ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕೊರೊನಾ ಸೋಂಕಿತರ ಚೇತರಿಕೆ ಪ್ರಮಾಣ ಶೇ.91.34ಕ್ಕೆ ಏರಿಕೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 31: ಭಾರತದಲ್ಲಿ ಕೊರೊನಾ ಸೋಂಕಿತರ ಚೇತರಿಕೆ ಪ್ರಮಾಣ 91.34ಕ್ಕೆ ತಲುಪಿದೆ.

ಭಾರತಕ್ಕೆ ಇನ್ನೆರಡು ತಿಂಗಳು ನಿರ್ಣಾಯಕ ಸಮಯವಾಗಿದ್ದು, ಕೊರೊನಾ ನಿಯಂತ್ರಣ ಲಸಿಕೆ ಲಭ್ಯವಾಗುವ ತನಕ ಜನರು ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ಹಿಂದಿಗಿಂತಲೂ ಈಗ ಅತ್ಯಂತ ಅನಿವಾರ್ಯವಾಗಿದೆ.

ದೇಶದಲ್ಲಿ ಐದು ಲಕ್ಷಕ್ಕೆ ಇಳಿಕೆಯಾದ ಸಕ್ರಿಯ ಪ್ರಕರಣಗಳುದೇಶದಲ್ಲಿ ಐದು ಲಕ್ಷಕ್ಕೆ ಇಳಿಕೆಯಾದ ಸಕ್ರಿಯ ಪ್ರಕರಣಗಳು

ದೇಶಾದ್ಯಂತ ಮಾರಕ ಕೊರೊನಾ ವೈರಸ್‍ನಹಾವಳಿ ಇಳಿಮುಖವಾಗುವ ಮುನ್ಸೂಚನೆ ನಡುವೆಯೇ ಮತ್ತೆ ಸೋಂಕು ಮತ್ತು ಸಾವು ಪ್ರಕರಣಗಳಲ್ಲಿ ಏರಿಳಿತ ಕಂಡಿರುವುದುಜನರಲ್ಲಿ ಪುನಃ ಕಳವಳಕ್ಕೆ ಕಾರಣವಾಗಿದೆ.

Indias COVID-19 Recovery Rate Reaches 91.34 Per Cent

ಗರಿಷ್ಠಕೇರಿ ಇಳಿಮುಖದತ್ತ ಸಾಗುತ್ತಿದ್ದ ಮಹಾಮಾರಿ ಬಗ್ಗೆ ಜನರು ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಧೋರಣೆ ಅನುಸರಿಸಿದ ಪರಿಣಾಮ ಮತ್ತೆ ಸೋಂಕು ಪ್ರಕರಣಗಳು ಏರತೊಡಗಿದೆ.

ನಿನ್ನೆ ಮತ್ತು ಮೊನ್ನೆ 50,000 ಸನಿಹದಲ್ಲೇ ದಿನನಿತ್ಯದ ಪಾಸಿಟಿವ್ ಕೇಸ್‍ಗಳ ವರದಿಯಾಗಿದೆ. ಸೋಂಕು ಪ್ರಕರಣಗಳು ಸ್ಥಿರವಾಗಿದ್ದರೂ, ದೇಶವಾಸಿಗಳು ಮುನ್ನೆಚ್ಚರಿಕೆ ವಹಿಸುವುದುತೀರಾ ಅಗತ್ಯವಾಗಿದೆ.

ಇವುಗಳ ನಡುವೆಯೂ ದೇಶದಲ್ಲಿ ಸೋಂಕಿತರ ಪ್ರಮಾಣ 82ಲಕ್ಷದಾಟುತ್ತಿರುವುದು ಜನರಲ್ಲಿ ಆತಂಕ ಮುಂದುವರಿಯುವಂತೆ ಮಾಡಿದೆ. ಈವರೆಗೆ ಗುಣಮುಖರಾದ ಸೋಂಕಿತರ ಸಂಖ್ಯೆ74.32ಲಕ್ಷದಾಟಿದೆ.

ಚೇತರಿಕೆ ಪ್ರಮಾಣ ಶೇ.91.34ರಷ್ಟು ಏರಿಕೆ ಮತ್ತು ಸಾವಿನ ಪ್ರಮಾಣ ಶೇ.1.49 ರಷ್ಟುತಗ್ಗಿದ್ದು, ಜನರಲ್ಲಿ ನಿರಾಳತೆ ಮೂಡಿದಿದೆ. ದೇಶದಲ್ಲಿ ಮೃತರ ಸಂಖ್ಯೆ1,21,641ದಾಟಿದೆ ಎಂದು ಕೇಂದ್ರಆರೋಗ್ಯ ಮತ್ತುಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ದೇಶದಲ್ಲಿಒಟ್ಟು ಸೋಂಕು ಪ್ರಕರಣಗಳು 82 ಲಕ್ಷ ಮತ್ತು ಸಾವಿನ ಸಂಖ್ಯೆ 1.22 ಲಕ್ಷಸನಿಹದಲ್ಲಿದೆ. ಹೆಮ್ಮಾರಿಯ ಆರ್ಭಟಗರಿಷ್ಠಕ್ಕೇರಿ ಇಳಿಮುಖದ ಹಾದಿಯಲ್ಲಿ ಸಾಗುತ್ತಿದ್ದ ಸಂದರ್ಭದಲ್ಲಿ ಜನರು ಮುನ್ನೆಚ್ಚರಿಕೆವಹಿಸದ ಪರಿಣಾಮ ದಿನಿನಿತ್ಯ ಪಾಸಿಟಿವ್ ಕೇಸ್‍ಗಳು ಸತತ ಮೂರನೇ ದಿನ 50,000ದತ್ತ ತಲುಪುತ್ತಿದೆ.

ನಿನ್ನೆ 48,648 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.ಮೊನ್ನೆಇದುಇಷ್ಟೇ ಪ್ರಮಾಣದಲ್ಲಿತ್ತು. ಸತತ13ನೇ ದಿನ 60,000ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಪಾಸಿಟಿವ್ ಕೇಸ್‍ಗಳು ವರದಿಯಾಗಿದೆ.

Recommended Video

Yediyurappa Valmiki ನಾಯಕರಿಗೆ ಒಳ್ಳೇದೇ ಮಾಡ್ತಾರೆ | Sriramulu | Oneindia Kannada

ಅಲ್ಲದೇ ಸತತ15ನೇ ದಿನವೂ ಸಕ್ರಿಯ ಸೋಂಕು ಪ್ರಕರಣಗಳು 8 ಲಕ್ಷಕ್ಕಿಂತ ಕಡಿಮೆ ಮಟ್ಟದಲ್ಲಿ ಇಳಿಮುಖದತ್ತ ಸಾಗಿದೆ.
ಭಾರತದಲ್ಲಿ ಒಟ್ಟು ರೋಗಿಗಳ ಸಂಖ್ಯೆ81,37,199ರಷ್ಟಿದ್ದು, ನಾಳೆ ವೇಳೆಗೆ 82ಲಕ್ಷದಾಟುವ ಸಾಧ್ಯತೆ ಇದೆ.

English summary
Over 74 lakh patients being cured from the infectious disease, the national recovery rate jumped to 91.34 percent. While the country's COVID-19 toll climbed to 1,21,641 with 551 new fatalities. The case fatality rate has dropped to 1.49 percent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X