ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ವಾಡಿಕೆಗಿಂತ ಶೇ.8ರಷ್ಟು ಕಡಿಮೆ ಮಳೆ ದಾಖಲು

|
Google Oneindia Kannada News

ಮುಂಬೈ, ಜು.1: ಈ ಭಾರಿ ಮುಂಗಾರಿನಲ್ಲಿ ವಾಡಿಕೆಗಿಂತ ಉತ್ತಮ ಮಳೆಯಾಗುವ ನಿರೀಕ್ಷೆ ಹೊಂದಿದ್ದ ಭಾರತದಲ್ಲಿ ಮಾನ್ಸೂನ್‌ನ ಮೊದಲ ತಿಂಗಳಲ್ಲೇ ವಾಡಿಕೆಗಿಂತ ಕಡಿಮೆ ಮಳೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ದೇಶದ ಕೆಲವು ರಾಜ್ಯಗಳಲ್ಲಿ ಉತ್ತಮ ಮಳೆಯಾಗಿದೆ. ಆದರೆ ಮಧ್ಯ ಭಾರತ ಸೇರಿದಂತೆ ಹತ್ತಿ, ಕಬ್ಬು ಹಾಗೂ ಸೋಯಾಬಿನ್ ಬೆಳೆಯುವ ರಾಜ್ಯಗಳಲ್ಲಿ ಜೂನ್ ತಿಂಗಳಲ್ಲಿ ವಾಡಿಕೆಗಿಂತ ಶೇ.54ರಷ್ಟು ಕಡಿಮೆ ಮಳೆ ಸ್ವೀಕರಿಸಿವೆ ಎಂದು ವರದಿ ಆಗಿದೆ. ಇದು ಎರಡು ವರ್ಷದ ನಂತರದ ಪುನಃ ಭಾರತದಲ್ಲಿ ಕಡಿಮೆ ಮಳೆ ದಾಖಲಾತಿ ಕಾರಣವಾಗಿದೆ.

ಮುಂಗಾರಿನ ಮೇಲೆಯೇ ಶೇ.70ರಷ್ಟು ದೇಶದ ಆರ್ಥಿಕತೆ, ಕೃಷಿ ಅವಲಂಬಿತವಾಗಿದೆ. ಇದರ ಮೇಲೆ ದೇಶದ ನಿರೀಕ್ಷಿತ 2.7ಟ್ರಿಯಲಿಯನ್ ಡಾಲರ್ ಆರ್ಥಿಕತೆ ನಿಂತಿದೆ ಎನ್ನಲಾಗಿದೆ.

ನೈಋತ್ಯ ಮುಂಗಾರು ಎರಡು ದಿನ ಮುನ್ನವೇ (ಮೇ.29) ದಕ್ಷಿಣ ಕೇರಳ ರಾಜ್ಯದ ಕರಾವಳಿಯನ್ನು ಪ್ರವೇಶಿಸಿತ್ತು. ಇದಾದ ನಂತರ ಒಂದು ವಾರದ ವರೆಗೆ ಎಲ್ಲಿಯೂ ಮುಂಗಾರು ಅಷ್ಟಾಗಿ ಚುರುಕಾಗಿರಲಿಲ್ಲ. ನಂತರ ಹಲವು ರಾಜ್ಯಗಳಲ್ಲಿ ಆರ್ಭಟಿಸಿತು.

India records 8% rainfall shortage in June, lowest after 2 years


ಪೂರ್ವ ಮತ್ತು ಈಶಾನ್ಯ ಭಾರತ ಅಧಿಕ ಮಳೆ:

ಪೂರ್ವ ಮತ್ತು ಈಶಾನ್ಯ ಭಾರತ ರಾಜ್ಯಗಳಲ್ಲಿ ಜೂನ್ ತಿಂಗಳಲ್ಲಿ ವಾಡಿಕೆ (328.4ಮಿ.ಮೀ.) ಮಳೆಗಿಂತ ಅಧಿಕವಾಗಿ 400.9ಮಿ.ಮೀ.ನಷ್ಟು ಮಳೆ ದಾಖಲಾಗಿದೆ. ಇದು ವಾಡಿಕೆಗಿಂತ ಶೇ.22ರಷ್ಟು ಅಧಿಕ ಎನ್ನಬಹುದು. ಈ ರಾಜ್ಯಗಳ ಹೊರತು ಉಳಿದೆಲ್ಲ ರಾಜ್ಯಗಳಲ್ಲಿ ಕಡಿಮೆ ಮಳೆ ದಾಖಲಾಗಿದೆ.

ಕಡಿಮೆ ಮಳೆಯ ರಾಜ್ಯಗಳು:

ವಾಯುವ್ಯ ಭಾರತದ ರಾಜ್ಯಗಳ ಪ್ರದೇಶಗಳಲ್ಲಿ ಕಳೆದ ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇ. 12ರಷ್ಟು ಕಡಿಮೆ ಮಳೆ ದಾಖಲಾಗಿದೆ. ಅಂದರೆ ವಾಡಿಕೆ 78.1ಮಿ.ಮೀ. ಆಗಬೇಕಿತ್ತು, ಆದರೆ 68.6ಮಿ.ಮೀ. ಮಾತ್ರವೇ ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

India records 8% rainfall shortage in June, lowest after 2 years

ಇನ್ನು ದೇಶದ ಮಧ್ಯ ಭಾಗದ ರಾಜ್ಯಗಳಲ್ಲಿ ಶೇ.30ರಷ್ಟು ಕಡಿಮೆ ಮಳೆ ದಾಖಲಾದ ಬಗ್ಗೆ ವರದಿಯಾಗಿದೆ. ಈ ರಾಜ್ಯಗಳಲ್ಲಿ ಜೂನ್ ನಲ್ಲಿ ವಾಡಿಕೆ 170.3ಮಿ.ಮೀ. ಮಳೆ ಬೀಳಬೇಕಿತ್ತು. ಕಾರಣಾಂತರಗಳಿಂದ 118.9ಮಿ.ಮೀ.ಮಾತ್ರ ಮಳೆಯ ಸಿಂಚನವಾಗಿದೆ. ಅದೇ ರೀತಿ ದಕ್ಷಿಣ ಪರ್ಯಾಯ ದ್ವೀಪದಲ್ಲಿ ಕಳೆದ ತಿಂಗಳು ಬರಬೇಕಿದ್ದ ವಾಡಿಕೆ 161.0ಮಿ.ಮೀ.ಮಳೆ ಪೈಕಿ ಕೇವಲ 139.0ಮಿ.ಮೀ. ಅಷ್ಟೇ ಮಳೆ ದಾಖಲಾಗಿದ್ದು,ಇದರಿಂದಾಗಿ ಈ ಭಾಗದಲ್ಲಿ ಶೇ. 14ರಷ್ಟು ಕಡಿಮೆ ಮಳೆ ಬಿದ್ದಂತಾಗಿದೆ.

ಭಾರತಕ್ಕೆ ಜೂನ್ ನಲ್ಲಿ ಕಡಿಮೆ ಮಳೆ:

ನೈಋತ್ಯ ಮಾರುತಗಳು ಆರಂಭದಲ್ಲಿ ದೇಶದ ಕೆಲವೆಡೆ ಚುರುಕಾಗಿದ್ದು, ಇತರೆಡೆಗೆ ದುರ್ಬಲವಾಗಿದ್ದ ಪರಿಣಾಮ ಕಡಿಮೆ ಮಳೆಯಾಗಿದೆ. ಜೂನ್ ನಲ್ಲಿ ಭಾರತಕ್ಕೆ ವಾಡಿಕೆ ಪ್ರಕಾರ 165.3ಮಿ.ಮೀ.ಆಗಬೇಕಿತ್ತು. ಆದರೆ 152.3ಮಿ.ಮೀ. ಮಳೆ ದಾಖಲಾಗುವ ಮೂಲಕ ದೇಶಕ್ಕೆ ಶೇ. 8ರಷ್ಟು ಮಳೆ ಅಭಾವ ಸೃಷಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿದೆ.

India records 8% rainfall shortage in June, lowest after 2 years

ದೇಶಾದ್ಯಂತ ಉತ್ತಮ ಮಳೆಯ ನಿರೀಕ್ಷೆ:

ಈ ಬಾರಿ ದೇಶಾದ್ಯಂತ ಕರ್ನಾಟಕ ಮತ್ತು ಕೇರಳ ರಾಜ್ಯಗಳನ್ನು ಹೊರತುಪಡಿಸಿ ವಾಡಿಕೆಗಿಂತಲೂ ಅಧಿಕ ಮಳೆ ನಿರೀಕ್ಷೆ ಮಾಡಲಾಗಿದೆ. ಕಳೆದ ಐವತ್ತು ವರ್ಷಕ್ಕೆ ಹೋಲಿಕೆ ಮಾಡಿದರೆ ದಕ್ಷಿಣ, ಉತ್ತರ ಮತ್ತು ವಾಯುವ್ಯ ಭಾರತದಲ್ಲಿ ವಾಡಿಕೆಯಷ್ಟು ಮಳೆ ಆಗಬಹುದು. ಎಲ್ಲಿಯೂ ತೀವ್ರ ಮಳೆ ಕೊರತೆ ಆಗದು ಎಂದು ಭಾರತೀಯ ಹವಾಮಾನ ಇಲಾಖೆ ಮುಂಗಾರು ಆರಂಭದ ವೇಳೆಯಲ್ಲಿನ ತನ್ನ ಮಾನ್ಸೂನ್ ಮುನ್ಸೂಚನೆ ವರದಿಯಲ್ಲಿ ಹೇಳಿಕೊಂಡಿದೆ.

India records 8% rainfall shortage in June, lowest after 2 years

ಮಾನ್ಸೂನ್ ಮಳೆಯ ಒಟ್ಟು ನಾಲ್ಕು ತಿಂಗಳ ಪೈಕಿ ಭಾರತ ಮೊದಲ ಜೂನ್ ತಿಂಗಳಲ್ಲಿ ಶೇ.8ರಷ್ಟು ಕಡಿಮೆ ಮಳೆ ಸ್ವೀಕರಿಸಿದೆ. ಮುಂದಿನ ದಿನಗಳಲ್ಲಿ ಅಂದುಕೊಂಡಂತೆ ಉತ್ತಮ ಮಳೆ ಆದರೆ ದೇಶದಾದ್ಯಂತ ನಿರೀಕ್ಷಿತ ವಾಡಿಕೆಯಷ್ಟು ಇಲ್ಲವೇ ವಾಡಿಕೆಗಿಂತ ಅಧಿಕ ಮಳೆ ಆದಂತಾಗುತ್ತದೆ. ಒಂದು ವೇಳೆ ಹವಾಮಾನದಲ್ಲಿ ಅಷ್ಟಾಗಿ ಬದಲಾವಣೆ ಕಂಡು ಬಾರದಿದ್ದರೆ ಕಡಿಮೆ ಬೀಳಬಹುದು ಎನ್ನಲಾಗಿದೆ.

English summary
The state-run weather service reported that India received 8% less rainfall than average in June due to a lack of rain in the country's central regions. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X