ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾತಂತ್ರ್ಯೋತ್ಸವ ನಿಮಿತ್ತ ನಿತಿನ್ ಗಡ್ಕರಿ ಅವರಿಂದ ವಿಶೇಷ ಲೇಖನ

By ನಿತಿನ್ ಗಡ್ಕರಿ
|
Google Oneindia Kannada News

ನವದೆಹಲಿ, ಆಗಸ್ಟ್ 09: 70ನೇ ಸ್ವಾತಂತ್ರ್ಯೋತ್ಸವ 2017 ನಿಮಿತ್ತ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹಾಗೂ ನೌಕಾ ಖಾತೆಗಳ ಸಚಿವರಾದ ನಿತಿನ್ ಗಡ್ಕರಿ ಅವರು 'ಭಾರತದ ಬದಲಾಗುತ್ತಿರುವ ಸಾರಿಗೆ ಚಹರೆ' ಎಂಬ ವಿಷಯದ ಬಗ್ಗೆ ವಿಶೇಷ ಲೇಖನ ಪ್ರಸ್ತುತಪಡಿಸುತ್ತಿದ್ದಾರೆ.

ಒಂದು ದೇಶವು ಮನುಷ್ಯರ ಪ್ರಯಾಣ ಸೌಲಭ್ಯಕ್ಕೂ ಸರಕು ಸಾಗಣೆ ವ್ಯವಸ್ಥೆಗೂ ಯಾವ ಬಗೆಯ ವ್ಯವಸ್ಥೆಯನ್ನು ಹೊಂದಿದೆ ಎನ್ನುವುದಕ್ಕೂ ದೇಶದ ಅಭಿವೃದ್ಧಿಗೂ ನಿಕಟ ಸಂಬಂಧವಿದೆ.

ಒಳ್ಳೆಯ ಸಾರಿಗೆ ವ್ಯವಸ್ಥೆಯು ಲಭ್ಯವಿರುವ ಸಂಪನ್ಮೂಲಗಳು, ಉತ್ಪಾದನಾ ಕೇಂದ್ರಗಳು ಮತ್ತು ಮಾರುಕಟ್ಟೆಯ ನಡುವೆ ಅಗತ್ಯವಾದ ಸಂಪರ್ಕಸೇತುವಿನಂತೆ ಕೆಲಸ ಮಾಡುತ್ತ, ದೇಶದ ಆರ್ಥಿಕ ಬೆಳವಣಿಗೆಗೆ ನೆರವುನೀಡುತ್ತದೆ. ಜತೆಗೆ,ಒಳ್ಳೆಯ ಸಾರಿಗೆ ವ್ಯವಸ್ಥೆಯು ದೇಶದ ಅತ್ಯಂತ ಹಿಂದುಳಿದ ಭಾಗದಲ್ಲಿರುವ ಕಟ್ಟಕಡೆಯ ಮನುಷ್ಯನಿಗೆ ಕೂಡ ಸರಕುಗಳು ಮತ್ತು ಸೇವೆಗಳನ್ನು ದೊರಕಿಸಿಕೊಡುವ ಮೂಲಕ ಸಮತೋಲಿತ ಪ್ರಾದೇಶಿಕ ಬೆಳವಣಿಗೆಯನ್ನು ಉತ್ತೇಜಿಸುವುದರಲ್ಲೂ ಪ್ರಮುಖ ಅಂಶವಾಗಿದೆ.

India’s Changing Transport Landscape : Nitin Gadkari

ಭಾರತವು ವಿಶ್ವದಲ್ಲೇ ಅತ್ಯಂತ ವಿಶಾಲವಾದ ಸಾರಿಗೆಜಾಲವನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದ್ದರೂ ಬಹಳ ಹಿಂದಿನಿಂದಲೂ ಇದು ಮಂದಗತಿಯಿಂದ ನರಳುತ್ತಿದ್ದು, ಜನರ ಪ್ರಯಾಣ ಸರಕುಸಾಗಣೆಯಲ್ಲಿ ನಾವು ದಕ್ಷತೆಯನ್ನು ಸಾಧಿಸಲು ಸಾಧ್ಯವಾಗಿಲ್ಲ. ಈ ವಲಯವು ಅನೇಕ ಸವಾಲುಗಳನ್ನು ಎದುರಿಸುತ್ತಿದೆ.

ತುಂಬಾ ಹಿಂದುಳಿದಿರುವ ಮತ್ತು ದುರ್ಗಮವಾಗಿರುವ ಪ್ರದೇಶಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ,ಅಂತಹ ಕಡೆಗಳಲ್ಲಿ ನಿರ್ಮಿಸಿರುವ ಸಾರಿಗೆವ್ಯವಸ್ಥೆಯು ಅಲ್ಲಿನ ಅಗತ್ಯಗಳಿಗೆ ಸಾಲದಾಗಿದೆ. ನಮ್ಮ ಹೆದ್ದಾರಿಗಳು ಕಿರಿದಾಗಿದ್ದು, ಸದಾದಟ್ಟಣೆಯಿಂದ ಕೂಡಿರುತ್ತವೆ. ಜತೆಗೆ, ಇವುಗಳ ನಿರ್ವಹಣೆಯು ಕೆಟ್ಟದಾಗಿದ್ದು, ಇದು ಮಂದಗತಿಯ ಸಂಚಾರಕ್ಕೆಕಾರಣವಾಗಿದೆ.

ಅಸಮರ್ಪಕ ಸಾರಿಗೆ ವ್ಯವಸ್ಥೆ: ಅಲ್ಲದೆ, ಇದು ಅಂತಿಮವಾಗಿ ತುಂಬಾ ಅಮೂಲ್ಯವಾದ ಸಮಯವು ವ್ಯರ್ಥವಾಗುವಂತೆ ಮಾಡುತ್ತಿದ್ದು, ವಿಪರೀತ ಮಾಲಿನ್ಯಕ್ಕೂ ಕಾರಣವಾಗಿದೆ. ಇನ್ನೊಂದೆಡೆಯಲ್ಲಿ, ಈ ರೀತಿಯ ಅಸಮರ್ಪಕ ಸಾರಿಗೆ ವ್ಯವಸ್ಥೆಯಿಂದಾಗಿ ಅಪಾರ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಪ್ರತೀವರ್ಷವೂ ಸರಿ ಸುಮಾರು 1.5 ಲಕ್ಷ ಜನರು ತಮ್ಮ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ.

ವಾಸ್ತವವಾಗಿ ಸಾರಿಗೆ ವಿಧಾನಗಳಲ್ಲೇ ಭೂ ಸಾರಿಗೆಯು(ಮೇಲ್ಮೈಸಾರಿಗೆ) ತುಂಬಾ ದುಬಾರಿಯಾದುದು. ಆದರೂ ನಮ್ಮಲ್ಲಿ ಭೂ ಸಾರಿಗೆಯ ಮೂಲಕವೇ ಅತ್ಯಧಿಕ ಪ್ರಮಾಣದ ಸರಕು ಸಾಗಣೆ ನಡೆಯುತ್ತಿದೆ. ಇದಕ್ಕೆ ತಕ್ಕಂತೆ ನಮ್ಮಲ್ಲಿ ಅತ್ಯಧಿಕ ಪ್ರಮಾಣದ ಮಾಲಿನ್ಯವೂ ಉಂಟಾಗುತ್ತಿದೆ.

ರಸ್ತೆ ಸಾರಿಗೆಗೆ ಹೋಲಿಸಿದರೆ ರೈಲು ವ್ಯವಸ್ಥೆಯು ನಿಜಕ್ಕೂ ಅಗ್ಗ ಮತ್ತು ಪರಿಸರ ಸ್ನೇಹಿಯಾಗಿದೆ. ಆದರೆ, ನಮ್ಮಲ್ಲಿರುವ ರೈಲ್ವೆಜಾಲವು ತುಂಬಾ ಮಂದಗತಿಯಿಂದ ಕೂಡಿದ್ದು, ಇದು ಕೂಡ ನಮ್ಮ ಅಗತ್ಯಕ್ಕೆ ತಕ್ಕಷ್ಟಿಲ್ಲ.ಇನ್ನು ಜಲಸಾರಿಗೆಯಂತೂ ರೈಲ್ವೆ ವ್ಯವಸ್ಥೆಗಿಂತ ಇನ್ನೂಹೆಚ್ಚು ಅಗ್ಗವಾಗಿದ್ದು, ಅತ್ಯಂತ ಹೆಚ್ಚು ಪರಿಸರ ಸ್ನೇಹಿಯಾಗಿದೆ.

ಆದರೆ, ಇದು ನಮ್ಮಲ್ಲಿ ರಸ್ತೆಸಾರಿಗೆ ಮತ್ತು ರೈಲ್ವೆ ವ್ಯವಸ್ಥೆಗಿಂತಲೂ ತೀರಾ ಹಿಂದುಳಿದಿದೆ.ಇಂಥ ಅಸಮರ್ಪಕ ಸಾರಿಗೆ ವ್ಯವಸ್ಥೆಯ ಪರಿಣಾಮವಾಗಿ, ನಮ್ಮಸರಕುಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಅಸಮರ್ಥವಾಗಿವೆ. ಆದರೆ, ಕಳೆದ ಮೂರ್ನಾಲ್ಕುವರ್ಷಗಳಿಂದಈಚಿತ್ರಣವು ಬದಲಾಗುತ್ತಿದೆ.

ಕೇಂದ್ರ ಸರಕಾರವುದೇಶದ ಉದ್ದಗಲಕ್ಕೂ ವಿಶ್ವದರ್ಜೆಯ ಸಾರಿಗೆ ಮೂಲಸೌಲಭ್ಯವನ್ನು ನಿರ್ಮಿಸುವ ಕೆಲಸವನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಂಡಿದೆ. ಈ ವಿಷಯದಲ್ಲಿ ಸರಕಾರವು ಮಿತವ್ಯಯ, ಸುಲಭ ಲಭ್ಯತೆ, ಸುರಕ್ಷತೆ, ಕನಿಷ್ಠ ಪ್ರಮಾಣದ ಮಾಲಿನ್ಯಮತ್ತು ಸಾಧ್ಯವಾದಷ್ಟೂ ಮಟ್ಟಿಗೆ ಸ್ಥಳೀಯ ಪರಿಕರಗಳ ಬಳಕೆ- ಈ ಎಲ್ಲ ಅಂಶಗಳನ್ನೂ ಗಮನಕ್ಕೆ ತೆಗೆದುಕೊಂಡಿದೆ.

ಅಲ್ಲದೆ, ಜಾಗತಿಕ ಗುಣಮಟ್ಟದ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಈಗಾಗಲೇ ಇರುವ ಸಾರಿಗೆ ಸೌಲಭ್ಯದ ಬಲವರ್ಧನೆ, ಹೊಸ ಮೂಲ ಸೌಲಭ್ಯಗಳ ನಿರ್ಮಾಣ ಮತ್ತು ಇದನ್ನೆಲ್ಲ ಉತ್ತೇಜಿಸಲು ಈಗ ಇರುವ ವ್ಯವಸ್ಥೆಯ ಆಧುನೀಕರಣ ಇವೆಲ್ಲವನ್ನೂ ಇದು ಒಳಗೊಂಡಿದೆ. ಇದರಲ್ಲಿ, ಖಾಸಗಿ ವಲಯದವರೊಂದಿಗೆ ಸಹಭಾಗಿತ್ವ ಮತ್ತು ಇಂಥ ಸಹಭಾಗಿತ್ವಕ್ಕೆಅಗತ್ಯವಾದ ವಾತಾವರಣ ನಿರ್ಮಾಣ- ಇವುಗಳ ಕಡೆಗೂ ಸರಕಾರ ಗಮನಹರಿಸಿದೆ.

ಇಡೀ ದೇಶದ ರಸ್ತೆಜಾಲವನ್ನು ಗಣನೆಗೆ ತೆಗೆದುಕೊಂಡರೆ, ಇದರಲ್ಲಿರುವ ರಾಷ್ಟ್ರೀಯಹೆದ್ದಾರಿಯ ಪ್ರಮಾಣ ಕೇವಲ ಶೇಕಡ ಎರಡು ಅಷ್ಟೆ. ಆದರೆ, ಈ ಪ್ರತಿಶತ ಎರಡರಷ್ಟು ರಸ್ತೆಗಳ ಮೂಲಕವೇ ದೇಶದ ಶೇಕಡ 40ರಷ್ಟು ಸರಕು ಸಾಗಣೆನಡೆಯುತ್ತಿದೆ. ಹೀಗಾಗಿ, ಸರಕಾರವು ಈ ಮೂಲ ಸೌಲಭ್ಯವನ್ನು ಗುಣಮಟ್ಟದೊಂದಿಗೆ ಮತ್ತಷ್ಟುವಿಸ್ತರಿಸಲುಮುಂದಾಗಿದೆ. 2014ರಲ್ಲಿ ಇಡೀ ದೇಶದಲ್ಲಿದ್ದ ರಾಷ್ಟ್ರೀಯಹೆದ್ದಾರಿಯ ಉದ್ದ ಕೇವಲ 96,000 ಕಿ.ಮೀ.ನಷ್ಟು ಮಾತ್ರ.

ಈಗ ನಮ್ಮಲ್ಲಿ 1.5 ಲಕ್ಷ ಕಿ.ಮೀ.ಉದ್ದದಷ್ಟು ರಾಷ್ಟ್ರೀಯಹೆದ್ದಾರಿ ಇದ್ದು, ಸದ್ಯದಲ್ಲೇ ಇದು 2 ಲಕ್ಷಕಿ.ಮೀ.ಗಳಷ್ಟಾಗಲಿದೆ. ಜತೆಗೆ, ಇಷ್ಟರಲ್ಲೇ ಜಾರಿಗೆ ಬರಲಿರುವಭಾರತಮಾಲಾ' ಯೋಜನೆಯಡಿ ದೇಶದಗಡಿ ಮತ್ತು ಅಂತಾರಾಷ್ಟ್ರೀಯರಸ್ತೆಗಳನ್ನು ಬೆಸೆಯಲಾಗುವುದು. ಅಲ್ಲದೆ,ಇದರ ಮೂಲಕ ಆರ್ಥಿಕ ಕಾರಿಡಾರುಗಳನ್ನು, ಅಂತರ್ದೇಶೀಯ ಕಾರಿಡಾರುಗಳನ್ನು, ಫೀಡರ್ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುವುದು.

ಭಾರತಮಾಲಾ ಯೋಜನೆ: ಮಿಗಿಲಾಗಿ ರಾಷ್ಟ್ರೀಯಕಾರಿಡಾರುಗಳ (ಹೆದ್ದಾರಿಗಳ) ಸುಧಾರಣೆ, ದೇಶದ ಕರಾವಳಿ ಮತ್ತು ಬಂದರುಗಳಿಗೆ ಸಮರ್ಪಕ ಸಂಪರ್ಕವನ್ನು ಸಾಧ್ಯವಾಗಿಸುವಂಥ ರಸ್ತೆಗಳ ನಿರ್ಮಾಣ, ಪರಿಸರಸ್ನೇಹಿ ಎಕ್ಸ್ಪ್ರೆಸ್ವೇಗಳ ನಿರ್ಮಾಣ ಕೂಡಭಾರತಮಾಲಾ' ಯೋಜನೆಯಡಿ ನಡೆಯಲಿದೆ.

ರಸ್ತೆ ನಿರ್ಮಾಣದ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರವು ಈಶಾನ್ಯ ವಲಯ, ನಕ್ಸಲ್ ಪೀಡಿತಪ್ರದೇಶಗಳು, ಹಿಂದುಳಿದ ಪ್ರದೇಶಗಳು ಮತ್ತು ರಸ್ತೆ ಸೌಲಭ್ಯವನ್ನೇ ಹೊಂದಿರದ ಒಳನಾಡುಗಳಿಗೆ ವಿಶೇಷ ಗಮನಕೊಟ್ಟಿದೆ.

ಇತ್ತೀಚೆಗೆ ಅಸ್ಸಾಂನಲ್ಲಿ ಬ್ರಹ್ಮಪುತ್ರಾ ನದಿಗೆ ಅಡ್ಡಲಾಗಿ ಕಟ್ಟಲಾದ ಧೋಲಾಸಾದಿಯಾ ಸೇತುವೆ ಮತ್ತು ಜಮ್ಮು-ಕಾಶ್ಮೀರದಲ್ಲಿ ಲೋಕಾರ್ಪಣೆಗೊಂಡ ಸುಸಜ್ಜಿತ ಚಿನಾನಿ-ನಾಸ್ರಿ ಸುರಂಗಗಳು ಪ್ರಯಾಣದ ಅಂತರವನ್ನೇ ಸಾಕಷ್ ಗಮನಾರ್ಹವಾಗಿ ಕಡಿಮೆಮಾಡಿವೆ. ಇಂಥ ಮತ್ತಷ್ಟು ಸೇತುವೆಗಳು ಮತ್ತು ಸುರಂಗಗಳು ದೇಶದ ಹಲವೆಡೆಗಳಲ್ಲಿರುವ ದುರ್ಗಮಪ್ರದೇಶಗಳಲ್ಲಿ ನಿರ್ಮಾಣವಾಗುತ್ತಿವೆ.

ವಿಪರೀತ ಸಂಚಾರದಟ್ಟಣೆಯನ್ನು ಹೊಂದಿರುವಂಥ ವಡೋದರಾ-ಮುಂಬೈ, ಬೆಂಗಳೂರು-ಚೆನ್ನೈಮತ್ತು ದೆಹಲಿ-ಮೀರತ್ ಹೆದ್ದಾರಿಗಳನ್ನು ವಿಶ್ವದರ್ಜೆಯ ಹೆದ್ದಾರಿಗಳನ್ನಾಗಿ ಮಾಡಲು ಸರಕಾರ ಮುತುವರ್ಜಿ ವಹಿಸಿದೆ. ಎಕ್ಸ್ಪ್ರೆಸ್ವೇಗಳಲ್ಲಿ ನಿಯಂತ್ರಿತ ಸಂಚಾರಕ್ಕೆ ಮತ್ತು ಚಾರ್ ಧಾಮ್ ಮತ್ತು ಬೌದ್ಧ ಪುಣ್ಯಕ್ಷೇತ್ರಗಳಿಗೆ ಕರೆದೊಯ್ಯುವ ಹೆದ್ದಾರಿಗಳಲ್ಲಿ ಹೆಚ್ಚುವೇಗದಿಂದ ಮತ್ತು ಹೆಚ್ಚು ಅನುಕೂಲಗಳಿಂದ ಕೂಡಿದ ಸಂಚಾರ ಸಾಧ್ಯವಾಗುವಂತೆ ಮಾಡಲಾಗುವುದು.

ನಾವು ಕೇವಲ ಮತ್ತಷ್ಟು ಹೆದ್ದಾರಿಗಳನ್ನು ಹೊಸದಾಗಿ ನಿರ್ಮಿಸಲು ಮಾತ್ರ ಉದ್ದೇಶಿಸಿಲ್ಲ. ಬದಲಿಗೆ, ಹೆದ್ದಾರಿಗಳನ್ನು ಸುರಕ್ಷಿತ ಪಯಣದ ಹಾದಿಗಳನ್ನಾಗಿಯೂ ಮಾಡಲು ಬದ್ಧರಾಗಿದ್ದೇವೆ. ಇದಕ್ಕಾಗಿ ನಾವು ಒಂದು ಸಮಗ್ರ ದೃಷ್ಟಿಕೋನವನ್ನು ಅಳವಡಿಸಕೊಂಡಿದ್ದೇವೆ.

ಇದರ ಪ್ರಕಾರ, ರಸ್ತೆಯ ವಿನ್ಯಾಸದಲ್ಲಿ ಸುರಕ್ಷತೆಗೆ ಒತ್ತು, ಅಪಘಾತ ಸಂಭವಿಸುವಂಥ ಸ್ಥಳಗಳ ಪತ್ತೆ, ಸರಿಯಾದ ರಸ್ತೆ ಸಂಚಾರ ಸೂಚನಾಫಲಕಗಳ ಅಳವಡಿಸುವಿಕೆ, ಇನ್ನೂ ಹೆಚ್ಚು ಪರಿಣಾಮಕಾರಿಯಾದ ಶಾಸನಗಳ ರೂಪಿಸುವಿಕೆ, ಸುಧಾರಿತವಾಹನ ಸುರಕ್ಷಾ ಮಾನದಂಡಗಳು, ಚಾಲಕರಿಗೆ ಸರಿಯಾದ ತರಬೇತಿ, ಸುಧಾರಿತ ವೈದ್ಯಕೀಯ ವ್ಯವಸ್ಥೆ ಮತ್ತು ಸಾರ್ವಜನಿಕರಿಗೆ ಇವುಗಳ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸುವುದು- ಇವುಗಳ ಕಡೆಗೆಸಾಕಷ್ಟುಗಮನಕೊಡಲಾಗುತ್ತಿದೆ.

ಮತ್ತೊಂದೆಡೆ,'ಸೇತುಭಾರತಂ' ಯೋಜನೆಯಡಿ ದೇಶದ ಎಲ್ಲ ರೈಲ್ವೆಲೆವೆಲ್ ಕ್ರಾಸಿಂಗ್ ಗಳಲ್ಲಿ ಮೇಲ್ಸೇತುವೆ ಅಥವಾ ಅಂಡರ್ ಪಾಸ್ ಗಳನ್ನು ನಿರ್ಮಾಣ ಮಾಡಲಾಗುವುದು. ಜತೆಗೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಎಲ್ಲ ಸೇತುವೆಗಳ ಗುಣಮಟ್ಟವನ್ನು ನಿರ್ಧರಿಸಲು ಈಗ ಒಂದು ವ್ಯವಸ್ಥೆಯನ್ನು ರೂಪಿಸಲಾಗಿದೆ.

ಇದರಿಂದಾಗಿ ಈ ಸೇತುವೆಗಳನ್ನು ಕಾಲಕ್ಕೆ ಸರಿಯಾಗಿ ದುರಸ್ತಿ ಮಾಡುವುದು, ಇಲ್ಲವೇ ಪುನರ್ನಿರ್ಮಾಣ ಸಾಧ್ಯವಾಗಲಿದೆ. ಮಿಕ್ಕ ಲೇಖನ ಇಲ್ಲಿ ಓದಿ

English summary
70 Years of Independence : The progress of a country is closely linked to the efficiency with which it transports its man and material. A good transport system aids economic growth by providing essential connectivity between available resources, centres of production and the market - Nitin Gadkari, Union Minister of Road Transport & Highways and Shipping, Govt of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X