• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ 24 ಗಂಟೆಯಲ್ಲಿ 49,310 ಹೊಸ ಕೋವಿಡ್ ಪ್ರಕರಣ

|

ನವದೆಹಲಿ, ಜುಲೈ 24 : ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ 49,310 ಹೊಸ ಕೋವಿಡ್ ಪ್ರಕರಣ ದೇಶದಲ್ಲಿ ದಾಖಲಾಗಿದೆ. 740 ಸೋಂಕಿತರು ಮೃತಪಟ್ಟಿದ್ದಾರೆ.

   40 ಸಾವಿರ ಸೈನಿಕರಿಗೆ ಶಸ್ತ್ರಾಸ್ತ್ರ ಕೊಟ್ಟು ಕಳುಹಿಸಿದ ಚೀನಾ | Oneindia Kannada

   ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತು ಮಾಹಿತಿ ನೀಡಿದೆ. ಗುರುವಾರ ಬೆಳಗ್ಗೆ 8 ರಿಂದ ಶುಕ್ರವಾರ ಬೆಳಗ್ಗೆ 8 ಗಂಟೆಯ ತನಕ 49,310 ಹೊಸ ಪ್ರಕರಣ ದಾಖಲಾಗಿದೆ. ಈ ಮೂಲಕ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12,87,945ಕ್ಕೆ ಏರಿಕೆಯಾಗಿದೆ.

   ಆಂಧ್ರಪ್ರದೇಶದಲ್ಲಿ ಒಂದೇ ದಿನ ದಾಖಲೆಯ ಕೊರೊನಾ ಕೇಸ್ ಪತ್ತೆ

   24 ಗಂಟೆಯಲ್ಲಿ ದೇಶದಲ್ಲಿ ಕೋವಿಡ್ ಸೋಂಕಿತ 740 ಜನರ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 30,601ಕ್ಕೆ ಏರಿಕೆಯಾಗಿದೆ. ದೇಶದಲ್ಲಿನ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 4,40,135.

   ಕೊರೊನಾ ವೈರಸ್‌ನಿಂದ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ 1 ಲಕ್ಷ ಪರಿಹಾರ

   ದೇಶದಲ್ಲಿಯೇ ಅತಿ ಹೆಚ್ಚು ಕೊರೊನಾ ವೈರಸ್ ಸೋಂಕಿನ ಪ್ರಕರಣ ಮಹಾರಾಷ್ಟ್ರದಲ್ಲಿ ದಾಖಲಾಗಿದೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 3,47,502. ತಮಿಳುನಾಡಿನಲ್ಲಿ 1,92,964 ಪ್ರಕರಣ, ದೆಹಲಿಯಲ್ಲಿ 1,27,364 ಒಟ್ಟು ಪ್ರಕರಣಗಳಿವೆ.

   ಕೋವಿಡ್ ಪರೀಕ್ಷೆಗೆ ನಕಲಿ ವಿಳಾಸ; 4,500 ಜನರ ಪತ್ತೆಗೆ ಮುಂದಾದ ಬಿಬಿಎಂಪಿ

   ಐಸಿಎಂಆರ್ ನೀಡಿರುವ ಮಾಹಿತಿ ಪ್ರಕಾರ 3,52,801 ಮಾದರಿಗಳ ಪರೀಕ್ಷೆಗಳನ್ನು ಗುರುವಾರ ನಡೆಸಲಾಗಿದೆ. ಇದುವರೆಗೂ ಒಟ್ಟು 1,54,28,170 ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದೆ.

   English summary
   According to health ministry report 49,310 new cases and 740 death reported in India in the last 24 hours. Total COVID - 19 positive cases number 12,87,945 including 4,40,135 active cases in the country.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X