ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಭಾರತದ ವಿಶೇಷ ವಿಮಾನ ಹಾರಾಟಕ್ಕೆ ನಿರ್ಬಂಧ: ಭಾರತದ ಪ್ರತಿಕ್ರಿಯೆ

|
Google Oneindia Kannada News

ವಾಷಿಂಗ್ಟನ್, ಜೂನ್ 24: ಅಮೆರಿಕದಲ್ಲಿ ಭಾರತದ ವಿಶೇಷ ವಿಮಾನ ಹಾರಾಟಕ್ಕೆ ಅಮೆರಿಕ ನಿರ್ಬಂಧ ಹೇರಿದ್ದು ಈ ಕುರಿತು ಭಾರತ ಪ್ರತಿಕ್ರಿಯಿಸಿದೆ.

ಭಾರತದಿಂದ ಅಮೆರಿಕಕ್ಕೆ ವಿಶೇಷ ವಿಮಾನ ವ್ಯವಸ್ಥೆ ಕಲ್ಪಿಸಿದರೆ, ಅಮೆರಿಕದ ವಿಮಾನಗಳಿಗೂ ಭಾರತದಲ್ಲಿ ಅನುಮತಿ ನೀಡಬೇಕು ಎಂದು ಅಮೆರಿಕ ಭಾರತವನ್ನು ಕೇಳಿತ್ತು. ಹಾಗೆಯೇ ಜರ್ಮನಿ, ಫ್ರಾನ್ಸ್, ಯುಕೆ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿತ್ತು.

ಚಾರ್ಟರ್ ವಿಮಾನ ನಿರ್ಬಂಧದ ಬಳಿಕ ಬೇರೆ ದೇಶಗಳ ವಿಮಾನಗಳಿಗೂ ಏರ್‌ ಇಂಡಿಯಾದಂತೆ ಕಾರ್ಯ ನಿರ್ವಹಿಸಲು ಅನುಮತಿ ನೀಡುವ ಕುರಿತು ಚರ್ಚೆ ನಡೆಸಿರುವುದಾಗಿ ಭಾರತ ಹೇಳಿದೆ.

ಕೊರೊನಾ ವೈರಸ್ ವಿಶ್ವದಾದ್ಯಂತ ಹಬ್ಬಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಭಾರತ ನಿಷೇಧಿಸಿದೆ. ಜೊತೆಗೆ ಬೇರೆ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ದೇಶಕ್ಕೆ ಕರೆ ತರಲು ವಂದೇ ಭಾರತ್ ಮಿಷನ್ ಅಡಿ ಏರ್ ಇಂಡಿಯಾ ವಿಮಾನವನ್ನು ವಿವಿಧ ದೇಶಗಳಿಗೆ ಕಳುಹಿಸುತ್ತಿತ್ತು.

ಬೇರೆ ದೇಶಗಳ ವಿಮಾನ ಹಾರಾಟಕ್ಕೆ ಅನುಮತಿ ನೀಡುವ ಕುರಿತು ಅಮೆರಿಕದ ಬಳಿ ಜೂನ್ 15 ರಂದು ಒಂದು ಸುತ್ತಿನ ಮಾತುಕತೆ ನಡೆದಿದೆ.

ಭಾರತದಿಂದ ಬರುವ ವಿಶೇಷ ವಿಮಾನಗಳಿಗೆ ಅಮೆರಿಕ ನಿರ್ಬಂಧಭಾರತದಿಂದ ಬರುವ ವಿಶೇಷ ವಿಮಾನಗಳಿಗೆ ಅಮೆರಿಕ ನಿರ್ಬಂಧ

ಅಮೆರಿಕವು ವಿಶೇಷ ವಿಮಾನಗಳ ಕಾರ್ಯ ನಿರ್ವಹಿಸುವ ಮೊದಲು ಭಾರತವು ಅನುಮತಿ ಪಡೆಯಬೇಕು ಎಂದು ಸೂಚಿಸಿತ್ತು. ಅನುಮತಿ ಪಡೆದ ಬಳಿಕ ನಿರ್ಬಂಧದ ಕುರಿತು ಯೋಚಿಸುವುದಾಗಿ ಹೇಳಿತ್ತು.

ಇದೀಗ ಅಮೆರಿಕದ ಈ ನಿರ್ಧಾರದಿಂದ ಅಮೆರಿಕದಲ್ಲಿ ಸಿಲುಕಿರುವ ಭಾರತೀಯರು ಹಾಗೂ ಅಮರಿಕಕ್ಕೆ ಮತ್ತೆಎ ಕೆಲಸಕ್ಕೆ ತೆರಳಲು ಬಯಸಿದವರಿಗೆ ತೊಂದರೆಯುಂಟಾಗಿದೆ. ಈ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಲು ಭಾರತ ಮುಂದಾಗಿದೆ.

ಅಮೆರಿಕದ ವಿಮಾನಗಳ ಹಾರಾಟಕ್ಕೆ ನಿರ್ಬಂಧ

ಅಮೆರಿಕದ ವಿಮಾನಗಳ ಹಾರಾಟಕ್ಕೆ ನಿರ್ಬಂಧ

ಅಮೆರಿಕದ ವಿಮಾನಗಳ ಕಾರ್ಯಾಚರಣೆಯ ಹಕ್ಕುಗಳಿಗೆ ಭಾರತ ಸರ್ಕಾರ ತಡೆಯೊಡ್ಡಿದೆ. ಮತ್ತು ಅಮೆರಿಕದ ವಿಮಾನ ಸೇವೆಗಳಿಗೆ ಸಂಬಂಧಿಸಿದಂತೆ ತಾರತಮ್ಯ ಮತ್ತು ಅನ್ಯಾಯದ ನೀತಿ ಅನುಸರಿಸುತ್ತಿದೆ ಎಂದು ಅಮೆರಿಕದ ಸಾರಿಗೆ ಇಲಾಖೆ ಸೋಮವಾರ ಪ್ರಕಟಣೆ ಹೊರಡಿಸಿತ್ತು. ನಿರ್ದಿಷ್ಟವಾಗಿ ಹೇಳುವುದಾದರೆ ಅಮೆರಿಕ-ಭಾರತ ನಡುವಿನ ಚಾರ್ಟರ್ ವಿಮಾನ ಸೇವೆಗಳಲ್ಲಿ ಪ್ರಯಾಣಿಕರಿಗೆ ಟಿಕೆಟ್ ನೇರ ಮಾರಾಟ ಮತ್ತು ಇತರೆ ವಿತರಣೆ ವ್ಯವಸ್ಥೆಗಳನ್ನು ಬಳಸುವುದಕ್ಕೆ ಭಾರತ ಸರ್ಕಾರ ಅಮೆರಿಕ ವಿಮಾನಗಳಿಗೆ ನಿರ್ಬಂಧ ಹೇರಿದೆ.

ಚಾರ್ಟರ್ ಸೇವೆಗಳಿಗೆ ಯಾವುದೇ ಮಿತಿಯಿಲ್ಲ

ಚಾರ್ಟರ್ ಸೇವೆಗಳಿಗೆ ಯಾವುದೇ ಮಿತಿಯಿಲ್ಲ

ಇತ್ತ ಅಮೆರಿಕವು ಭಾರತ-ಅಮೆರಿಕ ನಡುವಿನ ಚಾರ್ಟರ್ ಸೇವೆಗಳಿಗೆ ಯಾವುದೇ ಮಿತಿಯನ್ನು ವಿಧಿಸಿಲ್ಲ. ಒಪ್ಪಂದದ ಪ್ರಕಾರ ಪ್ರಯಾಣಿಕರಿಗೆ ಸಂಪೂರ್ಣವಾಗಿ ಸೇವೆ ಒದಗಿಸಲು ಏರ್ ಇಂಡಿಯಾ ಮುಕ್ತವಾಗಿದೆ ಎಂದು ಡಿಒಟಿ ಹೇಳಿದೆ. ಕೊರೊನಾವೈರಸ್ ಹಾವಳಿಯಿಂದಾಗಿ ಮಾರ್ಚ್ 25ರಿಂದ ಭಾರತ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿತ್ತು.

ವಂದೇ ಭಾರತ್ ಮಿಷನ್ ಅಡಿ ವಿಮಾನ ಸೌಕರ್ಯ

ವಂದೇ ಭಾರತ್ ಮಿಷನ್ ಅಡಿ ವಿಮಾನ ಸೌಕರ್ಯ

ಲಾಕ್‌ಡೌನ್‌ನಿಂದಾಗಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ತಾಯ್ನಾಡಿಗೆ ವಾಪಸ್ ಕರೆತರುವುದಕ್ಕಾಗಿ ಭಾರತ ಸರ್ಕಾರ ಮೇ 6ರಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿಮಾನ ಸೌಕರ್ಯ ಕಲ್ಪಿಸಿತ್ತು. ಮೇ 18ರಿಂದ ಏರ್ ಇಂಡಿಯಾ ವಿಮಾನ ಸಂಸ್ಥೆಯ ಚಾರ್ಟರ್ ವಿಮಾನಗಳು ಅಮೆರಿಕ-ಭಾರತ ನಡುವೆ ಹಾರಾಟ ನಡೆಸುತ್ತಿದ್ದು, ಉಭಯ ರಾಷ್ಟ್ರಗಳಲ್ಲಿ ವಿಮಾನ ಟಿಕೆಟ್ ದರ ಮಾರಾಟವಾಗಿದೆ.

ಡೆಲ್ಟಾ ವಿಮಾನ ಸಂಸ್ಥೆಯಿಂದ ಪತ್ರ

ಡೆಲ್ಟಾ ವಿಮಾನ ಸಂಸ್ಥೆಯಿಂದ ಪತ್ರ

ಭಾರತ-ಅಮೆರಿಕ ನಡುವಿನ ಪ್ರಯಾಣಕ್ಕೆ ಏರ್ ಇಂಡಿಯಾ ವೆಬ್‌ಸೈಟ್ ಮೂಲಕ ಟಿಕೆಟ್ ಮಾರಾಟವಾಗುತ್ತಿದೆ. ಅದೇ ವೇಳೆ ಅಮೆರಿಕದಿಂದ ಭಾರತಕ್ಕೆ ಬರುವುದಾದರೆ ಪ್ರಯಾಣಿಕರು ಅಮೆರಿಕದಲ್ಲಿರುವ ಭಾರತದ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಟಿಕೆಟ್ ಪಡೆಯಬೇಕು.

ಏರ್ ಇಂಡಿಯಾ ಸೇವೆಯಂತೆಯೇ ತಮಗೂ ಚಾರ್ಟರ್ ವಿಮಾನ ಸೇವೆ ಆರಂಭಿಸಲು ಅವಕಾಶ ನೀಡಿ ಎಂದು ಮೇ 26ರಂದು ಡೆಲ್ಟಾ ವಿಮಾನ ಸಂಸ್ಥೆ ಭಾರತೀಯ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದು ವಿನಂತಿಸಿತ್ತು. ಆದರೆ ಇಲ್ಲಿಯವರೆಗೆ ಡೆಲ್ಟಾ ವಿಮಾನಯಾನ ಕಂಪನಿಗೆ ಅನುಮತಿ ದೊರೆತಿಲ್ಲ.

English summary
The civil aviation ministry said it is exploring bilateral arrangements with countries to bring back Indians stranded in various countries because of the coronavirus pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X