ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

23,000 ಕೋಟಿ ವಂಚನೆ: ಎಬಿಜಿ ಶಿಪ್‌ಯಾರ್ಡ್‌ನ ಮೇಲಾಧಿಕಾರಿಗಳಿಗೆ ಸಿಬಿಐ ಲುಕ್‌ಔಟ್ ನೋಟಿಸ್

|
Google Oneindia Kannada News

ನವದೆಹಲಿ, ಫೆಬ್ರವರಿ 15: ದೇಶದಲ್ಲೇ ಮೊದಲ ಬಾರಿಗೆ 23,000 ಕೋಟಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಎಬಿಜಿ ಶಿಪ್‌ಯಾರ್ಡ್‌ನ ಮೇಲಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳಿಗೆ ಕೇಂದ್ರೀಯ ತನಿಖಾ ತಂಡ(ಸಿಬಿಐ)ದ ಅಧಿಕಾರಿಗಳು ಲುಕ್‌ಔಟ್ ನೋಟಿಸ್ ನೀಡಿದ್ದಾರೆ.

ದೇಶದ ಕಾನೂನು ಅಡಿಯಲ್ಲಿ ಅಧಿಕಾರಿಗಳಿಗೆ ಬೇಕಾಗಿರುವ ಯಾವುದೇ ವ್ಯಕ್ತಿಯು ವಿಮಾನ ನಿಲ್ದಾಣಗಳ ಮೂಲಕ ದೇಶದ ಗಡಿಯನ್ನು ದಾಟದಿರುವಂತೆ ನೋಡಿಕೊಳ್ಳುವುದಕ್ಕಾಗಿ ಈ ಲುಕ್‌ಔಟ್ ಸುತ್ತೋಲೆಯನ್ನು ಹೊರಡಿಸಲಾಗುತ್ತದೆ.

'ಭಾರತದತ್ತ ಬೊಟ್ಟು'; ಉದ್ಯಮಿ ಮೆಹುಲ್ ಚೋಕ್ಸಿ ಅಪಹರಣದ ಹಿಂದಿನ ಕೈ ಯಾವುದು?'ಭಾರತದತ್ತ ಬೊಟ್ಟು'; ಉದ್ಯಮಿ ಮೆಹುಲ್ ಚೋಕ್ಸಿ ಅಪಹರಣದ ಹಿಂದಿನ ಕೈ ಯಾವುದು?

ಎಬಿಜಿ ಶಿಪ್ಪಿಂಗ್ ಸಂಸ್ಥೆಯ ನಿರ್ದೇಶಕರಲ್ಲಿ ರಿಷಿ ಅಗರ್ವಾಲ್, ಸಂತಾನಂ ಮುತ್ತುಸ್ವಾಮಿ ಮತ್ತು ಅಶ್ವಿನಿ ಕುಮಾರ್ ಸೇರಿದ್ದಾರೆ. ಈ ಪ್ರಕರಣವು ಭಾರತದ ಅತಿದೊಡ್ಡ ಬ್ಯಾಂಕ್ ಸಾಲ ಹಗರಣ ಎಂದು ಹೇಳಲಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ 28 ಬ್ಯಾಂಕ್‌ಗಳಿಗೆ ನೀಡಬೇಕಾದ 22,842 ಕೋಟಿ ರೂಪಾಯಿ ಸಾಲವನ್ನು ಎಬಿಜಿ ಶಿಪ್‌ಯಾರ್ಡ್ ಮರುಪಾವತಿ ಮಾಡಿಲ್ಲ ಎಂದು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಅಥವಾ ಸಿಬಿಐ ಹೇಳಿದೆ.

Indias Biggest Bank Loan Scam; CBI issues Lookout circular senior executives of ABG Shipyard

ಹಡಗು ನಿರ್ಮಾಣ ಮತ್ತು ದುರಸ್ತಿ ಕಂಪನಿ:

ಎಬಿಜಿ ಶಿಪ್‌ಯಾರ್ಡ್ ಎಬಿಜಿ ಗ್ರೂಪ್‌ನ ಪ್ರಮುಖ ಕಂಪನಿಯಾಗಿದ್ದು, ಇದು ಹಡಗು ನಿರ್ಮಾಣ ಮತ್ತು ಹಡಗು ದುರಸ್ತಿಯಲ್ಲಿ ತೊಡಗಿಸಿಕೊಂಡಿದೆ. ಗುಜರಾತಿನ ದಹೇಜ್ ಮತ್ತು ಸೂರತ್‌ನಲ್ಲಿ ಹಡಗು ಕಟ್ಟೆಗಳಿವೆ. "ಕಳೆದ ಏಪ್ರಿಲ್ 2019 ರಿಂದ ಮಾರ್ಚ್ 2020ರ ನಡುವೆ ಎಬಿಜಿ ಶಿಪ್‌ಯಾರ್ಡ್‌ನ ಖಾತೆಗಳಿಂದ ವಂಚನೆ ಎಂದು ಒಕ್ಕೂಟದ ವಿವಿಧ ಬ್ಯಾಂಕ್‌ಗಳು ಘೋಷಿಸಿವೆ. ಎಬಿಜಿ ಶಿಪ್‌ಯಾರ್ಡ್‌ನಿಂದ ಅದರ ಸಂಬಂಧಿತ ಖಾತೆಗಳಿಗೆ ಭಾರಿ ಪ್ರಮಾಣದ ಹಣ ವರ್ಗಾವಣೆಯಾಗಿದ್ದು ಖಾತೆಯಲ್ಲಿ ನಮೂದಾಗಿದೆ," ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ.

ಮದ್ಯದ ದೊರೆ ವಿಜಯ್ ಮಲ್ಯ ದಿವಾಳಿ ಎಂದ ಯುಕೆ ಕೋರ್ಟ್! ಮದ್ಯದ ದೊರೆ ವಿಜಯ್ ಮಲ್ಯ ದಿವಾಳಿ ಎಂದ ಯುಕೆ ಕೋರ್ಟ್!

ಬ್ಯಾಂಕ್ ಸಾಲದ ಹಣ ಬೇರೆಡೆ ವರ್ಗಾವಣೆ:

"ಬ್ಯಾಂಕ್ ಸಾಲಗಳನ್ನು ಬೇರೆಡೆಗೆ ವರ್ಗಾಯಿಸುವುದರ ಮೂಲಕ ಸಾಗರೋತ್ತರ ಅಂಗಸಂಸ್ಥೆಯಲ್ಲಿ ಬೃಹತ್ ಹೂಡಿಕೆಗಳನ್ನು ಮಾಡಲಾಗಿದೆ. ಅದರ ಸಂಬಂಧಿತ ಪಕ್ಷಗಳ ಹೆಸರಿನಲ್ಲಿ ಬೃಹತ್ ಆಸ್ತಿಗಳನ್ನು ಖರೀದಿಸಲು ಹಣವನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. 2005-2012ರ ಆರಂಭಿದ ಅವಧಿಯ ದಾಖಲೆಗಳ ಪರಿಶೀಲನೆ ಮತ್ತು ಆರಂಭಿಕ ತನಿಖೆಯ ಸಮಯದಲ್ಲಿ ನಿರ್ಣಾಯಕ ಎಂದು ಕಂಡುಬಂದಿದೆ.

ಎಬಿಜಿ ಶಿಪ್‌ಯಾರ್ಡ್ ಪ್ರಕರಣದ ಇತ್ತೀಚಿನ ಲುಕ್‌ಔಟ್ ಸುತ್ತೋಲೆಯು ಉದ್ಯಮಿ ನೀರವ್ ಮೋದಿ ಮತ್ತು ಅವರ ಚಿಕ್ಕಪ್ಪ ಮೆಹುಲ್ ಚೋಕ್ಸಿ ಒಳಗೊಂಡ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆಯಿಂದ ಹಿಡಿದು ನಿಷ್ಕ್ರಿಯಗೊಂಡ ಕಿಂಗ್‌ಫಿಶರ್ ಏರ್‌ಲೈನ್ಸ್ ಮುಖ್ಯಸ್ಥ ವಿಜಯ್ ಮಲ್ಯ ಅವರ ಬ್ಯಾಂಕ್ ಸಾಲದ ಬಾಕಿ ಪಾವತಿ ಪ್ರಕರಣಗಳ ಪಟ್ಟಿ ಬೆಳೆಯುತ್ತದೆ.

English summary
India's Biggest Bank Loan Scam; CBI issues Lookout circular against the bosses and senior executives of ABG Shipyard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X