ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಮೊದಲ ಅತೀ ವೇಗದ ಬುಲೆಟ್‌ ರೈಲು 2026 ರಿಂದ ಹಳಿಗೆ: ಅಶ್ವಿನಿ ವೈಷ್ಣವ್‌

|
Google Oneindia Kannada News

ನವದೆಹಲಿ, ಡಿಸೆಂಬರ್‌ 09: "ಭಾರತದ ಮೊದಲ ಅತೀ ವೇಗದ ಬುಲೆಟ್‌ ರೈಲು 2026 ವೇಳೆಗೆ ಹಳಿಯಲ್ಲಿ ಸಂಚಾರ ಆರಂಭ ಮಾಡಲಿದೆ," ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಭಾರತದ ಮೊದಲ ಹೈ ಸ್ಪೀಡ್‌ ಮುಂಬೈ-ಅಹ್ಮದಾಬಾದ್‌ ಬುಲೆಟ್‌ ರೈಲು ಕಾರಿಡಾರ್‌ ಯೋಜನೆಯು 2026 ರ ವೇಳೆಗೆ ಪೂರ್ಣವಾಗಲಿದೆ ಎಂದು ತಿಳಿಸಿದ್ದಾರೆ.

ಮಾಧ್ಯಮವೊಂದರೆ ಜೊತೆ ಮಾತನಾಡುತ್ತಾ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌, "ದೇಶದಲ್ಲಿ ಮೊದಲ ಅತೀ ವೇಗದ ಬುಲೆಟ್‌ ರೈಲಿನಲ್ಲಿ ಸಂಚಾರ ಮಾಡಲು ಇನ್ನು ಒಂದು ಐದು ವರ್ಷ ಕಾಯಬೇಕು. ಐದು ವರ್ಷದ ಬಳಿಕ ಜನರು ದೇಶದ ಹೈ ಸ್ಪೀಡ್‌ ಬುಲೆಟ್‌ ಟ್ರೇನ್‌ನಲ್ಲಿ ಸಂಚಾರ ಮಾಡಬಹುದು," ಎಂದು ಹೇಳಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ರೈಲ್ವೇ ಸಚಿವರು ಈ ಯೋಜನೆ ಇನ್ನೂ ಕೊಂಚ ವಿಳಂಬ ಆಗುವ ಸಾಧ್ಯತೆಗಳ ಬಗ್ಗೆ ಉಲ್ಲೇಖ ಮಾಡಿದ್ದಾರೆ. "ಈ ಯೋಜನೆಯು ಕೊಂಚ ಮುಂದೂಡಿಕೆ ಆದರೂ ಕೂಡಾ 2027 ಕ್ಕಿಂತ ಅಧಿಕ ಸಮಯವನ್ನು ತೆಗೆದುಕೊಳ್ಳದು," ಎಂದರು.

Railway Minister

ವಿಳಂವಾಗಿದ್ದ ಯೋಜನೆ

ಡಿಸೆಂಬರ್ 2023ರ ಅಂತ್ಯದೊಳಗೆ ಭಾರತದ ಮೊದಲ ಮುಂಬೈ-ಅಹ್ಮದಾಬಾದ್ ಬುಲೆಟ್ ಟ್ರೈನ್ ಓಡಾಡಲಿದೆ ಎಂದು ಹೇಳಲಾಗಿತ್ತು. ಆದರೆ ಟೆಂಡರ್‌ಗಳ ಆರಂಭ ಮತ್ತು ಭೂಸ್ವಾಧೀನ ಪ್ರಕ್ರಿಯೆಗಳಿಗೆ ಕೊರೊನಾ ವೈರಸ್ ಸಾಂಕ್ರಾಮಿಕ ವಿಘ್ನ ತಂದೊಡ್ಡಿತ್ತು. ಬಿಡ್ಡರ್‌ಗಳು ಅಧಿಕ ಮೊತ್ತದ ದರವನ್ನು ನೀಡುತ್ತಿರುವುದರಿಂದ ಜಪಾನ್‌ನ ಕಂಪೆನಿಗಳು ಟೆಂಡರ್‌ನಲ್ಲಿ ಪಾಲ್ಗೊಳ್ಳಲು ಆಸಕ್ತಿ ವಹಿಸುತ್ತಿರಲಿಲ್ಲ. ಇದರಿಂದಾಗಿ ಭಾರತದ ಮೊದಲ ಬುಲೆಟ್ ರೈಲು ಯೋಜನೆಗೆ ಹಲವು ಅಡೆತಡೆಗಳು ಉಂಟಾಗಿತ್ತು.

ಇನ್ನು 2023ರ ಡಿಸೆಂಬರ್ ಬದಲು 2028ರ ಅಕ್ಟೋಬರ್‌ ವೇಳೆಗೆ ಬುಲಟ್ ರೈಲು ಯೋಜನೆ ಪೂರ್ಣಗೊಳ್ಳಬಹುದು ಎಂದು ರೈಲ್ವೆ ಇಲಾಖೆ ಈ ಹಿಂದೆ ಅಂದಾಜು ಮಾಡಿತ್ತು. ಆದರೆ ಈಗ ರೈಲ್ವೇ ಸಚಿವರು "ಈ ಮುಂಬೈ-ಅಹ್ಮದಾಬಾದ್ ಹೈ ಸ್ಪೀಡ್‌ ಬುಲೆಟ್‌ ಟ್ರೈನ್‌ ಯೋಜನೆಯು 2027 ಕ್ಕಿಂತ ಅಧಿಕ ಸಮಯವನ್ನು ತೆಗೆದುಕೊಳ್ಳದು," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Indias First High-Speed Bullet Train Set to Run on Track by 2026: Railway Minister

ಪ್ರಸ್ತುತ ಈ ಯೋಜನೆಯನ್ನು ಜಪಾನ್‌ ರೈಲ್ವೇ ಟ್ಯ್ರಾಕ್‌ ಕನ್ಸಲ್ಟೆಂಟ್‌ ಕಂಪನಿ (ಜಿಆರ್‌ಟಿಸಿ) ಜೊತೆ ಸೇರಿ ನ್ಯಾಷನಲ್‌ ಹೈ-ಸ್ಪೀಡ್‌ ರೈಲು ಕಾರ್ಪೋರೇಷನ್‌ ಲಿಮಿಟೆಡ್‌ (ಎನ್‌ಎಚ್‌ಎಸ್‌ಆರ್‌ಸಿಎಲ್‌) ನಡೆಸುತ್ತಿದೆ.

ಈ ಬಗ್ಗೆ ಅಧಿಕ ಮಾಹಿತಿ ನೀಡಿದ ಅಶ್ವಿನಿ ವೈಷ್ಣವ್‌, "ಜಪಾನಿ ಸಂಸ್ಥೆಯು ಹೊಸ ಶೈಲಿಯ ಕೆಲಸವನ್ನು ಮಾಡುತ್ತಿದ್ದಾರೆ. ಈ ಯೋಜನೆಯನ್ನು ಆರಂಭ ಮಾಡುವುದಕ್ಕೂ ಮುನ್ನವೇ ಎಲ್ಲವನ್ನೂ ಸಿದ್ಧ ಮಾಡಿಟ್ಟುಕೊಂಡು ಬಳಿಕ ಯೋಜನೆಯನ್ನು ಆರಂಭ ಮಾಡುವುದು ಅವರ ಶೈಲಿ. ಜಪಾನಿಗಳು ಭೂಸ್ವಾಧೀನ ಪ್ರಕ್ರಿಯೆಯು ಸರಿಯಾದ ರೀತಿಯಲ್ಲಿ ನಡೆಯುವುದಕ್ಕೆ ಕಾಯುತ್ತಿದ್ದಾರೆ. ಈ ಯೋಜನೆಯು ಮಹಾರಾಷ್ಟ್ರದಲ್ಲಿ ಪೂರ್ತಿ ಮಾಡಲು ತೊಂದರೆ ಆಗುವ ಸಾಧ್ಯತೆ ಇದೆ," ಎಂದು ಬಣ್ಣಿಸಿದ್ದಾರೆ.

ದೇಶದ ಮೊದಲ ಹೈಸ್ಪೀಡ್‌ ಬುಲೆಟ್‌ ರೈಲಿನ ಬಗ್ಗೆ ನೀವು ತಿಳಿಯಲೇ ಬೇಕಾದ ಮಾಹಿತಿ

Recommended Video

Ashes ಸರಣಿಯ ಮೊದಲನೇ ದಿನ ಮಳೆಯಲ್ಲಿ ಕೊಚ್ಚಿ ಹೋದ England | Oneindia Kannada

* ದೇಶದ ಮೊದಲ ಹೈಸ್ಪೀಡ್‌ ಬುಲೆಟ್‌ ರೈಲು 508 ದೂರ, 320 ಕಿಲೋ ಮೀಟರ್‌ ವೇಗದಲ್ಲಿ ಸಂಚಾರ ಮಾಡಲಿದೆ
* ಈ ಹಳಿ ಮಾರ್ಗದಲ್ಲಿ ಒಟ್ಟು ಹನ್ನೆರಡು ರೈಲು ನಿಲ್ದಾಣಗಳು ಇರಲಿದೆ ಎಂದು ರೈಲ್ವೇ ಸಚಿವಾಲಯ ತಿಳಿಸಿದೆ.
* ಈವರೆಗೆ ಕೇವಲ 119 ಪಿಲ್ಲರ್‌ಗಳನ್ನು ಮಾತ್ರ ಇರಿಸಲಾಗಿದೆ
* ಆರು ತಿಂಗಳಲ್ಲಿ ಇನ್ನೂ ಸುಮಾರು 50 ಕಿಲೋಮೀಟರ್‌ನಲ್ಲಿ ಕಾರ್ಯ ನಡೆಯುವ ಸಾಧ್ಯತೆ ಇದೆ.
* ಕಳೆದ ತಿಂಗಳು, ರಾಷ್ಟ್ರೀಯ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಎಚ್‌ಎಸ್‌ಆರ್‌ಸಿಎಲ್‌) ಹಾಗೂ ಜಪಾನೀಸ್‌ ಏಜೆನ್ಸಿ ಜಪಾನ್‌ ರೈಲ್ವೇ ಟ್ಯ್ರಾಕ್‌ ಕನ್ಸಲ್ಟೆಂಟ್‌ ಕಂಪನಿ (ಜಿಆರ್‌ಟಿಸಿ) ನಡುವೆ ಈ ಹೈಸ್ಪೀಡ್‌ ರೈಲು ಹಳಿಗಳ ವಿನ್ಯಾಸಕ್ಕಾಗಿ ಒಪ್ಪಂದ ನಡೆದಿದೆ.

English summary
India's First High-Speed Bullet Train Set to Run on Track by 2026 Said Railway Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X