ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನವ ಪರೀಕ್ಷೆಗೆ ಅನುಮೋದನೆ ಪಡೆದ ದೇಶದ ಮೊದಲ ಎಂಆರ್‌ಎನ್‌ಎ ಲಸಿಕೆ

|
Google Oneindia Kannada News

ನವದೆಹಲಿ, ಡಿಸೆಂಬರ್ 11: ಪುಣೆ ಮೂಲದ ಔಷಧ ತಯಾರಿಕಾ ಸಂಸ್ಥೆ ಜೆನ್ನೋವಾ ಅಭಿವೃದ್ಧಿಪಡಿಸಿದ ಲಸಿಕೆ ಮಾನವ ಕ್ಲಿನಿಕಲ್ ಪ್ರಯೋಗಕ್ಕೆ ಅನುಮತಿ ಪಡೆದ ಭಾರತದ ಮೊದಲ ಸ್ವದೇಶಿ ನಿರ್ಮಿತ ಎಂಆರ್‌ಎನ್‌ಎ ಲಸಿಕೆ ಎನಿಸಿಕೊಂಡಿದೆ.

ಎಂಆರ್‌ಎನ್‌ಎ ಲಸಿಕೆಗಳು ಮನುಷ್ಯರ ದೇಹದಲ್ಲಿ ಪ್ರತಿರಕ್ಷಣಾ ಸ್ಪಂದನೆಯನ್ನು ಉತ್ಪಾದಿಸುವ ಸಾಂಪ್ರದಾಯಿಕ ಮಾದರಿಯನ್ನು ಬಳಸುವುದಿಲ್ಲ. ಹೀಗಾಗಿ ಜೆನ್ನೋವಾದ ಲಸಿಕೆ ಭಾರತದಲ್ಲಿ ಕ್ಲಿನಿಕಲ್ ಪ್ರಯೋಗಕ್ಕೆ ಅನುಮತಿ ಪಡೆದ ಮೊದಲ ಎಂಆರ್‌ಎನ್ಎ ಲಸಿಕೆ ಎಂದು ಸರ್ಕಾರ ಶುಕ್ರವಾರ ತಿಳಿಸಿದೆ.

ಭಾರಿ ಹಿನ್ನಡೆ: ಸನೋಫಿ-ಗ್ಲಾಕ್ಸೊ ಸ್ಮಿತ್‌ಕ್ಲೈನ್ ಕೊರೊನಾ ಲಸಿಕೆ ವಿಫಲಭಾರಿ ಹಿನ್ನಡೆ: ಸನೋಫಿ-ಗ್ಲಾಕ್ಸೊ ಸ್ಮಿತ್‌ಕ್ಲೈನ್ ಕೊರೊನಾ ಲಸಿಕೆ ವಿಫಲ

'ವೈರಸ್‌ನ ಸಿಂಥೆಟಿಕ್ ಆರ್‌ಎನ್‌ಎ ಮೂಲಕ ದೇಹದೊಳಗೆ ಪ್ರೋಟೀನ್ ಸೃಷ್ಟಿಸುವ ಆಣ್ವಿಕ ಸೂಚನೆಗಳನ್ನು ಎಂಆರ್‌ಎನ್‌ಎ ಲಸಿಕೆ ನಡೆಸುತ್ತದೆ' ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

 Indias First Homemade MRNA Vaccine By Gennova Gets Permission For Human Trails

'ಸಾಂಕ್ರಾಮಿಕವಲ್ಲದ, ಸಂಯೋಜನೆಗೊಳ್ಳದ ಗುಣಹೊಂದಿರುವುದರಿಂದ ಮತ್ತು ಗುಣಮಟ್ಟದ ಸೆಲ್ಯುಲರ್ ಯಾಂತ್ರಿಕತೆ ಕಾರಣ ಎಂಆರ್‌ಎನ್‌ಎ ಲಸಿಕೆಗಳು ಸುರಕ್ಷಿತ ಎಂದು ಪರಿಗಣಿಸಲಾಗಿದೆ. ಅಮೆರಿಕದ ಕಂಪೆನಿಗಳಾದ ಫೈಜರ್ ಮತ್ತು ಮಾಡೆರ್ನಾಗಳು ಎಂಆರ್‌ಎನ್‌ಎ ಮಾದರಿಯಿಂದಲೇ ಅಭಿವೃದ್ಧಿಯಾಗಿದ್ದು ಶೇ 90ರಷ್ಟು ಪರಿಣಾಮಕಾರಿ ಎಂದು ತಿಳಿಸಿವೆ.

ಜೆನ್ನೋವಾ ಸಂಸ್ಥೆಯು ಅಮೆರಿಕದ ಎಚ್‌ಡಿಟಿ ಬಯೋಟೆಕ್ ಕಾರ್ಪೊರೇಷನ್ ಸಹಯೋಗದಲ್ಲಿ ಲಸಿಕೆ ಅಭಿವೃದ್ಧಿಪಡಿಸಿದೆ. ಈ ಲಸಿಕೆಗೆ ಎಚ್‌ಜಿಸಿಒ 19 ಎಂಬ ಕೋಡ್ ಹೆಸರು ನೀಡಲಾಗಿದೆ. ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ಅದು ಈಗಾಗಲೇ ಸುರಕ್ಷತೆ, ಪ್ರತಿರಕ್ಷಣಾ ಸಾಮರ್ಥ್ಯ ವೃದ್ಧಿ, ಆಂಟಿಬಾಡಿ ಸಕ್ರಿಯತೆ ತಟಸ್ಥಗೊಳಿಸುವಿಕೆಗಳನ್ನು ಪ್ರದರ್ಶಿಸಿದೆ. ಇಲಿಗಳ ಮೇಲೆ ನಡೆಸಿದ ಆಂಟಿಬಾಡಿ ಪರೀಕ್ಷೆಯಲ್ಲಿ ಅದು ಪರಿಣಾಮಕಾರಿ ಎನಿಸಿದೆ ಎಂದು ಹೇಳಿಕೆ ತಿಳಿಸಿದೆ.

ಕೋವಿಡ್ ಲಸಿಕೆ ವಿತರಣೆ; ಕಾರ್ಯಪಡೆಯ ಸಭೆಕೋವಿಡ್ ಲಸಿಕೆ ವಿತರಣೆ; ಕಾರ್ಯಪಡೆಯ ಸಭೆ

Recommended Video

24 ಗಂಟೆಯೊಳಗಾಗಿ ಅಮೆರಿಕನ್ನರಿಗೆ ದೊರೆಯಲಿದೆ Pfizer vaccine | America | Vaccine | Oneindia Kannada

ಅಮೆರಿಕದ ಕಂಪೆನಿಗಳು ಅಭಿವೃದ್ಧಿಪಡಿಸಿದ ಎಂಆರ್‌ಎನ್‌ಎ ಲಸಿಕೆಗಳಿಗೆ ಸ್ಥಿರತೆ ಕಾಯ್ದುಕೊಳ್ಳಲು ಶೂನ್ಯ ಉಷ್ಣಾಂಶ ಬೇಕಿದ್ದರೆ, ಎಚ್‌ಜಿಸಿಒ19 ಲಸಿಕೆಯು 2-8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಎರಡು ತಿಂಗಳು ಸ್ಥಿರತೆಯನ್ನು ಉಳಿಸಿಕೊಳ್ಳಬಲ್ಲದು.

English summary
India's first homemade mRNA vaccine HGCO19 by Gennova on Friday got permission to start human trials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X