ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ ಶಿಕ್ಷಣ ನೀತಿ-2020 ಮತ್ತು ಆರ್ ಎಸ್ಎಸ್: ಎಲ್ಲಿಂದೆಲ್ಲಿ ನಂಟು?

|
Google Oneindia Kannada News

ನವದೆಹಲಿ, ಜುಲೈ.31: ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅನುಮೋದನೆ ನೀಡಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020 ಭಾರತದ ಇತಿಹಾಸದಲ್ಲೇ ಹೊಸ ತಿರುವುದು ಎಂಬ ಶ್ಲಾಘನೆ ವ್ಯಕ್ತವಾಗುತ್ತಿದೆ.

ಕೇಂದ್ರ ಸರ್ಕಾರವು ಹೊಸ ಶಿಕ್ಷಣ ನೀತಿ ಮತ್ತು ವಿದ್ಯಾರ್ಥಿಗಳು ಯಾವ ನಿಟ್ಟಿನಲ್ಲಿ ವಿದ್ಯಾಭ್ಯಾಸ ಮಾಡಬೇಕು ಎನ್ನುವುದನ್ನು ನಿರ್ಧರಿಸಲು ಜಾರಿಗೊಳಿಸಿದ ನೂತನ ಶಿಕ್ಷಣ ನೀತಿಯು ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಎನಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಿಗ್ವಿಜಯ ಎನ್ನಲಾಗುತ್ತಿದೆ.

ರಾಷ್ಟ್ರೀಯ ಶಿಕ್ಷಣ ನೀತಿ-2020 ಮತ್ತು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶರಾಷ್ಟ್ರೀಯ ಶಿಕ್ಷಣ ನೀತಿ-2020 ಮತ್ತು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶ

ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿರುವ ನೂತನ ಶಿಕ್ಷಣ ನೀತಿಯಲ್ಲಿ ಆರ್ಎಸ್ಎಸ್ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಲಾಗುತ್ತಿದೆ. ಮೋದಿ ಸರ್ಕಾರದ ಆಡಳಿತದ ಏಳನೇ ವರ್ಷ ಭಾರತದ ಶಿಕ್ಷಣ ನೀತಿ ಬದಲಾಯಿಸಿದೆ. ಶಿಕ್ಷಣವವನ್ನು ನಡುವಳಿಕೆ ಮತ್ತು ರಾಷ್ಟ್ರ ನಿರ್ಮಾಣದ ಪ್ರಮುಖ ಸಾಧನವಾಗಿ ಬದಲಾಯಿಸಲು ಬಳಸಿಕೊಳ್ಳಲಾಗುತ್ತಿದೆ.

ಶಿಕ್ಷಣ ನೀತಿ ಹಿಂದೆ ಆರ್ಎಸ್ಎಸ್ ಸಲಹೆ-ಸೂಚನೆ?

ಶಿಕ್ಷಣ ನೀತಿ ಹಿಂದೆ ಆರ್ಎಸ್ಎಸ್ ಸಲಹೆ-ಸೂಚನೆ?

ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ಬಿಜೆಪಿ ಮತ್ತು ಆರ್ಎಸ್ಎಸ್ ನಾಯಕರು ಪ್ರಬಲವಾಗಿ ಬೆಂಬಲಿಸುತ್ತಿದ್ದು, ಸ್ವಾಗತಿಸುತ್ತಿದ್ದಾರೆ. ಏಕೆಂದರೆ ಈ ಹಿಂದೆ ಶಿಕ್ಷಣದ ಬಗ್ಗೆ ಆರ್ಎಸ್ಎಸ್ ನೀಡಿದ ಎಲ್ಲಾ ರೀತಿಯ ಸಲಹೆ ಸೂಚನೆಗಳನ್ನು ಅಂತಿಮ ಆವೃತ್ತಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಆದಾಗ್ಯೂ, ಸಂಘದಲ್ಲಿನ ತನ್ನ ಅಂಗಸಂಸ್ಥೆಗಳಿಂದ ಕೆಲವು ಸಲಹೆಗಳನ್ನು ಕೈ ಬಿಡಲು ಬಿಜೆಪಿ ಪಟ್ಟು ಹಿಡಿದಿದೆ ಎಂದು ಹೇಳಲಾಗುತ್ತಿದೆ.

ಶಿಕ್ಷಣದಲ್ಲಿ ಆರ್ಎಸ್ಎಸ್ ಸಲಹೆಯಂತೆ 2 ವಿಷಯ ಸೇರ್ಪಡೆ

ಶಿಕ್ಷಣದಲ್ಲಿ ಆರ್ಎಸ್ಎಸ್ ಸಲಹೆಯಂತೆ 2 ವಿಷಯ ಸೇರ್ಪಡೆ

ಭಾರತದ ಶಿಕ್ಷಣ ವ್ಯವಸ್ಥೆಯ ಮಾನವ ಸಂಪನ್ಮೂಲ ಅಭಿವೃದ್ಧಿಯು ಸರ್ವಶಿಕ್ಷಣ ಅಭಿಯಾನದಂತಹ ಕಾರ್ಯಕ್ರಮಗಳನ್ನು ಮತ್ತು ಎಲ್ಲರಿಗೂ ಶಿಕ್ಷಣವನ್ನು ಮೂಲಭೂತ ಹಕ್ಕಿನಂತೆ ನೀಡಲು ಪ್ರೇರೇಪಿಸುತ್ತದೆ. ಆರ್‌ಎಸ್‌ಎಸ್ ಸಲಹೆ ನೀಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯು ಭಾರತೀಯ ರಾಷ್ಟ್ರೀಯ ಮೌಲ್ಯಗಳು ಮತ್ತು ವರ್ತನೆಯ ಬಗ್ಗೆ ಜ್ಞಾನ ಮೂಡಿಸುವ ಎರಡು ವಿಷಯಗಳನ್ನು ಸೇರಿಸಲು ಪ್ರಾಯೋಗಿಕವಾಗಿ ಒಪ್ಪಿಕೊಂಡಿದೆ. ಸಚಿವಾಲಯ, ಶಿಕ್ಷಣ ತಜ್ಞರು ಮತ್ತು ಸಂಸ್ಥೆಗಳೊಂದಿಗೆ ಸಂವಹನ ನಡೆಸುವ ಸಂಸ್ಥೆಗಳ ಮೂಲಕ ಆರ್‌ಎಸ್‌ಎಸ್ ತನ್ನೆಲ್ಲ ಸಲಹೆ-ಸೂಚನೆಗಳನ್ನು ನೀಡಿದೆ. ದೇಶಾದ್ಯಂತ 40 ಸೆಮಿನಾರ್ ಮತ್ತು 6000 ಶಿಕ್ಷಣ ತಜ್ಞರ ಸಂಸ್ಥೆಯ ಮಾಲೀಕರು ಮತ್ತು ಭಾರತೀಯ ಶಿಕ್ಷಣ ಮಂಡಲ (ಬಿಎಸ್ಎಂ), ಶಿಕ್ಷಾ ಸಂಸ್ಕೃತ ಉತ್ತನ ನ್ಯಾಸ್ (ಎಸ್‌ಎಸ್‌ಯುಎನ್) ಭಾರತೀಯ ಭಾಷಾ ಮಂಚ್ ಮೂಲಕ ಅಭಿಪ್ರಾಯ ಸಂಗ್ರಹಿಸಲಾಗಿತ್ತು.

34 ವರ್ಷಗಳ ನಂತರ 21ನೇ ಶತಮಾನಕ್ಕಾಗಿ ಹೊಸ ಶಿಕ್ಷಣ ನೀತಿ34 ವರ್ಷಗಳ ನಂತರ 21ನೇ ಶತಮಾನಕ್ಕಾಗಿ ಹೊಸ ಶಿಕ್ಷಣ ನೀತಿ

ಆರ್ಎಸ್ಎಸ್ ಜೊತೆ ಸಭೆ ನಡೆಸಿದ್ದರಾ ಶಿಕ್ಷಣ ಸಚಿವರು?

ಆರ್ಎಸ್ಎಸ್ ಜೊತೆ ಸಭೆ ನಡೆಸಿದ್ದರಾ ಶಿಕ್ಷಣ ಸಚಿವರು?

ಹಾಲಿ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಕ್ರಿಯಾಲ್ ಮತ್ತು ಮತ್ತೊಬ್ಬ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಬಿಜೆಪಿ ಆಡಳಿತದ ರಾಜ್ಯಗಳ ಆರ್‌ಎಸ್‌ಎಸ್ ಕಾರ್ಯಕರ್ತರು ಮತ್ತು ಶಿಕ್ಷಣ ಸಚಿವರ ಜೊತೆಗೆ ನಿಯಮಿತವಾಗಿ ಸಭೆ ನಡೆಸಿದ್ದರು ಎನ್ನಲಾಗಿದೆ. ತದನಂತರ ಸಂಘ ಅಂಗಸಂಸ್ಥೆಗಳು ತಮ್ಮ ಸಲಹೆಗಳನ್ನು ಸುಬ್ರಮಣ್ಯಂ ಮತ್ತು ಕೆ.ಕಸ್ತುರಿ ರಂಗನ್ ನೇತೃತ್ವದಲ್ಲಿ ಎರಡು ಎನ್‌ಇಪಿ ಕರಡು ಸಮಿತಿಗಳಿಗೆ ಸಲ್ಲಿಸಿದವು ಎಂದು ಹೇಳಲಾಗುತ್ತಿದೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಇರಿಸಿದ ಹೆಸರು ಬದಲಾವಣೆ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಇರಿಸಿದ ಹೆಸರು ಬದಲಾವಣೆ

ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ ಹೆಸರನ್ನು ಬದಲಾಯಿಸಲಾಗಿದೆ. ರಷ್ಯಾದಲ್ಲಿ ಶಿಕ್ಷಣ ಸಚಿವಾಲಯದ ಹೆಸರಿನಿಂದ ಪ್ರೇರೇಪಿತಗೊಂಡು ದೇಶದಲ್ಲಿ ಶಿಕ್ಷಣ ಸಚಿವಾಲಯಕ್ಕೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಎಂದು ನಾಮಕರಣ ಮಾಡಿದ್ದರು. ಅದನ್ನು, ಪ್ರಧಾನಿ ಮೋದಿ ಸರ್ಕಾರವು ಮತ್ತೆ ಶಿಕ್ಷಣ ಸಚಿವಾಲಯ ಎಂದು ಮರುನಾಮಕರಣಗೊಳಿಸಿದೆ. ಈ ಹಿಂದೆ ಸಚಿವಾಲಯದ ಮರುನಾಮಕರಣದ ವಿಷಯ 2018ರಲ್ಲಿ ನಡೆದ ಭಾರತೀಯ ಶಿಕ್ಷಣ ಮಂಡಳಿ ಅಥವಾ ಬಿಎಸ್ಎಂ ಸಮ್ಮೇಳನದಲ್ಲಿ ಪ್ರಮುಖವಾಗಿ ಚರ್ಚೆಯಾಯಿತು. ಸಮ್ಮೇಳನದಲ್ಲಿ, ಸ್ವತಃ ಸ್ಪೀಕರ್ ಅವರು ಸಚಿವಾಲಯದ ಹೆಸರು ಬದಲಾಯಿಸಲು ಒತ್ತಾಯಿಸಿದ್ದರು.

ಮಾತೃಭಾಷೆಗೆ ನೀಡಿರುವ ಆದ್ಯತೆ ಹಿಂದೆ ಆರ್ಎಸ್ಎಸ್

ಮಾತೃಭಾಷೆಗೆ ನೀಡಿರುವ ಆದ್ಯತೆ ಹಿಂದೆ ಆರ್ಎಸ್ಎಸ್

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020ರಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲೇ ನೀಡುವುದನ್ನು ಕಡ್ಡಾಯಗೊಳಿಸಿರುವುದರ ಹಿಂದೆ ಆರ್ಎಸ್ಎಸ್ ಸಲಹೆಯನ್ನೇ ಪ್ರಮುಖವಾಗಿ ಪರಿಗಣಿಸಲಾಗಿದೆ ಎಂದು ಹೇಳಲಾಗುತ್ತಿದೆ. ಶಿಕ್ಷಾ ಸಂಸ್ಕೃತ ಉತ್ತನ ನ್ಯಾಸ್ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಆರ್‌ಎಸ್‌ಎಸ್ ಪ್ರಚಾರಕ ಅತುಲ್ ಕೊಥಾರಿ ಪ್ರಕಾರ, ಇನ್ನೊಂದು ಶಿಕ್ಷಣ ವ್ಯವಸ್ಥೆಯಲ್ಲಿ ಭಾರತೀಯ ಮತ್ತು ರಾಷ್ಟ್ರೀಯ ಮೌಲ್ಯಗಳನ್ನು ತಳಪಾಯವಾಗಿ ಸೇರಿಸುವುದು ಆಗಿದೆ. "1984 ರಲ್ಲಿ ರಚಿಸಲಾದ ಎನ್ಇಪಿ ಪ್ರಮುಖವಾಗಿ ಭಾರತೀಯ ಮೌಲ್ಯಗಳೊಂದಿಗೆ ಹೊಂದಾಣಿಕೆ ಆಗಿರಲಿಲ್ಲ. ರಾಷ್ಟ್ರೀಯ ಮೌಲ್ಯಗಳು ಪಠ್ಯಕ್ರಮದ ಭಾಗವಾಗಿರಲಿಲ್ಲ ಮತ್ತು ಅವುಗಳನ್ನು ಕೇವಲ ಪಠ್ಯೇತರ ಅಂಶವಾಗಿ ನೀಡಲಾಯಿತು. ಅದೀಗ ಬದಲಾಗಲಿದೆ. ಎನ್‌ಇಪಿ-2020ರಲ್ಲಿ ಭಾರತೀಯ ಮೌಲ್ಯಗಳು, ಕಲೆಗಳು, ಭಾಷೆಗಳು ಮತ್ತು ಸಂಸ್ಕೃತಿ ಮುಖ್ಯವಾಹಿನಿಯಾಗಲಿದೆ "ಎಂದು ಅತುಲ್ ಕೊಠಾರಿ ತಿಳಿಸಿದ್ದಾರೆ.

ಶಿಕ್ಷಣ ಯಶಸ್ವಿಯಾಗಬೇಕಿದ್ದಲ್ಲಿ ನೈತಿಕ ಮೌಲ್ಯಗಳು ಮುಖ್ಯ

ಶಿಕ್ಷಣ ಯಶಸ್ವಿಯಾಗಬೇಕಿದ್ದಲ್ಲಿ ನೈತಿಕ ಮೌಲ್ಯಗಳು ಮುಖ್ಯ

"ಯಾವುದೇ ಶಿಕ್ಷಣ ವ್ಯವಸ್ಥೆಯು ನೈತಿಕ ಮೌಲ್ಯಗಳಿಲ್ಲದೆ ಯಶಸ್ವಿಯಾಗಲು ಸಾಧ್ಯವಿಲ್ಲ. ಹೊಸ ನೀತಿಯನ್ನು ಭಾರತಕ್ಕೆ ಅಂತರ್ಗತವಾಗಿರುವ ನೈತಿಕ ಮೌಲ್ಯಗಳ ಮೇಲೆ ರಚಿಸಲಾಗಿದೆ. ಪ್ರಾಚೀನ ಗ್ರಂಥಗಳು ಮತ್ತು ಸಾಂಸ್ಕೃತಿಕ ಆಚರಣೆಗಳಿಂದ ಎರವಲು ಪಡೆಯಲಾಗಿದೆ. ಇದೀಗ ಶಿಕ್ಷಣ ವ್ಯವಸ್ಥೆಯ ಮೂಲಕ ವಿದ್ಯಾರ್ಥಿಗಳಿಗೆ ಮೂಲಭೂತ ಹಕ್ಕುಗಳ ಜೊತೆ ಮೂಲಭೂತ ಕರ್ತವ್ಯಗಳನ್ನು ಕಲಿಸಲಾಗುತ್ತದೆ ಎಂದು ಕೊಠಾರಿ ಹೇಳಿದ್ದಾರೆ.

ಮಾನವಸಂಪನ್ಮೂಲ ಸಚಿವಾಲಯ(HRD)ದ ಹೆಸರು ಬದಲಾಯಿಸಿದ ಕೇಂದ್ರ ಸರ್ಕಾರಮಾನವಸಂಪನ್ಮೂಲ ಸಚಿವಾಲಯ(HRD)ದ ಹೆಸರು ಬದಲಾಯಿಸಿದ ಕೇಂದ್ರ ಸರ್ಕಾರ

ದೇಶೀಯ ಜ್ಞಾನ ವ್ಯವಸ್ಥೆಯ ಸೇರ್ಪಡೆ

ದೇಶೀಯ ಜ್ಞಾನ ವ್ಯವಸ್ಥೆಯ ಸೇರ್ಪಡೆ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಮತ್ತೊಂದು ದೊಡ್ಡ ಸೇರ್ಪಡೆ ಎಂದರೆ ಅದು ಭಾರತೀಯ ಜ್ಞಾನ ವ್ಯವಸ್ಥೆ. ಈ ಹಿಂದಿನ ಶಿಕ್ಷಣ ನೀತಿಯಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದರ ಹಿಂದೆ ಪಿತೂರಿ ಅಡಗಿತ್ತು ಎಂದು ಆರ್‌ಎಸ್‌ಎಸ್ ಹಿರಿಯರು ಆರೋಪಿಸಿದ್ದಾರೆ. ಕೊಥಾರಿ ಮತ್ತು ಇತರೆ ಆರ್‌ಎಸ್‌ಎಸ್ ಕಾರ್ಯಕರ್ತರು ಹೇಳುವಂತೆ ಕ್ರಿಶ್ಚಿಯನ್ ಮಿಷನ್ ಮತ್ತು ಮದರಸಾಗಳಂತಾ ಅಲ್ಪಸಂಖ್ಯಾತ ಸಂಸ್ಥೆಗಳು ನಡೆಸುವ ಶಾಲೆಗಳು ಹೊಸ ಶಿಕ್ಷಣ ನೀತಿಯನ್ನು ಒಪ್ಪಿಕೊಳ್ಳಬೇಕಿದೆ. ಏಕೆಂದರೆ ಇದರ ಹಿಂದೆ ಭವಿಷ್ಯದಲ್ಲಿ ಉದ್ಯೋಗಾಭಿವೃದ್ಧಿಗೆ ಹೊಂದಿಕೊಳ್ಳುವ ಮತ್ತು ಹೆಚ್ಚು ಸೂಕ್ತವಾದ ಸಮಗ್ರ ಬೋಧನಾ ವ್ಯವಸ್ಥೆ ರಚಿಸುವ ಆಲೋಚನೆಯಿದೆ. ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಎಡ ಸಿದ್ಧಾಂತದಿಂದ ಹೇರಲ್ಪಟ್ಟ ಕೆಲವು ಮೂಲಭೂತ ಅಂಶಗಳನ್ನು ಈ ನೀತಿಯು ತಟಸ್ಥಗೊಳಿಸುತ್ತದೆ ಎಂದು ಅವರು ಹೇಳುತ್ತಾರೆ.

ವಿವಿಧ ಹಂತಗಳಲ್ಲಿ ಪಠ್ಯಕ್ರಮದ ಮೇಲೆ ಆರ್ಎಸ್ಎಸ್ ಕಣ್ಣು

ವಿವಿಧ ಹಂತಗಳಲ್ಲಿ ಪಠ್ಯಕ್ರಮದ ಮೇಲೆ ಆರ್ಎಸ್ಎಸ್ ಕಣ್ಣು

ಸಂಘ ಮತ್ತು ಅದರ ಅಂಗಸಂಸ್ಥೆಗಳ ಮುಂದಿನ ಗುರಿ ಶಿಕ್ಷಣದ ವಿವಿಧ ಹಂತಗಳಲ್ಲಿನ ಪಠ್ಯಕ್ರಮವಾಗಿದೆ. ಪರಿವಾರದ ಅನೇಕ ಸಂಸ್ಥೆಗಳು ದೇಶದ ಶಿಕ್ಷಣ ಕ್ಷೇತ್ರದಲ್ಲಿ ಯಾವ ರೀತಿಯ ಅಂಶಗಳನ್ನು ಸೇರ್ಪಡೆಗೊಳಿಸಬೇಕು ಮತ್ತು ಯಾವ ಅಂಶಗಳನ್ನು ತೆಗೆದು ಹಾಕಬೇಕು ಎನ್ನುವುದರ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ ಎನ್ನಲಾಗಿದೆ. "ನಾವು ಎನ್‌ಇಪಿಗೆ ಸಂಬಂಧಿಸಿದ ಸಲಹೆಗಳ ಪಟ್ಟಿಯನ್ನು ನೀಡಿದ್ದೇವೆ. ಇದೀಗ ಪಠ್ಯಕ್ರಮದಲ್ಲಿನ ಬದಲಾವಣೆ ಕುರಿತು ಸಲಹೆಗಳನ್ನು ನೀಡುತ್ತೇವೆ. ಅದು ಈ ಎನ್‌ಇಪಿ-2020ರ ಸೂಕ್ತ ಅನುಷ್ಠಾನಕ್ಕೆ ಕಾರಣವಾಗುತ್ತದೆ" ಎಂದು ಕೊಠಾರಿ ಹೇಳುತ್ತಾರೆ.

ಎನ್ಇಪಿ-2020ರಲ್ಲಿ ಆರ್ ಎಸ್ಎಸ್ ಮುಖ್ಯಸ್ಥರ ಹೇಳಿಕೆಯ ಅಂಶ

ಎನ್ಇಪಿ-2020ರಲ್ಲಿ ಆರ್ ಎಸ್ಎಸ್ ಮುಖ್ಯಸ್ಥರ ಹೇಳಿಕೆಯ ಅಂಶ

ಭಾರತದ ಪೌರತ್ವದ ಬಗ್ಗೆ ಆಳವಾದ ಹೆಮ್ಮೆಯನ್ನು ಹುಟ್ಟು ಹಾಕುವಂತಾ ಬುದ್ಧಿಶಕ್ತಿ ಮತ್ತು ಕಾರ್ಯ ನೀತಿ ರೂಪಿಸಿದ್ದಕ್ಕಿ ಎನ್ಇಪಿ ಬಗ್ಗೆ ಆರ್ಎಸ್ಎಸ್ ಸಂತೋಷ ವ್ಯಕ್ತಪಡಿಸಿತ್ತು. ಅಲ್ಲದೇ ಎನ್‌ಇಪಿ ವ್ಯಕ್ತಿಗಳನ್ನು ಸ್ವಾಭಿಮಾನಿ, ಸ್ವಾವಲಂಬಿ ಮತ್ತು ಸ್ವತಂತ್ರರನ್ನಾಗಿ ಮಾಡಬೇಕು ಮತ್ತು ದೇಶದ ನೀತಿಗಳು ಮತ್ತು ಸಂಸ್ಕೃತಿಯಲ್ಲಿ ಬೇರೂರುವಂತೆ ಮಾಡುತ್ತೆ ಎಂದು ಮೋಹನ್ ಭಾಗವತ್ ತಿಳಿಸಿದ್ದರು. ಕಳೆದ ಆಗಸ್ಟ್ ತಿಂಗಳಿನಲ್ಲಿ ಆರ್ಎಸ್ಎಸ್ ಮುಖ್ಯಸ್ಥರು ಹೇಳಿದ ಈ ಅಂಶಗಳೇ ಎನ್ಇಪಿಯಲ್ಲಿ ಉಲ್ಲೇಖವಾಗಿವೆ ಎಂದು ಹೇಳಲಾಗುತ್ತಿದೆ.

ರಾಷ್ಟ್ರೀಯ ಶಿಕ್ಷಣ ನೀತಿ-2020 ಮುಖ್ಯಾಂಶಗಳು

ರಾಷ್ಟ್ರೀಯ ಶಿಕ್ಷಣ ನೀತಿ-2020 ಮುಖ್ಯಾಂಶಗಳು

1. 10 + 2 ಬೋರ್ಡ್ ರಚನೆಯನ್ನು ಕೈಬಿಡಲಾಗಿದೆ

2. ಹೊಸ ಶಾಲೆಯ ರಚನೆಯು 5 + 3 + 3 + 4 ಆಗಿರುತ್ತದೆ

3. 5 ಪೂರ್ವ ಶಾಲೆ, 6 ರಿಂದ 8 ಮಧ್ಯಮ ಶಾಲೆ, 8 ರಿಂದ 11 ಪ್ರೌಢಶಾಲೆ, 12 ರಿಂದ ಪದವಿ

4. ಯಾವುದೇ ಪದವಿ 4 ವರ್ಷಗಳು

5. 6ನೇ ತರಗತಿಯ ನಂತರ ವೃತ್ತಿಪರ ಶಿಕ್ಷಣ ಲಭ್ಯವಿದೆ

6. 8ರಿಂದ 11 ರವರೆಗೆ ವಿದ್ಯಾರ್ಥಿಗಳು ವಿಷಯಗಳನ್ನು ಆಯ್ಕೆ ಮಾಡಬಹುದು

7. ಎಲ್ಲಾ ಪದವಿ ಕೋರ್ಸ್ ಪ್ರಮುಖ ಮತ್ತು ಚಿಕ್ಕದಾಗಿರುತ್ತದೆ

ಉದಾಹರಣೆ - ವಿಜ್ಞಾನ ವಿದ್ಯಾರ್ಥಿಯು ಭೌತಶಾಸ್ತ್ರವನ್ನು ಮೇಜರ್ ಮತ್ತು ಸಂಗೀತವನ್ನು ಚಿಕ್ಕದಾಗಿ ಹೊಂದಬಹುದು. ಅವರು ಆಯ್ಕೆ ಮಾಡಬಹುದಾದ ಯಾವುದೇ ಸಂಯೋಜನೆ

8. ಎಲ್ಲಾ ಉನ್ನತ ಶಿಕ್ಷಣವನ್ನು ಕೇವಲ ಒಂದು ಪ್ರಾಧಿಕಾರದಿಂದ ನಿಯಂತ್ರಿಸಲಾಗುತ್ತದೆ.

9. ಯುಜಿಸಿ, ಎಐಸಿಟಿಇ ವಿಲೀನಗೊಳ್ಳುತ್ತದೆ.

10. ಎಲ್ಲಾ ವಿಶ್ವವಿದ್ಯಾಲಯ ಸರ್ಕಾರ, ಖಾಸಗಿ, ಮುಕ್ತ, ವೃತ್ತಿಪರ ಇತ್ಯಾದಿಗಳಿಗೆ ಒಂದೇ ಶ್ರೇಣಿ ಮತ್ತು ಇತರ ನಿಯಮಗಳಿವೆ

11. ದೇಶದ ಎಲ್ಲಾ ರೀತಿಯ ಶಿಕ್ಷಕರಿಗೆ ಹೊಸ ಶಿಕ್ಷಕರ ತರಬೇತಿ ಮಂಡಳಿಯನ್ನು ಸ್ಥಾಪಿಸಲಾಗುವುದು, ಯಾವುದೇ ರಾಜ್ಯವು ಬದಲಾಗುವುದಿಲ್ಲ

12. ಯಾವುದೇ ಕಾಲೇಜ್ ಗಳು ಮಾನ್ಯತೆ ಮತ್ತು ಅದರ ರೇಟಿಂಗ್ ಆಧರಿಸಿ ಸ್ವಾಯತ್ತ ಹಕ್ಕು ಹಾಗೂ ಅನುದಾನ ಪಡೆಯುತ್ತವೆ

13. ಪೋಷಕರು ಮನೆಯಲ್ಲಿ 3 ವರ್ಷಗಳವರೆಗೆ ಮತ್ತು ಶಾಲಾಪೂರ್ವ 3 ರಿಂದ 6 ರವರೆಗೆ ಮಕ್ಕಳಿಗೆ ಕಲಿಸಲು ಹೊಸ ಕಲಿಕಾ ಕಾರ್ಯಕ್ರಮ ಸರ್ಕಾರ ರಚಿಸುತ್ತದೆ

14. ಯಾವುದೇ ಕೋರ್ಸ್ ‌ನಿಂದ ಬಹು ಪ್ರವೇಶ ಮತ್ತು ನಿರ್ಗಮನ

15. ಪ್ರತಿ ವರ್ಷ ಪದವಿ ವಿದ್ಯಾರ್ಥಿಗಳಿಗೆ ಸಾಲಸೌಲಭ್ಯ ನೀಡುವ ವ್ಯವಸ್ಥೆಯಿರುತ್ತದೆ. ವಿದ್ಯಾರ್ಥಿಯು ಕೋರ್ಸ್ ಅರ್ಧಕ್ಕೆ ಬಿಟ್ಟು ಮತ್ತೆ ಮುಂದುವರಿಸಲು ಬಂದಲ್ಲಿ ಅಂಥವರಿಗ ಶಿಕ್ಷಣ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ

16. ಎಲ್ಲಾ ಶಾಲೆಗಳಲ್ಲಿ ಪರೀಕ್ಷೆಗಳು ಸಮಿಸ್ಟರ್ ಆಧಾರದಲ್ಲಿ ವರ್ಷಕ್ಕೆ ಎರಡು ಬಾರಿ ನಡೆಯುತ್ತವೆ

17. ಯಾವುದೇ ವಿಷಯದ ಮುಖ್ಯ ಜ್ಞಾನಕ್ಕೆ ಹೋಲಿಸಿದ್ದಲ್ಲಿ ಪಠ್ಯಕ್ರಮ ಕಡಿಮೆಯಾಗಿರುತ್ತದೆ

18. ವಿದ್ಯಾರ್ಥಿಗಳ ಪ್ರಾಯೋಗಿಕ ಮತ್ತು ತಂತ್ರಜ್ಞಾನದ ಮೇಲೆ ಹೆಚ್ಚಿನ ಗಮನ

19. ಯಾವುದೇ ಪದವಿ ವಿದ್ಯಾರ್ಥಿ ಒಂದು ವರ್ಷ ವಿದ್ಯಾಭ್ಯಾಸ ಕಡಿತಗೊಳಿಸಿದರೆ ಆಂಥ ವಿದ್ಯಾರ್ಥಿಗೆ ಸಾಮಾನ್ಯ ಪ್ರಮಾಣಪತ್ರ ನೀಡಲಾಗುತ್ತದೆ. ಎರಡು ವರ್ಷ ಪೂರ್ಣಗೊಳಿಸಿದ ವಿದ್ಯಾರ್ಥಿಗೆ ಡಿಪ್ಲೋಮಾ ಪ್ರಮಾಣಪತ್ರ ನೀಡಲಾಗುತ್ತದೆ. ಹಾಗೂ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗೆ ಪದವಿ ಪ್ರಮಾಣಪತ್ರ ನೀಡಲಾಗುತ್ತದೆ. ಇದರಿಂದ ಮಧ್ಯದಲ್ಲೇ ಕಾಲೇಜ್ ತೊರೆದ ವಿದ್ಯಾರ್ಥಿಯ ಯಾವುದೇ ವರ್ಷವು ವ್ಯರ್ಥವಾಗುವುದಿಲ್ಲ

20. ಎಲ್ಲಾ ವಿಶ್ವವಿದ್ಯಾಲಯಗಳ ಪದವಿ ಕೋರ್ಸ್ ಫೀಡ್ ಅನ್ನು ಪ್ರತಿ ಕೋರ್ಸ್ ಅನ್ನು ಕ್ಯಾಪಿಂಗ್ ಮಾಡುವ ಮೂಲಕ ಒಂದೇ ಪ್ರಾಧಿಕಾರದಿಂದ ನಿಯಂತ್ರಿಸಲಾಗುತ್ತದೆ

ರಾಷ್ಟ್ರೀಯ ಶಿಕ್ಷಣ ನೀತಿ-2020 ಸ್ವಾಗತಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿರಾಷ್ಟ್ರೀಯ ಶಿಕ್ಷಣ ನೀತಿ-2020 ಸ್ವಾಗತಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ

English summary
India: RSS Impact Behind New Education Policy-2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X