ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ; 24 ಗಂಟೆಯಲ್ಲಿ 54,736 ಹೊಸ ಕೋವಿಡ್ ಪ್ರಕರಣ

|
Google Oneindia Kannada News

ನವದೆಹಲಿ, ಆಗಸ್ಟ್ 02: ಭಾರತದಲ್ಲಿ 24 ಗಂಟೆಯಲ್ಲಿ 54,736 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಈ ಮೂಲಕ ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 17 ಲಕ್ಷದ ಗಡಿ ದಾಟಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ಬೆಳಗ್ಗೆ ಈ ಅಂಕಿ ಅಂಶಗಳನ್ನು ನೀಡಿದೆ. ಶನಿವಾರ ಬೆಳಗ್ಗೆ 8 ರಿಂದ ಭಾನುವಾರ ಬೆಳಗ್ಗೆ 8 ಗಂಟೆ ತನಕ ದೇಶದಲ್ಲಿ 54,736 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದ್ದು, 853 ಜನರು ಮೃತಪಟ್ಟಿದ್ದಾರೆ.

ಚಿತ್ರದುರ್ಗದಲ್ಲಿ ಕೊರೊನಾ ಸೋಂಕು ಗೆದ್ದ 110ರ ಅಜ್ಜಿಚಿತ್ರದುರ್ಗದಲ್ಲಿ ಕೊರೊನಾ ಸೋಂಕು ಗೆದ್ದ 110ರ ಅಜ್ಜಿ

 India Recorded 54 Thousand COVID Cases In 24 Hours

ಭಾರತದಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 17,50,724ಕ್ಕೆ ಏರಿಕೆಯಾಗಿದೆ. ಇವುಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5,67,730. ದೇಶದಲ್ಲಿ ಇದುವರೆಗೂ ಮೃತಪಟ್ಟವರ ಸಂಖ್ಯೆ 37,364 ಆಗಿದೆ.

ಐವನ್ ಡಿಸೋಜಾಗೆ ಕೊರೊನಾ, ಡಿಕೆ ಶಿವಕುಮಾರ್‌ಗೆ ಫುಲ್ ಟೆನ್ಷನ್!ಐವನ್ ಡಿಸೋಜಾಗೆ ಕೊರೊನಾ, ಡಿಕೆ ಶಿವಕುಮಾರ್‌ಗೆ ಫುಲ್ ಟೆನ್ಷನ್!

ಭಾರತದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 5,67,730. ದೇಶದಲ್ಲಿ ಇದುವರೆಗೂ ಕೋವಿಡ್ ಸೋಂಕಿನಿಂದಾಗಿ 11,45,630 ಜನರು ಗುಣಮುಖರಾಗಿದ್ದಾರೆ.

ಚೀನಾ,ರಷ್ಯಾದ ಕೊರೊನಾ ಲಸಿಕೆ ಬಳಸುವುದಿಲ್ಲ ಎಂದ ಅಮೆರಿಕ ಚೀನಾ,ರಷ್ಯಾದ ಕೊರೊನಾ ಲಸಿಕೆ ಬಳಸುವುದಿಲ್ಲ ಎಂದ ಅಮೆರಿಕ

ರಾಜ್ಯಗಳ ಪಟ್ಟಿ : ಕೊರೊನಾ ವೈರಸ್ ಸೋಂಕಿತರು ಹೆಚ್ಚು ಇರುವ ರಾಜ್ಯಗಳಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. 4,31,719 ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ.

ತಮಿಳುನಾಡು 2,51,738 ಪ್ರಕರಣ, ಆಂಧ್ರ ಪ್ರದೇಶದಲ್ಲಿ 1,50,209, ದೆಹಲಿಯಲ್ಲಿ 1,36,716 ಮತ್ತು ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 1,29,287.

English summary
Union health ministry said that in last 24 hours 54,736 new Coronavirus cases recorded in India and total cases stand at 17, 50,724.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X