ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಒಂದೇ ದಿನ 56,110 ಮಂದಿ ಕೊರೊನಾ ಸೋಂಕಿನಿಂದ ಚೇತರಿಕೆ

|
Google Oneindia Kannada News

ನವದೆಹಲಿ, ಆಗಸ್ಟ್ 12: ಭಾರತದಲ್ಲಿ ಒಂದೇ ದಿನ 56,110 ಮಂದಿ ಕೊರೊನಾ ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ.

ಭಾರತದ ಕೋವಿಡ್ ಚೇತರಿಕೆ ಪ್ರಮಾಣವು ಬುಧವಾರ ಶೇಕಡಾ 70ರಷ್ಟು ಏರಿಕೆಯಾಗಿದ್ದು, ದೇಶದಲ್ಲಿ ಇದುವರೆಗೆ 16,39,599 ಮಂದಿ ಮಹಾಮಾರಿಯಿಂದ ಚೇತರಿಸಿಕೊಂಡಿದ್ದಾರೆ.

ಭಾರತದಲ್ಲಿ 24 ಗಂಟೆಗಳಲ್ಲೇ 60963 ಮಂದಿಗೆ ಕೊರೊನಾವೈರಸ್ ಪಾಸಿಟಿವ್!ಭಾರತದಲ್ಲಿ 24 ಗಂಟೆಗಳಲ್ಲೇ 60963 ಮಂದಿಗೆ ಕೊರೊನಾವೈರಸ್ ಪಾಸಿಟಿವ್!

ರೋಗಿಗಳ ಆರೈಕೆಯ ವಿಧಾನದ ಆಧಾರದ ಮೇಲೆ ನಿರ್ಣಾಯಕ ರೋಗಿಗಳ ಪ್ರಮಾಣಿತ ಕ್ಲಿನಿಕಲ್ ನಿರ್ವಹಣೆಯೊಂದಿಗೆ ದಾಖಲೆಯ 56,110 ಮಂದಿ ಕಳೆದ 24 ಗಂಟೆಯಲ್ಲಿ ಚೇತರಿಸಿಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

India Records 56,110 Covid Recoveries In 24 Hours

ದೇಶದಲ್ಲಿ ಸಾವಿನ ಪ್ರಮಾಣವು 1.98ಕ್ಕೆ ಇಳಿದಿದೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಹೆಚ್ಚಿನ ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಆಸ್ಪತ್ರೆಗಳಿಂದ ಮತ್ತು ಮನೆಯ ಪ್ರತ್ಯೇಕತೆಯಿಂದ ಬಿಡುಗಡೆಯಾಗುವುದರೊಂದಿಗೆ, ಒಟ್ಟು ಚೇತರಿಕೆ 16 ಲಕ್ಷ ದಾಟಿದೆ ಮತ್ತು ಚೇತರಿಕೆಯ ಪ್ರಮಾಣವು ಶೇಕಡಾ 70.38 ರ ಗರಿಷ್ಠ ಮಟ್ಟವನ್ನು ತಲುಪಿದೆ ಸಚಿವಾಲಯ ತಿಳಿಸಿದೆ.

ಜುಲೈ ಮೊದಲ ವಾರದಲ್ಲಿ, ದೈನಂದಿನ ಸರಾಸರಿ ಚೇತರಿಸಿಕೊಂಡ ಪ್ರಕರಣಗಳು 15,000 ಆಗಿದ್ದು, ಆಗಸ್ಟ್ ಮೊದಲ ವಾರದಲ್ಲಿ 50,000 ಕ್ಕಿಂತ ಹೆಚ್ಚಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ 6,43,948 ಸಕ್ರಿಯ ಪ್ರಕರಣಗಳಿವೆ. ಸಕ್ರಿಯ ವೈದ್ಯಕೀಯ ಮೇಲ್ವಿಚಾರಣೆ. ಚೇತರಿಕೆಯಲ್ಲಿ ಸ್ಥಿರ ಮತ್ತು ನಿರಂತರ ಹೆಚ್ಚಳದೊಂದಿಗೆ, ಚೇತರಿಸಿಕೊಂಡ ರೋಗಿಗಳು ಮತ್ತು ಸಕ್ರಿಯ ಕೊವಿಡ್ -19 ಪ್ರಕರಣಗಳ ನಡುವಿನ ಅಂತರವು ಸುಮಾರು 10 ಲಕ್ಷವನ್ನು ತಲುಪಿದೆ ಎಂದು ಸಚಿವಾಲಯ ತಿಳಿಸಿದೆ.

ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಸರ್ಕಾರಗಳ ಸಂಘಟಿತ ಪ್ರಯತ್ನದಿಂದಾಗಿ ದಿನನಿತ್ಯದ ಸರಾಸರಿ ಚೇತರಿಕೆ ನಿರಂತರವಾಗಿ ಹೆಚ್ಚುತ್ತಿದೆ.

ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 60,000 ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲೇ 60963 ಜನರಿಗೆ ಕೊವಿಡ್-19 ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ.

ದೇಶದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು 23,29,639ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲೇ 834 ಜನರು ಕೊವಿಡ್-19 ಮಹಾಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆಯು 46091ಕ್ಕೆ ಏರಿಕೆಯಾಗಿದೆ.

English summary
India's COVID-19 recovery rate soared past 70 per cent on Wednesday with 16,39,599 people having recuperated from the disease so far in the country, while active cases comprise 27.64 pc of the total caseload, the Union Health Ministry said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X