ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲಾನ್ ಮಸ್ಕ್‌ ಮನವಿ ತಿರಸ್ಕರಿಸಿದ ಭಾರತ ಸರ್ಕಾರ, ಕಾರಣವೇನು?

|
Google Oneindia Kannada News

ನವದೆಹಲಿ, ಫೆಬ್ರವರಿ 5: ಎಲಾನ್ ಮಸ್ಕ್‌ ಮಾಡಿದ್ದ ಮನವಿಯನ್ನು ಭಾರತ ಸರ್ಕಾರ ತಿರಸ್ಕರಿಸಿದೆ.
ಟೆಸ್ಲಾ ಹಾಗೂ ಕೇಂದ್ರ ಸರ್ಕಾರದ ನಡುವೆ ಕಳೆದ ಕೆಲ ವರ್ಷಗಳಿಂದಲೇ ತೆರಿಗೆ ನೀತಿ ಕುರಿತು ಗೊಂದಲವಿದೆ. ಆಮದು ಸುಂಕ ಹಾಗೂ ಇತರ ತೆರಿಗೆ ಹೆಚ್ಚಿರುವ ಕಾರಣ ಟೆಸ್ಲಾ ಕಾರು ಭಾರತದಲ್ಲಿ ಅತ್ಯಂತ ದುಬಾರಿ ಕಾರಾಗಿ ಮಾರ್ಪಡಲಿದೆ.

ಟೆಸ್ಲಾ ಕಾರುಗಳ ಆಮದು, ಬಿಡಿ ಭಾಗಗಳ ಆಮದಿಗೆ ಸುಂಕ ಕಡಿತಗೊಳಿಸಲು ಟೆಸ್ಲಾ ಮನವಿ ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕಾರಣ ಈಗಾಗಲೇ ಹಲವು ವಿದೇಶಿ ಕಂಪನಿಗಳು ಭಾರತದ ತೆರಿಗೆ ನೀತಿ ಮೂಲಕ ವ್ಯವಹಾರ ನಡೆಸುತ್ತಿದೆ. ಬಿಡಿ ಭಾಗಗಳ ಆಮದು ಮಾಡಿಕೊಳ್ಳಲು ಸದ್ಯ ಚಾಲ್ತಿಯಲ್ಲಿರುವ ನೀತಿಯನ್ನು ಒಪ್ಪಿಕೊಂಡಿದೆ. ಹೀಗಾಗಿ ಇತರ ಕಂಪನಿಗಳಿಗೆ ನೀಡದ ವಿನಾಯಿತಿ, ಕೇವಲ ಟೆಸ್ಲಾಗೆ ನೀಡಲು ಸಾಧ್ಯವಿಲ್ಲ ಎಂದು ವಿವೇಕ್ ಜೋಹ್ರಿ ಹೇಳಿದ್ದಾರೆ.

2021 ರ 'ವರ್ಷದ ವ್ಯಕ್ತಿ' ಎಂಬ ಖ್ಯಾತಿ ಪಡೆದ ಎಲಾನ್‌ ಮಸ್ಕ್‌2021 ರ 'ವರ್ಷದ ವ್ಯಕ್ತಿ' ಎಂಬ ಖ್ಯಾತಿ ಪಡೆದ ಎಲಾನ್‌ ಮಸ್ಕ್‌

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಒತ್ತು ನೀಡಿರುವ ಕೇಂದ್ರ ಮಾಲಿನ್ಯ ಮುಕ್ತವಾಗಿಸುವ ಪಣತೊಟ್ಟಿದೆ. ಇದಕ್ಕಾಗಿ ಹೊಸ ಹೊಸ ಎಲೆಕ್ಟ್ರಿಕ್ ವಾಹನ ಕಂಪನಿಗಳು ಭಾರತದಲ್ಲಿ ಕಾರ್ಯಾರಂಭ ಮಾಡಿದೆ.

India Rejects Elon Musks Calls For Tax Breaks In Fresh Blow

ಅಮೆರಿಕದ ಅತೀ ದೊಡ್ಡ ಎಲೆಕ್ಟ್ರಿಕ್ ವಾಹನ ತಯಾರಿಕಾ ಘಟಕ ಟೆಸ್ಲಾ ಭಾರತದಲ್ಲಿ ಕಾರು ಬಿಡುಗಡೆಗೆ ಕಳೆದ ಹಲವು ವರ್ಷಗಳಿಂದ ಪ್ರಯತ್ನಗಳು ನಡೆಯುತ್ತಲೇ ಇದೆ. ಇತ್ತೀಚೆಗೆ ಟ್ವಿಟರ್ ಮೂಲಕ ಕೆಲ ಘರ್ಷಣೆಗಳು ನಡೆಯುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರದಿಂದ ಮತ್ತೊಂದು ಮಾಹಿತಿ ಬಹಿರಂಗವಾಗಿದೆ. ಈ ಮಾಹಿತಿ ಪ್ರಕಾರ ಟೆಸ್ಲಾ ಮಾಡಿದ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

ಎಲಾನ್ ಮಸ್ಕ್ ಟ್ವೀಟ್ ಮಾಡಿದ ಬೆನ್ನಲ್ಲೇ ಪಂಜಾಬ್, ಕರ್ನಾಟಕ, ತಮಿಳುನಾಡು ಸೇರಿದಂತೆ ಭಾರತ 5ಕ್ಕೂ ಹೆಚ್ಚು ರಾಜ್ಯಗಳು ಟ್ವೀಟ್ ಮೂಲಕ ಎಲಾನ್ ಮಸ್ಕ್‌ಗೆ ಮನವಿ ಮಾಡಿತ್ತು. ತಮ್ಮ ತಮ್ಮ ರಾಜ್ಯಗಳಲ್ಲಿ ಘಟಕ ಸ್ಥಾಪಿಸಲು ಮನವಿ ಮಾಡಿತ್ತು. ಆದರೆ ಟೆಸ್ಲಾಗೆ ಅಡ್ಡಿಯಾಗಿರುವುದು ಇಲ್ಲಿನ ರಾಜ್ಯ ಸರ್ಕಾರದ ನೀತಿಗಳಿಂದ, ಕೇಂದ್ರದ ಆಮದು ಸುಂಕ ನೀತಿಯಿಂದ ಅನ್ನೋದು ರಾಜ್ಯಗಳಿಗೂ ತಿಳಿಯದಾಯಿತು.

ಇದರಿಂದ ಟೆಸ್ಲಾ ಭಾರತದಲ್ಲಿ ಮಾರಾಟ ತೀರಾ ಕಳಪೆಯಾಗಲಿದೆ. ಹೀಗಾಗಿ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳ ಆಮದಿಗೆ ಸುಂಕ ಹಾಗೂ ಇತರ ತೆರಿಗೆ ಕಡಿತಗೊಳಿಸಬೇಕು ಎಂದು ಟೆಸ್ಲಾ ಮನವಿ ಮಾಡಿದೆ.

ಈಗ ಟೆಸ್ಲಾ ಮನವಿಯನ್ನು ಕೇಂದ್ರ ಸರ್ಕಾರ ತರಿಸ್ಕರಿಸಿರುವುದಾಗಿ ಸೆಂಟ್ರಲ್ ಬೋರ್ಡ್ ಆಫ್ ಇಂಡೈರೆಕ್ಟ್ ಟ್ಯಾಕ್ಸ್ ಹಾಗೂ ಕಸ್ಟಮ್ ಮುಖ್ಯಸ್ಥ ವಿವೇಕ್ ಜೋಹ್ರಿ ಹೇಳಿದ್ದಾರೆ.
ಸಂದರ್ಶನದಲ್ಲಿ ಎಲಾನ್ ಮಸ್ಕ್ ಭಾರತದಲ್ಲಿ ಟೆಸ್ಲಾ ಕಾರು ಬಿಡುಗಡೆ ತೊಡಕನ್ನು ಹೇಳಿದ್ದರು.

ಅಮೆರಿಕದಲ್ಲಿ ಟೆಸ್ಲಾದ ಮಾಡೆಲ್ 3 ಕಾರಿನ ಬೆಲೆ 30 ಲಕ್ಷ ರೂಪಾಯಿ ಭಾರತದಲ್ಲಿನ ಈ ಕಾರಿನ ಬೆಲೆ ತೆರಿಗೆ ಕಾರಣದಿಂದ ಸರಿಸುಮಾರು 60 ಲಕ್ಷ ರೂಪಾಯಿ ಆಗಲಿದೆ. ಕಾರಣ ಆಮದು ಸುಂಕ ಹಾಗೂ ಇತರ ತೆರಿಗೆ ಶೇಕಡಾ 100. ಹೀಗಾಗಿ ಕೈಗೆಟುಕುವ ದರದ ಟೆಸ್ಲಾ ಕಾರು ಭಾರತದಲ್ಲಿ ದುಬಾರಿಯಾಗಲಿದೆ. ಹೀಗಾಗಿ ತೆರಿಗೆ ಕಡಿತಗೊಳಿಸಬೇಕು ಎಂದು ಮನವಿ ಮಾಡಲಾಗಿತ್ತು.

ಇತ್ತೀಚೆಗೆ ಎಲಾನ್ ಮಸ್ಕ್ ಭಾರತದಲ್ಲಿ ಅತೀ ಹೆಚ್ಚು ತೆರಿಗೆ ಇದೆ. ವಿಶ್ವದಲ್ಲೂ ಎಲ್ಲೂ ಇಲ್ಲದ ತೆರಿಗೆ ನೀತಿಯಿಂದ ಕಾರು ಬಿಡುಗಡೆ ವಿಳಂಬವಾಗುತ್ತಿದೆ ಎಂದು ಸಂದರ್ಶನದಲ್ಲಿ ಹೇಳಿದ್ದರು. ಇಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಕೇಳಲಾಗಿದ್ದ ಪ್ರಶ್ನೆಗೆ ಉತ್ತರಿಸುತ್ತಾ, ಸರ್ಕಾರದ ಜೊತೆ ಮಾತುಕತೆ ನಡಯುತ್ತಿದೆ. ಹಲವು ಸವಾಲುಗಳನ್ನು ಎದುರಿಸುತ್ತಿದ್ದೇವೆ ಎಂದು ಟೆಸ್ಲಾ ಕಾರು ಭಾರತದಲ್ಲಿ ಬಿಡುಗಡೆ ಕುರಿತು ಉತ್ತರ ನೀಡಿದ್ದರು.

ಎಲೆಕ್ಟ್ರಿಕ್ ವಾಹನ ಕಂಪನಿ ಟೆಸ್ಲಾ , ತನ್ನ ಕಾರುಗಳನ್ನು ಸಂಪೂರ್ಣ ಸ್ವಯಂಚಾಲಿತವನ್ನಾಗಿಸುವ ಗುರಿ ಹೊಂದಿತ್ತಾದರೂ, ಈಗ ಅದಕ್ಕೆ ಒಂದಿಲ್ಲೊಂದು ಅಡೆತಡೆ ಎದುರಾಗುತ್ತಿದೆ. ಈಗ ಟೆಸ್ಲಾ ಐಎನ್ಸಿ ಕಂಪನಿ, ತನ್ನ ಕಾರುಗಳಲ್ಲಿನ ಸಂಪೂರ್ಣ ಸ್ವಯಂ-ಚಾಲನಾ ಸಾಫ್ಟ್ವೇರ್ ಅನ್ನು ನಿಷ್ಕ್ರಿಯಗೊಳಿಸಲು ಮುಂದಾಗಿದೆ.

ಈ ಸೌಲಭ್ಯ ಹೊಂದಿರುವ ಅಮೆರಿಕದ ಒಟ್ಟು 53,822 ವಾಹನಗಳನ್ನು ಹಿಂಪಡೆಯುವುದಾಗಿ ಕಂಪನಿ ಮುಂದಾಗಿದೆ. ಈ ಸ್ವಯಂ ಚಾಲನಾ ಸೌಲಭ್ಯದಿಂದ ಅದು ಆಟೊಮೆಟಿಕ್ ಆಗಿ, "ರೋಲಿಂಗ್ ಸ್ಟಾಪ್" ಸೌಲಭ್ಯವನ್ನು ಆನ್ ಮಾಡಲಿದೆ. ಇದರಿಂದ ಸ್ಟಾಪ್ ಸೈನ್ ಸಕ್ರಿಯಗೊಂಡ ನಂತರವೂ ಕಾರು ಸಂಪೂರ್ಣ ನಿಲ್ಲುವ ಬದಲು ವಾಹನ ನಿಧಾನವಾಗಿ ಚಲಿಸುತ್ತಿರಲಿದೆ.

ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತಾ ನಿರ್ವಹಣೆ (ಎನ್ಎಚ್ಟಿಎಸ್ಎ- NHTSA) ಜಾರಿಗೊಳಿಸಿದ ನೋಟಿಸ್ ಪ್ರಕಾರ, ಸ್ಟಾಪ್ ಸೈನ್ನ ವೈಫಲ್ಯ ಅಪಘಾತಕ್ಕೆ ಕಾರಣವಾಗಬಹುದು ಎಂದು ಉಲ್ಲೇಖಿಸಿದೆ.

ಕೆಲವು 2016-2022ರಲ್ಲಿ ಬಿಡುಗಡೆಯಾದ ಮಾಡೆಲ್ ಎಸ್ ಮತ್ತು ಮಾಡೆಲ್ ಎಕ್ಸ್, 2017-2022ರ 3, ಮತ್ತು 2020-2022ರ ವೈ ಮಾದರಿ ವಾಹನಗಳನ್ನು ಹಿಂಪಡೆಯುವ ಪ್ರಕ್ರಿಯೆ ಆರಂಭಗೊಂಡಿದೆ. ಈ ಕಾರ್‌ಗಳೂ ಎಫ್ಎಸ್ಡಿ ಬೀಟಾ ಎಂದೂ ಕರೆಯಲ್ಪಡುವ ವೈಶಿಷ್ಟ್ಯವನ್ನು ಒಳಗೊಂಡಿವೆ.

English summary
India turned down a demand of Elon Musk's Tesla Inc. for tax breaks to import electric cars, saying rules already allow bringing in partially-built vehicles and assembling them locally at a lower levy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X