ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೌಕಾಪಡೆಯ ವಿರುದ್ಧ ಟ್ರಾನ್ಸ್ ಜೆಂಡರ್ ಕಾನೂನು ಹೋರಾಟ

ಲಿಂಗ ಪರಿವರ್ತನೆಗೊಂಡಿದ್ದಕ್ಕೆ ತಮ್ಮ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದ ನೌಕಾಪಡೆ ವಿರುದ್ಧ ಕಾನೂನು ಸಮರ. ನೌಕಾಪಡೆಯ ಇಂಜಿನಿಯರ್ ಶಾಬಿ (ಮೊದಲ ಹೆಸರು ಎಂ.ಕೆ. ಗಿರಿ) ಹೇಳಿಕೆ.

|
Google Oneindia Kannada News

ನವದೆಹಲಿ, ಆಗಸ್ಟ್ 30: ಲಿಂಗ್ ಪರಿವರ್ತನೆ ಮಾಡಿಸಿಕೊಂಡಿದ್ದಕ್ಕಾಗಿ ತಮ್ಮನ್ನು ಸೇವೆಯಿಂದ ತೆಗೆದುಹಾಕಲು ನಿರ್ಧರಿಸಿರುವ ಭಾರತೀಯ ನೌಕಾಪಡೆಯ ವಿರುದ್ಧ ಕಾನೂನು ಸಮರ ಸಾರುವುದಾಗಿ ನೌಕಾಪಡೆಯಲ್ಲಿ ಹಡಗು ನಿರ್ಮಾಣ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಶಾಬಿ (ಮೊದಲ ಹೆಸರು ಎಂ.ಕೆ. ಗಿರಿ) ತಿಳಿಸಿದ್ದಾರೆ.

ಸರ್ಕಾರಿ ಸೇವೆಗೆ ಸೇರುವಾಗ ಗಂಡು, ಸೇವೆ ಬಿಡುವಾಗ ಹೆಣ್ಣು! ಸರ್ಕಾರಿ ಸೇವೆಗೆ ಸೇರುವಾಗ ಗಂಡು, ಸೇವೆ ಬಿಡುವಾಗ ಹೆಣ್ಣು!

ಹುಟ್ಟಿನಿಂದ ಗಂಡಾಗಿ ಬೆಳೆದು ಯೌವ್ವನಕ್ಕೆ ಕಾಲಿಡುವ ಹೊತ್ತಿನಲ್ಲಿ ಮಾನಸಿಕವಾಗಿ ಹೆಣ್ಣಿನ ಗುಣಲಕ್ಷಣಗಳು ಮೈದಳೆದಿದ್ದರಿಂದಾಗಿ ತಾವು ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆದಿರುವುದಾಗಿ ಹೇಳಿದ್ದಾರೆ ಅವರು.

India's first transgender soldier vows to fight for her job

ವೈದ್ಯರು, 'ಜೆಂಡರ್ ಐಡೆಂಟಿಟಿ ಡಿಸಾರ್ಡರ್' ಎಂಬ ಸಮಸ್ಯೆಯನ್ನು ತಮ್ಮಲ್ಲಿ ಇರುವುದಾಗಿ ಹೇಳಿದ್ದು ಆ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರವನ್ನೂ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿಯೇ, ತಾವು ಲಿಂಗ ಪರಿವರ್ತನೆಗೆ ಮುಂದಾಗಿದ್ದಾರೆ ಅವರು ತಿಳಿಸಿದ್ದಾರೆ.

ಲಿಂಗ ಪರಿವರ್ತಿತರ ಸಮಸ್ಯೆ ಕೇಳಲು ಬಂತು ವೆಬ್ ಸೈಟ್ ಲಿಂಗ ಪರಿವರ್ತಿತರ ಸಮಸ್ಯೆ ಕೇಳಲು ಬಂತು ವೆಬ್ ಸೈಟ್

ಆದರೆ, ಲಿಂಗ ಪರಿವರ್ತನೆಗೊಂಡು ಪುನಃ ಕರ್ತವ್ಯಕ್ಕೆ ಹಾಜರಾದಾಗ, ತಮ್ಮನ್ನು ವಿಚಿತ್ರವಾಗಿ ನೋಡಲಾಯಿತು ಎಂದು ವ್ಯಥೆ ತೋಡಿಕೊಂಡಿರುವ ಅವರು, ಇಂಥ ಸಂದರ್ಭದಲ್ಲೇ ಈಗ ತಮ್ಮನ್ನು ಕೆಲಸದಿಂದ ತೆಗೆದುಹಾಕಲು ನೌಕಾಪಡೆ ಕೇಂದ್ರ ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಿದೆ. ಈ ಹಿನ್ನೆಲೆಯಲ್ಲಿ ತಾವು ಕಾನೂನೂ ಹೋರಾಟ ನಡೆಸುವುದಾಗಿ ಅವರು ತಿಳಿಸಿದರು.

English summary
Shabi's world turned upside down when reports surfaced that the Navy has recommended to the defense ministry that she be discharged from service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X