ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನಲ್ಲೇ ನಂ.1: ಭಾರತದಲ್ಲಿ ಮೇ ತಿಂಗಳ ಕೊರೊನಾವೈರಸ್ ಲೆಕ್ಕಾಚಾರ!

|
Google Oneindia Kannada News

ನವದೆಹಲಿ, ಜೂನ್ 01: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಆರಂಭವಾಗಿ ಇಷ್ಟು ದಿನಗಳಲ್ಲೇ ಮೊದಲ ಬಾರಿಗೆ ಭಾರತವು ಜಗತ್ತಿನಲ್ಲೇ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸಿದೆ. ಇಡೀ ವಿಶ್ವದಲ್ಲೇ ಅತಿಹೆಚ್ಚು ಕೊವಿಡ್-19 ಪ್ರಕರಣಗಳು ಮತ್ತು ಸಾವಿನ ಪ್ರಕರಣಗಳು ಮೇ ತಿಂಗಳೊಂದರಲ್ಲೇ ವರದಿಯಾಗಿವೆ.

ಮೇ ತಿಂಗಳು ಅಂತ್ಯವಾಗಿ ಮರುದಿನವೇ ಭಾರತದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡು ಬಂದಿದೆ. ಕಳೆದ ಏಪ್ರಿಲ್ 9ರಂದು ಕೊನೆಯ ಬಾರಿ 1.50 ಲಕ್ಷ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿದ್ದವು. ಅದಾಗಿ 54 ದಿನಗಳ ನಂತರ ಮೊದಲ ಬಾರಿಗೆ ಹೊಸ ಪ್ರಕರಣಗಳ ಸಂಖ್ಯೆ 1.27 ಲಕ್ಷಕ್ಕೆ ಇಳಿಕೆಯಾಗಿದೆ.

ದೇಶದಲ್ಲಿ ಒಂದೇ ದಿನ 1,27,510 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 2,55,287 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದೇ ದಿನ ಕೊರೊನಾವೈರಸ್ ಮಹಾಮಾರಿಗೆ 2,795 ಮಂದಿ ಪ್ರಾಣ ಬಿಟ್ಟಿದ್ದಾರೆ. ಒಟ್ಟು 2,81,75,044 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,59,47,629 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 3,31,895 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 18,95,520 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಒಂದೇ ತಿಂಗಳಿನಲ್ಲಿ 90 ಲಕ್ಷ ಜನರಿಗೆ ಕೊವಿಡ್-19

ಒಂದೇ ತಿಂಗಳಿನಲ್ಲಿ 90 ಲಕ್ಷ ಜನರಿಗೆ ಕೊವಿಡ್-19

ಭಾರತದಲ್ಲಿ ಕಳೆದ ಮೇ ತಿಂಗಳು ಒಂದರಲ್ಲೇ 90.30 ಲಕ್ಷ ಜನರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ತಿಂಗಳ ಅವಧಿಯಲ್ಲಿ ಇದುವರೆಗೂ ವಿಶ್ವದ ಯಾವುದೇ ರಾಷ್ಟ್ರದಲ್ಲಿ ಇಷ್ಟೊಂದು ಕೊವಿಡ್-19 ಪ್ರಕರಣಗಳು ವರದಿಯಾಗಿಲ್ಲ. ಮೇ ತಿಂಗಳ ಮೂರನೇ ವಾರದಿಂದ ಸೋಂಕಿತ ಪ್ರಕರಣಗಳಲ್ಲಿ ಸ್ಥಿರತೆ ಕಂಡು ಬಂದಿದ್ದು, ನಂತರದಲ್ಲಿ ಇಳಿಕೆ ಆಗಿರುವುದು ಗೊತ್ತಾಗುತ್ತದೆ. ಏಪ್ರಿಲ್ ತಿಂಗಳಿಗಿಂತ ಮೇ ತಿಂಗಳಿನಲ್ಲಿ ಶೇ.30ರಷ್ಟು ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ಭಾರತದಲ್ಲಿ 69.40 ಲಕ್ಷ ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವರದಿಯಾಗಿತ್ತು.

ಅಮೆರಿಕಾದ ಪಾಲಿಗೆ ಅಪಾಯಕಾರಿ ಎನಿಸಿದ ಡಿಸೆಂಬರ್

ಅಮೆರಿಕಾದ ಪಾಲಿಗೆ ಅಪಾಯಕಾರಿ ಎನಿಸಿದ ಡಿಸೆಂಬರ್

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಪಾಲಿಗೆ ಕಳೆದ 2020ರ ಡಿಸೆಂಬರ್ ತಿಂಗಳು ಸಾಕಷ್ಟು ಅಪಾಯಕಾರಿ ಎನಿಸಿತ್ತು. ಡಿಸೆಂಬರ್ ತಿಂಗಳು ಒಂದರಲ್ಲೇ ದೇಶದ 65.30 ಲಕ್ಷ ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು. 10 ಲಕ್ಷ ಜನಸಂಖ್ಯೆಯಲ್ಲಿ ಅಮೆರಿಕಾದ 1,02,302 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಅಂದಿನ ಲೆಕ್ಕಾಚಾರದಲ್ಲಿ ಭಾರತಕ್ಕೆ ಹೋಲಿಸಿದರೆ ಇದು ಐದು ಪಟ್ಟು ಹೆಚ್ಚಾಗಿತ್ತು.

ಯಾವ ರಾಷ್ಟ್ರಗಳ ಪಾಲಿಗೆ ಯಾವ ತಿಂಗಳು ಅಪಾಯಕಾರಿ

ಯಾವ ರಾಷ್ಟ್ರಗಳ ಪಾಲಿಗೆ ಯಾವ ತಿಂಗಳು ಅಪಾಯಕಾರಿ

ಜಗತ್ತಿನಲ್ಲೇ ಅತಿಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳನ್ನು ದಾಖಲಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕಾ ಮತ್ತು ಭಾರತ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿವೆ. ಈ ಎರಡು ರಾಷ್ಟ್ರಗಳ ಪಾಲಿಗೆ ಯಾವ ತಿಂಗಳು ಅಪಾಯಕಾರಿ ಎನಿಸಿತ್ತು ಹಾಗೂ ಯಾವ ತಿಂಗಳಿನಲ್ಲಿ ಎಷ್ಟು ಹೊಸ ಪ್ರಕರಣ ಮತ್ತು ಸಾವಿನ ಪ್ರಕರಣಗಳು ವರದಿಯಾಗಿದ್ದವು ಎಂಬುದರ ಪಟ್ಟಿ ಇಲ್ಲಿದೆ ಓದಿ.

ದೇಶ - ತಿಂಗಳು - ಪ್ರಕರಣ

ಭಾರತ - ಮೇ - 90.25 ಲಕ್ಷ

ಭಾರತ - ಏಪ್ರಿಲ್ - 69.3 ಲಕ್ಷ

ಯುಎಸ್ಎ- ಡಿಸೆಂಬರ್ - 65.3 ಲಕ್ಷ

ಯುಎಸ್ಎ- ಜನವರಿ - 62 ಲಕ್ಷ

ಯಾವ ದೇಶದಲ್ಲಿ ಅತಿಗೆಚ್ಚು ಕೊವಿಡ್-19 ಸಾವಿನ ಪ್ರಕರಣ?

ಯಾವ ದೇಶದಲ್ಲಿ ಅತಿಗೆಚ್ಚು ಕೊವಿಡ್-19 ಸಾವಿನ ಪ್ರಕರಣ?

ದೇಶ - ತಿಂಗಳು - ಸಾವಿನ ಪ್ರಕರಣ

ಭಾರತ - ಮೇ - 1.19 ಲಕ್ಷ

ಯುಎಸ್ - ಜನವರಿ - 99.60 ಸಾವಿರ

ಯುಎಸ್ - ಡಿಸೆಂಬರ್ - 99.60 ಸಾವಿರ

ಬ್ರೆಜಿಲ್ - ಏಪ್ರಿಲ್ - 82 ಸಾವಿರ

ಭಾರತದಲ್ಲಿ ಒಂದೇ ದಿನ 1.19 ಲಕ್ಷ ಜನರ ಸಾವು

ಭಾರತದಲ್ಲಿ ಒಂದೇ ದಿನ 1.19 ಲಕ್ಷ ಜನರ ಸಾವು

ಭಾರತದಲ್ಲಿ ಮೇ ತಿಂಗಳು ಒಂದರಲ್ಲೇ ಅತಿಹೆಚ್ಚು ಮಂದಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಒಂದು ತಿಂಗಳಿನಲ್ಲಿ 1,19 ಲಕ್ಷ ಜನರು ಕೊವಿಡ್-19 ಸೋಂಕಿನಿಂದ ಮೃತಪಟ್ಟಿದ್ದಾರೆ. ಕಳೆದ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ 2.5 ಪಟ್ಟು ಸಾವಿನ ಸಂಖ್ಯೆ ಏರಿಕೆಯಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಮಹಾಮಾರಿಗೆ 48,786 ಜನರು ಬಲಿಯಾಗಿದ್ದರು. ಇದರ ಹೊರತಾಗಿಯೂ ಕೊವಿಡ್-19 ಶಿಷ್ಟಾಚಾರದ ಪ್ರಕಾರ ಅಂತ್ಯಕ್ರಿಯೆ ಮತ್ತು ಮೃತರ ಸಾವಿನ ಸಂಖ್ಯೆಯ ಎಣಿಕೆಯಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿರುವ ಬಗ್ಗೆ ತಜ್ಞರು ಶಂಕೆ ವ್ಯಕ್ತಪಡಿಸಿದ್ದರು.

ಭಾರತದಲ್ಲಿ ತಗ್ಗಿದ ಕೊರೊನಾವೈರಸ್ ತಪಾಸಣೆ ವೇಗ!

ಭಾರತದಲ್ಲಿ ತಗ್ಗಿದ ಕೊರೊನಾವೈರಸ್ ತಪಾಸಣೆ ವೇಗ!

ಭಾರತದಲ್ಲಿ ಭಾನುವಾರಕ್ಕೆ ಹೋಲಿಸಿದರೆ ಸೋಮವಾರ ಕೊರೊನಾವೈರಸ್ ಸೋಂಕು ಪತ್ತೆ ಪರೀಕ್ಷೆ ವೇಗವನ್ನು ಹೆಚ್ಚಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 19,25,374 ಜನರ ಮಾದರಿ ತಪಾಸಣೆಗೆ ಒಳಪಡಿಸಲಾಗಿದೆ. ದೇಶದಲ್ಲಿ ಈವರೆಗೂ 34,67,92,257 ಜನರಿಗೆ ಕೊವಿಡ್-19 ಸೋಂಕಿನ ತಪಾಸಣೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ.

English summary
India Records Highest Covid-19 Cases And Deaths In May Which Is Highest In World For Any Month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X