಗಿ ಈ ಸೇತುವೆಯನ್ನು ಕಟ್ಟಲಾಗಿದ್ದು 9.15ಕಿ.ಮೀ. ಉದ್ದವಿದೆ. ಢೋಲಾ - ಸಡಿಯಾ ನಡುವೆ ಈ ಸೇತುವೆ ಸಂಪರ್ಕವನ್ನು ನಿರ್ಮಿಸುತ್ತದೆ. ಈ ಉದ್ಘಾಟನೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನಲ್ಲಿ ಎನ್.ಡಿ.ಎ. ಸರ್ಕಾರದ ಮೂರು ವರ್ಷಗಳ ಸಂಭ್ರಮಾಚರಣೆಗೂ ಚಾಲನೆ ನೀಡಲಿದ್ದಾರೆ.

India's longest river bridge will be inaugurated in Assam on May 26 by PM Narendra Modi

ಚೀನಾ ಗಡಿಯಲ್ಲಿ ಭದ್ರತಾ ಮೂಲ ಸೌಲಭ್ಯ ಹೆಚ್ಚಿಸುವ ಉದ್ದೇಶದ ಅಂಗವಾಗಿ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಜತೆಗೆ ಈ ಪ್ರಾಂತ್ಯದಲ್ಲಿ ಸಾರಿಗೆ ಸಂಪರ್ಕವೂ ಸುಧಾರಿಸಲಿದೆ. 2011ರಲ್ಲಿ ಈ ಸೇತುವೆ ನಿರ್ಮಾಣದ ಕಾರ್ಯ ಆರಂಭವಾಗಿತ್ತು.

950 ಕೋಟಿ ವೆಚ್ಚ

950 ಕೋಟಿ ರೂ.ಗಳ ವೆಚ್ಚದಲ್ಲಿ ಈ ಬೃಹತ್ ಸೇತುವೆ ನಿರ್ಮಿಸಲಾಗಿದೆ. ಅಸ್ಸಾಂ ರಾಜಧಾನಿ ಡಿಸ್ಪುರದಿಂದ 540 ಕಿ.ಮೀ. ಹಾಗೂ ಅರುಣಾಚಲದ ರಾಜಧಾನಿ ಇಟಾನಗರದಿಂದ 300 ಕಿ.ಮೀ. ದೂರದಲ್ಲಿ ಈ ಸೇತುವೆ ಇದೆ. ವಾಯು ಮಾರ್ಗವಾಗಿ ಈ ಸೇತುವೆ ಚೀನಾಕ್ಕೆ 100 ಕಿ.ಮೀ. ದೂರದಲ್ಲಿದೆ.

ಅಸ್ಸಾಂನ ತೇಜಪುರದ ಕಲಿಯಾ ಭೊಮೊರಾ ಸೇತುವೆ ಹೊರತು ಪಡಿಸಿದರೆ, ಅಲ್ಲಿಂದ ಮುಂದೆ ಢೋಲಾದವರಿಗಿನ 375 ಕಿ.ಮೀ. ನಲ್ಲಿ ಯಾವುದೇ ಸೇತುವೆ ಇಲ್ಲ.

India's longest river bridge will be inaugurated in Assam on May 26 by PM Narendra Modi

ಸೇತುವೆ ಸಾರ್ವಜನಿಕರ ಪ್ರಯಾಣಕ್ಕೆ ಸಿದ್ದವಾಗುತ್ತಿದ್ದಂತೆ ಅರುಣಾಚಲ ಪ್ರದೇಶ ಹಾಗೂ ಅಸ್ಸಾಂ ನಡುವಿನ ಪ್ರಯಾಣದ ಅಂತರ 4 ಗಂಟೆ ಕಡಿಮೆಯಾಗಲಿದೆ. ಅಷ್ಟೇ ದೂರದ ಪ್ರಯಾಣವೂ ಕಡಿತವಾಗಲಿದೆ.

English summary
India's longest river bridge will be inaugurated in Assam close to the border with China on May 26 by Prime Minister Narendra Modi. This 9.15 km long Dhola-Sadiya bridge, over the Brahmaputra river, capable of withstanding the weight of a 60-tonne battle tank.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X