ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಡ್ ನ್ಯೂಸ್: ಭಾರತದಲ್ಲಿ ಕೊವಿಡ್‌ನಿಂದ ಸಾವನ್ನಪ್ಪುವವರ ಪ್ರಮಾಣ ಶೇ.2.72ಕ್ಕೆ ಇಳಿಕೆ

|
Google Oneindia Kannada News

ನವದೆಹಲಿ, ಜುಲೈ 11: ಭಾರತದಲ್ಲಿ ಕೊರೊನಾ ಸೋಂಕಿನಿಂದ ಮೃತಪಡುವವರ ಪ್ರಮಾಣ ಶೇ.2.72ರಷ್ಟು ಇಳಿಕೆಯಾಗಿದೆ.

Recommended Video

Drone Prathap ಇಷ್ಟು ದಿನ ಹೇಳಿದ್ದೆಲ್ಲಾ ಸುಳ್ಳಾ ? | Oneindia Kannada

ಬೇರೆ ದೇಶಗಳಿಗೆ ಹೋಲಿಸಿದರೆ ಬಹಳವೇ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

18 ರಾಜ್ಯಗಳು ಮತ್ತುಕೇಂದ್ರಾಡಳಿತ ಪ್ರದೇಶಗಳಲ್ಲಿ ಚೇತರಿಕೆ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಭಾರತ: ಮೊದಲ ಬಾರಿಗೆ ಒಂದೇ ದಿನದಲ್ಲಿ ಕಾಲು ಲಕ್ಷ ದಾಟಿದ ಕೊರೊನಾ ಸೋಂಕಿತರುಭಾರತ: ಮೊದಲ ಬಾರಿಗೆ ಒಂದೇ ದಿನದಲ್ಲಿ ಕಾಲು ಲಕ್ಷ ದಾಟಿದ ಕೊರೊನಾ ಸೋಂಕಿತರು

ಶುಕ್ರವಾರ, ಭಾರತವು 26,506 ಕೊವಿಡ್‌ -19 ಪ್ರಕರಣಗಳೊಂದಿಗೆ ದಾಖಲೆಯ 7,93,802ಕ್ಕೆ ತಲುಪಿದೆ. ಸಾವಿನ ಸಂಖ್ಯೆ 21,604 ಕ್ಕೆ ಏರಿಕೆಯಾಗಿದ್ದು 475 ಜನರು 24 ಗಂಟೆಗಳಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ.

30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಮರಣ ಪ್ರಮಾಣ ಕಡಿಮೆ ಇದೆ ಎಂದು ಸಚ್ವಾಲಯ ಪ್ರಕಟಣೆ ಹೇಳಿದೆ. ಅಲ್ಲದೆ, ಚೇತರಿಕೆ ದರದಲ್ಲಿ ಏರಿಕೆಯಾಗುವ ಪ್ರವೃತ್ತಿ ಮುಂದುವರಿದಿದ್ದು ಶೇಕಡಾ 62.42 ರಷ್ಟಿದೆ.

ಸರಾಸರಿ ಸಾವಿನ ಪ್ರಮಾಣ

ಸರಾಸರಿ ಸಾವಿನ ಪ್ರಮಾಣ

ರಾಷ್ಟ್ರಮಟ್ಟದ ಸರಾಸರಿ ಸಾವಿನ ಪ್ರಮಾಣವು ಶೇಕಡಾ 2.72 ಕ್ಕೆ ಇಳಿದಿದೆ. ಇದು ವಿಶ್ವದ ಇತರ ದೇಶಗಳಲ್ಲಿ ಕಂಡುಬರುವ ಸಾವಿನ ಪ್ರಮಾಣಕ್ಕಿಂತ ಕಡಿಮೆಯಾಗಿದೆ. ದೇಶದಲ್ಲಿ ಕೊವಿಡ್‌ -19 ನಿರ್ವಹಣೆಯಮಾದರಿಯು ಹೆಚ್ಚಿನ ಸಾವುನೋವುಗಳನ್ನು ತಗ್ಗಿಸಿದೆ . ಕೇಂದ್ರ ಸರ್ಕಾರದ ಬೆಂಬಲ ಮತ್ತು ಮಾರ್ಗದರ್ಶನದೊಂದಿಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಬಾಧಿತರಾಗುವವರಿಗೆ ಹಾಗೂ ವೃದ್ದರು,. ಮಕ್ಕಳ ಮೇಲೆ ವಿಶೇಷ ಕಾಳಜಿಯನ್ನು ನೀಡುವಂತಹ ಹಲವು ಕ್ರಮಗಳನ್ನು ಕೈಗೊಂಡಿವೆ ಎಂದು ಸಚಿವಾಲಯ ಹೇಳಿದೆ.

ಚೇತರಿಕೆ ಪ್ರಮಾಣ ಹೆಚ್ಚಿರುವ ರಾಜ್ಯಗಳು

ಚೇತರಿಕೆ ಪ್ರಮಾಣ ಹೆಚ್ಚಿರುವ ರಾಜ್ಯಗಳು

ಚೇತರಿಕೆ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿರುವ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಪಶ್ಚಿಮ ಬಂಗಾಳ (64.94 ಪಿಸಿ), ಉತ್ತರ ಪ್ರದೇಶ (65.28 ಪಿಸಿ), ಒಡಿಶಾ (66.13 ಪಿಸಿ), ಜಾರ್ಖಂಡ್ (68.02 ಪಿಸಿ), ಪಂಜಾಬ್ (69.26 ಪಿಸಿ), ಬಿಹಾರ (70.40 ಪಿಸಿ), ಗುಜರಾತ್ (70.72 ಪಿಸಿ), ಮಧ್ಯಪ್ರದೇಶ ( 74.85 ಪಿಸಿ), ಹರಿಯಾಣ (74.91 ಪಿಸಿ), ರಾಜಸ್ಥಾನ (75.65 ಪಿಸಿ) ಮತ್ತು ದೆಹಲಿ (76.81 ಪಿಸಿ) ಸೇರಿದೆ.

ವೈದ್ಯಕೀಯ ಗುಣಮಟ್ಟ ಸುಧಾರಣೆ

ವೈದ್ಯಕೀಯ ಗುಣಮಟ್ಟ ಸುಧಾರಣೆ

ಕೊರೊನಾವೈರಸ್ ರೋಗಿಗಳಿಗೆ ವೈದ್ಯಕೀಯ ಆರೈಕೆಯ ಗುಣಮಟ್ಟವನ್ನು ಸುಧಾರಿಸುವತ್ತ ಗಮನ ಹರಿಸಲಾಗಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ ಜೊತೆಗೆ ದೇಶಾದ್ಯಂತದ ಆಶಾ ಕಾರ್ಯಕರ್ತರು ಎಎನ್‌ಎಂಗಳ ಬಲವಾದ ಜಾಲವು ಲಕ್ಷಾಂತರ ವಲಸಿಗರ ಸ್ವಂತ ಊರಿಗೆ ಹಿಂತಿರುಗಿದವರ ಪರಿಣಾಮಕಾರಿ ಕಣ್ಗಾವಲು ಮತ್ತು ಸಂಪರ್ಕವನ್ನು ಪತ್ತೆಹಚ್ಚಲು ಸಹಾಯ ಮಾಡಿದೆ ಎಂದು ಅದು ಹೇಳಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಸುಧಾರಣೆ

ಎಲ್ಲೆಲ್ಲಿ ಎಷ್ಟೆಷ್ಟು ಸುಧಾರಣೆ

ಕೇರಳ (0.41 ಪಿಸಿ), ಜಾರ್ಖಂಡ್ (0.71 ಪಿಸಿ), ಬಿಹಾರ (0.82 ಪಿಸಿ), ತೆಲಂಗಾಣ (1.07 ಪಿಸಿ), ತಮಿಳುನಾಡು (1.39 ಪಿಸಿ), ಹರಿಯಾಣವನ್ನು ಒಳಗೊಂಡಿರುವ ರಾಷ್ಟ್ರೀಯ ಸರಾಸರಿಗಿಂತ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಕಡಿಮೆ ಗಳು ಸಾವಿನ ಪ್ರಮಾಣ ಹೊಂದಿದೆ.

ಸಾವಿನ ಪ್ರಮಾಣ ಶೂನ್ಯ

ಸಾವಿನ ಪ್ರಮಾಣ ಶೂನ್ಯ

ಮಣಿಪುರ, ನಾಗಾಲ್ಯಾಂಡ್, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಹಾಗೂ ದಿಯು , ಮಿಜೋರಾಂ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಸಿಕ್ಕಿಂನಲ್ಲಿಸಾವಿನ ಪ್ರಮಾಣ ಶೂನ್ಯ ವಾಗಿದೆ.

English summary
From 2.82 per cent a month earlier, India’s Covid-19 case fatality rate has declined to 2.72 per cent which is lower than that of many other countries, the Union Health Ministry said on Friday.ಭಾರತದಲ್ಲಿ ಕೊರೊನಾ ಸೋಂಕಿನಿಂದ ಮೃತಪಡುವವರ ಪ್ರಮಾಣ ಶೇ.2.72ರಷ್ಟು ಇಳಿಕೆಯಾಗಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X