ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಅತಿ ಕಲುಶಿತ 30 ನಗರಗಳ ಪಟ್ಟಿಯಲ್ಲಿ ಭಾರತದ 21 ನಗರಗಳು

|
Google Oneindia Kannada News

ನವದೆಹಲಿ, ಫೆಬ್ರವರಿ 25: ವಿಶ್ವವು ಹವಾಮಾನ ಬದಲಾವಣೆ ವಿರುದ್ಧ ಸಮರ ಸಾರಿದೆ. ಈ ನಿಟ್ಟಿನಲ್ಲಿ ವಿಶ್ವದಲ್ಲಿ ಅತ್ಯಂತ ಹೆಚ್ಚು ವಾಯುಮಾಲಿನ್ಯ ಹೊಂದಿರುವ 30 ನಗರಗಳನ್ನು ಪಟ್ಟಿ ಮಾಡಲಾಗಿದೆ. ಅವಮಾನಕರವೆಂದರೆ ಆ ಪಟ್ಟಿಯಲ್ಲಿರುವ 21 ನಗರಗಳು ಭಾರತದ ನಗರಗಳೇ ಆಗಿವೆ.

ವಿಶ್ವ ವಾಯು ಗುಣಮಟ್ಟ ವರದಿಯನ್ನು ಐಕ್ಯು ಏರ್ ಏರ್‌ ವಿಶುಯಲ್ ತಯಾರಿಸಿದ್ದು, ಅತ್ಯಂತ ಕೆಟ್ಟ ವಾಯು ಗುಣಮಟ್ಟ ಹೊಂದಿರುವ ಮೂವತ್ತು ನಗರಗಳನ್ನು ಪಟ್ಟಿ ಮಾಡಿದೆ. ಈ ಪಟ್ಟಿಯಲ್ಲಿ 21 ನಗರಗಳು ಭಾರತದ್ದವೇ ಆಗಿವೆ.

ನವದೆಹಲಿ ಬಳಿ ಇರುವ ಗಾಜಿಯಾಬಾದ್ ವಿಶ್ವದ ಅತ್ಯಂತ ಕಲುಶಿತ ವಾಯು ಸ್ಥಿತಿ ಹೊಂದಿರುವ ನಗರವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಪಡಿಸಿರುವ ವಾಯು ಗುಣಮಟ್ಟದ ಸೂಚ್ಯಂಕಕ್ಕಿಂತ ಹತ್ತು ಪಟ್ಟು ಹೆಚ್ಚು ಕಲುಶಿತ ಗಾಳಿ ಗಾಜಿಯಾಬಾದ್‌ನಲ್ಲಿದೆಯಂತೆ.

Indias 21 Cities Were Most Air Poluted Cities In The World

ದಕ್ಷಿಣ ಏಷ್ಯಾ ರಾಷ್ಟ್ರಗಳ ನಗರಗಳೇ ಈ ಪಟ್ಟಿಯಲ್ಲಿ ಹೆಚ್ಚಿವೆ. 30 ನಗರಗಳ ಪಟ್ಟಿಯಲ್ಲಿ 27 ನಗರಗಳು ದಕ್ಷಿಣ ಏಷ್ಯಾದ ರಾಷ್ಟ್ರಗಳದ್ದೇ ಆಗಿವೆ. ಚೀನಾ, ಬಾಂಗ್ಲಾದೇಶ, ಪಾಕಿಸ್ತಾನಗಳ ನಗರಗಳು ಭಾರತದ ಕಲುಶಿತ ವಾಯು ಗುಣಮಟ್ಟ ಹೊಂದಿದ ನಗರಗಳಿಗೆ ಸೆಡ್ಡು ಹೊಡೆಯುತ್ತಿವೆ.

ರಾಷ್ಟ್ರವಾರು ಅಂಕಿ-ಅಂಶ ದ ಪ್ರಕಾರ ಭಾರತ ಅಲ್ಪ ಸಮಾಧಾನ ಪಟ್ಟುಕೊಳ್ಳಬಹುದಾಗಿದೆ. ಅತ್ಯಂತ ಕೆಟ್ಟ ವಾಯು ಗುಣಮಟ್ಟ ಹೊಂದಿದ ರಾಷ್ಟ್ರ ಎಂಬ ಅಗ್ಗಳಿಕೆ ನೆರೆಯ ಬಾಂಗ್ಲಾದೇಶಕ್ಕೆ ಹೋಗಿದೆ. ನಂತರ ಸ್ಥಾನ ಪಾಕಿಸ್ತಾನಕ್ಕೆ, ಆ ನಂತರದ್ದು ಮಂಗೋಲಿಯಾಕ್ಕೆ, ನಾಲ್ಕನೇ ಸ್ಥಾನ ಅಫ್ಗಾನಿಸ್ತಾನದ್ದಾಗಿದ್ದರೆ, ಭಾರತ ಐದನೇ ಸ್ಥಾನದಲ್ಲಿದೆ.

ಚೀನಾ ಪರಿಣಾಮಕಾರಿಯಾಗಿ ವಾಯು ಮಾಲಿನ್ಯವನ್ನು ತಹಬದಿಗೆ ತೆಗೆದುಕೊಂಡು ಬರುತ್ತಿದೆ ಎಂದು ವರದಿ ಹೇಳುತ್ತಿದೆ. ಕಠಿಣ ಕಾನೂನುಗಳನ್ನು ಜಾರಿಗೆ ತಂದು ಚೀನಾದಲ್ಲಿ ವಾಯು ಮಾಲಿನ್ಯವನ್ನು ತಹಬದಿಗೆ ತರುವ ಪ್ರಯತ್ನಗಳನ್ನು ಅಲ್ಲಿನ ಸರ್ಕಾರ ಮಾಡಿತ್ತು, ಅದು ಯಶಸ್ವಿಯಾಗಿದೆ.

English summary
India's 21 cities were listed in 30 top most worst air quality cities of the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X