ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಘಾ ಗಡಿಯಲ್ಲಿ ಹಾರಿತು ಭಾರತದ ಬೃಹತ್‌ ತ್ರಿವರ್ಣ ಧ್ವಜ

By Ramesh
|
Google Oneindia Kannada News

ಚಂಡೀಗಢ, ಮಾರ್ಚ್. 06 : ಭಾರತ ಮತ್ತು ಪಾಕಿಸ್ತಾನ ನಡುವಿನ ಅಟ್ಟಾರಿ(ಪಂಜಾಬ್) ಗಡಿಯಲ್ಲಿ ಬೃಹತ್‌ ತ್ರಿವರ್ಣ ಧ್ವಜ ಅನಾವರಣಗೊಳಿಸಲಾಗಿದೆ.

ಬಿಜೆಪಿ ಮುಖ್ಯಸ್ಥ ಅನಿಲ್‌ ಜೋಷಿ ಅವರ ನೇತೃತ್ವದಲ್ಲಿ ಧ್ವಜಾರೋಹಣ ನೇರವೇರಿಸಲಾಯಿತು. ತ್ರಿವರ್ಣ ಧ್ವಜದ ಹಾರಾಟ ಪಾಕಿಸ್ತಾನದ ಲಹೋರ್ ವರೆಗೂ ಕಾಣಿಸಲಿದೆ ಎಂಬುದು ವಿಶೇಷ.

ಈ ಯೋಜನೆಗೆ ಪಂಜಾಬ್ ಸರ್ಕಾರ 3.50 ಕೋಟಿ ರು ವೆಚ್ಚ ಮಾಡಿದ್ದು, ಅದರಲ್ಲಿ 1.75 ಕೋಟಿ ಕೇವಲ ಉಕ್ಕಿನ ಧ್ವಜಸ್ತಂಭಕ್ಕೆ ವೆಚ್ಚ ಮಾಡಲಾಗಿದೆ.

India’s largest tricolour at Wagah is visible from Lahore

ಧ್ವಜಸ್ತಂಭ ಭೂಮಿಯಿಂದ 365 ಅಡಿ ಎತ್ತರವಿದ್ದು, 55 ಟನ್ ತೂಕ ಹೊಂದಿದೆ. ತ್ರಿವರ್ಣ ಧ್ವಜ 110 ಅಡಿ ಉದ್ದ ಮತ್ತು 80 ಅಡಿ ಅಗಲ ಹೊಂದಿದೆ.

ಪ್ರಸ್ತುತ ಅನಾವರಣಗೊಂಡಿರುವ ತ್ರಿವರ್ಣಧ್ವಜಕ್ಕೂ ಮುನ್ನ ಜಾರ್ಖಂಡ್ ನ ರಾಂಚಿಯಲ್ಲಿರುವ 300 ಅಡಿ ಎತ್ತರದ ತ್ರಿವರ್ಣ ಧ್ವಜ ಇದುವರೆಗಿನ ಅತೀ ಎತ್ತರದ ರಾಷ್ಟ್ರಧ್ವಜ ಎನಿಸಿಕೊಂಡಿತ್ತು.

ಇದೀಗ ಅಟ್ಟಾರಿ ಗಡಿಯಲ್ಲಿ ನಿರ್ಮಿಸಿರುವ ತ್ರಿವರ್ಣ ಧ್ವಜ ದೇಶದ ಅತ್ಯಂತ ದೊಡ್ಡ ಧ್ವಜ ಎಂಬ ಖ್ಯಾತಿ ಗಳಿಸಿತು.

English summary
A 360-foot high flag post, said to be the country's tallest, was on Monday inaugurated at the Indo-Pak Attari Border, just a stone's throw from Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X