ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕೊರೊನಾ ವೈರಸ್ ಅಂಟಿದವರಿಗೆಲ್ಲ ಸಾವು ಪಕ್ಕಾನಾ?

|
Google Oneindia Kannada News

ನವದೆಹಲಿ, ಜೂನ್.02: ಜಾಗತಿಕ ಮಟ್ಟದಲ್ಲಿ ನೊವೆಲ್ ಕೊರೊನಾ ವೈರಸ್ ಸೋಂಕಿನಿಂದ ಸಾವಿರಾರು ಜನರು ಪ್ರತಿನಿತ್ಯ ಪ್ರಾಣ ಬಿಡುತ್ತಿದ್ದಾರೆ. ಆದರೆ ಭಾರತದಲ್ಲಿನ ಚಿತ್ರಣ ಅನ್ಯರಾಜ್ಯಗಳಿಗೆ ಹೋಲಿಸಿದರೆ ಸಾಕಷ್ಟು ಭಿನ್ನವಾಗಿದೆ. ದೇಶದಲ್ಲಿ ಕೊರೊನಾ ವೈರಸ್ ಸೋಂಕಿನಿಂದಲೇ ಪ್ರಾಣ ಬಿಟ್ಟವರ ಪ್ರಮಾಣ ಶೇ.2.82ರಷ್ಟಿದೆ.

Recommended Video

ಆರೋಗ್ಯವನ್ನೇ ಮರೆತ ಅನಾರೋಗ್ಯ ಸಚಿವ..ಇದೇನ್ ಸನ್ಮಾನ ಮಾಡಿಸಿಕೊಳ್ಳೋ ಟೈಮೆನ್ರೀ | Oneindia Kannada

ಭಾರತದಲ್ಲಿ 100 ಜನರಿಗೆ ಕೊರೊನಾ ವೈರಸ್ ಸೋಂಕು ಅಂಟಿಕೊಂಡರೆ ಈ ಪೈಕಿ ಶೇ.2.82ರಷ್ಟು ಸೋಂಕಿತರು ಮಾತ್ರ ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ತಿಳಿಸಿದ್ದಾರೆ.

ಕೊರೊನಾ ಅಟ್ಟಹಾಸ: ಜಗತ್ತಿನ ಮುಂದೆ ರಷ್ಯಾ ಮೇಲುಗೈ, ಭಾರತಕ್ಕೂ ಹಿನ್ನಡೆಕೊರೊನಾ ಅಟ್ಟಹಾಸ: ಜಗತ್ತಿನ ಮುಂದೆ ರಷ್ಯಾ ಮೇಲುಗೈ, ಭಾರತಕ್ಕೂ ಹಿನ್ನಡೆ

ವಿಶ್ವದ ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಪ್ರಾಣ ಬಿಟ್ಟವರ ಸಂಖ್ಯೆಯು ಶೇ.2.82ರಷ್ಟಿದೆ. ಇದು ತೀರಾ ಕನಿಷ್ಠ ಮಟ್ಟವಾಗಿದ್ದು, ದೇಶದಲ್ಲಿ ಕೊರೊನಾ ವೈರಸ್ ಸೋಂಕು ತಗಲಿದವರ ಪೈಕಿ ಶೇ.73ರಷ್ಟು ಜನರು ಬೇರೆ ರೋಗದಿಂದಲೇ ಪ್ರಾಣ ಬಿಟ್ಟಿದ್ದಾರೆ ಎಂದು ಲಾವ್ ಅಗರ್ವಾಲ್ ಮಾಹಿತಿ ನೀಡಿದರು.

Indias Death Rate Due To Coronavirus At 2.82% - Says Central Government


ಅನ್ಯರಾಷ್ಟ್ರಗಳೊಂದಿಗಿನ ಹೋಲಿಕೆ ಸರಿಯಲ್ಲ:

ಭಾರತದಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಏರಿಕೆಯಾಗುತ್ತಿರುವ ಹಿನ್ನೆಲೆ ದೇಶವು 7ನೇ ಸ್ಥಾನದಲ್ಲಿದೆ. ಆದರೆ ಬೇರೆ ರಾಷ್ಟ್ರಗಳೊಂದಿಗೆ ಭಾರತವನ್ನು ಹೋಲಿಕೆ ಮಾಡಿ ನೋಡುವುದು ಸೂಕ್ತವಲ್ಲ. ಏಕೆಂದರೆ ಭಾರತದ ಜನಸಂಖ್ಯೆಯು ಬೇರೆ ರಾಷ್ಟ್ರಕ್ಕಿಂತ ಹೆಚ್ಚಾಗಿದೆ. ಹಾಗೆ ನೋಡಿದರೆ 14 ರಾಷ್ಟ್ರಗಳ 22.5ಪಟ್ಟು ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತದೆ, ಸಾವಿನ ಪ್ರಮಾಣ ಬರೋಬ್ಬರಿ 55.2 ಪಟ್ಟು ಹೆಚ್ಚಾಗುತ್ತದೆ.

ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಆರೋಗ್ಯ ದಿನದಿಂದ ದಿನಕ್ಕೆ ಚೇತರಿಕೆಯಾಗುತ್ತಿದೆ. ದೇಶದಲ್ಲಿ ಗುಣಮುಖರಾಗುತ್ತಿರುವ ಸಂಖ್ಯೆಯು ಕೂಡಾ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 3,708 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿದ್ದು, ಇದುವರೆಗೂ 95,527 ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. ಕಳೆದ ಏಪ್ರಿಲ್.15ರಿಂದ ಈಚೆಗೆ ಗುಣಮುಖರಾಗುತ್ತಿರುವವರ ಪ್ರಮಾಣದಲ್ಲಿ ಶೇ.11.42ರಷ್ಟು ಏರಿಕೆಯಾಗಿದ್ದು, ದೇಶದಲ್ಲಿ ಗುಣಮುಖರಾದವರ ಪ್ರಮಾಣ ಶೇ.48.07ರಷ್ಟಿದೆ.

English summary
India's Death Rate Due To Coronavirus At 2.82%. Say's Central Health Ministry Joint Secretary Lav Agarwal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X