ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19ನಿಂದ ಚೇತರಿಕೆ: ವಿಶ್ವದಲ್ಲೇ ಭಾರತ ನಂಬರ್ 1

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 14: ಕೊವಿಡ್ 19ನಿಂದ ಚೇತರಿಸಿಕೊಂಡವರಲ್ಲಿ ಭಾರತವೇ ಇಡೀ ವಿಶ್ವದಲ್ಲಿ ಮೊದಲ ಸ್ಥಾನದಲ್ಲಿದೆ. ಜಾನ್ಸ್ ಹಾಪ್ ಕಿನ್ಸ್ ಯುನಿವರ್ಸಿಟಿ ಮಾಹಿತಿ ಪ್ರಕಾರ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚಿನ 37, 80,107 ಮಂದಿ ಸೋಂಕಿತರು ಭಾರತದಲ್ಲಿ ಕೊವಿಡ್-19 ರೋಗದಿಂದ ಚೇತರಿಸಿಕೊಂಡಿದ್ದಾರೆ.

ವಿಶ್ವದಾದ್ಯಂತ ಕೊವಿಡ್-19 ಮಾಹಿತಿ ಪ್ರಕಾರ, ಭಾರತದಲ್ಲಿ 37, 80, 107 ಮಂದಿ ಗುಣಮುಖರಾಗಿದ್ದು, ನಂಬರ್ 1 ಸ್ಥಾನದಲ್ಲಿದ್ದಾರೆ. ಬ್ರೆಜಿಲ್ ನಲ್ಲಿ 37, 23, 206 ಮಂದಿ ಚೇತರಿಕೆಯಾಗಿದ್ದು, ಎರಡನೇ ಸ್ಥಾನದಲ್ಲಿದೆ. ನಂತರ ಅಮೆರಿಕದಲ್ಲಿ 24 51 406 ಮಂದಿ ಗುಣ ಮುಖರಾಗಿದ್ದು, ಮೂರನೇ ಸ್ಥಾನದಲ್ಲಿದೆ.

ಕೊರೊನಾ ಸೋಂಕು ಮೆದುಳಿನ ಮೇಲೂ ಪರಿಣಾಮ ಬೀರಬಲ್ಲದುಕೊರೊನಾ ಸೋಂಕು ಮೆದುಳಿನ ಮೇಲೂ ಪರಿಣಾಮ ಬೀರಬಲ್ಲದು

ಜಗತ್ತಿನಾದ್ಯಂತ ಒಟ್ಟಾರೇ ಸೋಂಕಿತರ ಸಂಖ್ಯೆ 2, 90, 06, 033 ಆಗಿದ್ದು, 9,24,105 ಮಂದಿ ಸಾವನ್ನಪ್ಪಿದ್ದಾರೆ. 1,96,25,959 ಮಂದಿ ಕೊರೋನಾವೈರಸ್ ನಿಂದ ಗುಣಮುಖರಾಗಿದ್ದಾರೆ.

Indias Covid 19 Recoveries Highest In The World

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ದಿನದಿಂದ ದಿನಕ್ಕೆ ಕೊರೊನಾವೈರಸ್ ನಿಂದ ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಚೇತರಿಕೆ ಪ್ರಮಾಣ ಶೇ. 78ರಷ್ಟಿದೆ.
ಭಾರತದಲ್ಲಿ 24 ಗಂಟೆಯಲ್ಲಿ 92,071 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 48,46,428ಕ್ಕೆ ಏರಿಕೆಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಹೆಲ್ತ್ ಬುಲೆಟಿನ್‌ನಲ್ಲಿ ಈ ಕುರಿತು ಮಾಹಿತಿ ನೀಡಿದೆ.

24 ಗಂಟೆಯಲ್ಲಿ ಭಾರತದಲ್ಲಿ 92,071 ಹೊಸ ಕೋವಿಡ್ ಪ್ರಕರಣ24 ಗಂಟೆಯಲ್ಲಿ ಭಾರತದಲ್ಲಿ 92,071 ಹೊಸ ಕೋವಿಡ್ ಪ್ರಕರಣ

ದೇಶದಲ್ಲಿ 24 ಗಂಟೆಯಲ್ಲಿ 1,136 ಜನರು ಸಾವನ್ನಪ್ಪಿದ್ದಾರೆ, ಇದುವರೆಗೂ ಒಟ್ಟು ಮೃತಪಟ್ಟವರ ಸಂಖ್ಯೆ 79,722. ಬೆಂಗಳೂರಲ್ಲಿ ಕೋವಿಡ್ ಪರೀಕ್ಷೆ ಬಳಿಕ ಮಹಿಳೆ ನಾಪತ್ತೆ ಭಾರತದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 9,86,598. ಇದುವರೆಗೂ ಗುಣಮುಖರಾದವರು 37,80,108 ಎಂದು ಆರೋಗ್ಯ ಸಚಿವಾಲಯ ಹೇಳಿದೆ.

Recommended Video

ಸದ್ಯದಲ್ಲೇ ಬಯಲಾಗುತ್ತೆ ಚೀನಾದ ನಿಜ ಬಣ್ಣ | Oneindia Kannada

ವಿಶ್ವದಲ್ಲಿಯೇ ಅತಿ ಹೆಚ್ಚು ಕೊವಿಡ್ ಸೋಂಕಿತರು ಇರುವ ದೇಶಗಳ ಪಟ್ಟಿಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ.

English summary
India on Monday overtook Brazil to register the highest number of Covid-19 recoveries in the world at 37,80,107, according to Johns Hopkins University data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X